Home / Kannada Poetry

Browsing Tag: Kannada Poetry

ಇದು ಉತ್ತರಾಯಣದ ಪುಣ್ಯಕಾಲ ಚಳಿಯಿಂದೆದ್ದ ಸೂರ್‍ಯ ಮಗ್ಗಲು ಹೊರಳಿಸಿ ಹೊದಿಕೆ ಸರಿಸಿ ಬಿರುಸು ಹೆಜ್ಜೆ ಇಟ್ಟು ಉದ್ದುದ್ದ ಕೋಲು ಚೆಲ್ಲುತ ಬರುವ ಸಂಕ್ರಾಂತಿ ಕಾಲ- ಚಳಿಯ ಬೀಡಿ ಹೊರಗೆಸೆದು ಎಳೆ ಬಿಸಿಲು ಹೀರಲು ಹೊರಬಾಗಿಲು ಕಟ್ಟೆಗೆ ಬಂದು ಕೂಡುವ ಊರ...

ಬೆಳಕಿನ ಸೂರ್ಯ ಉದುರಿಸುತ್ತಾನೆ ಆವರ್ತ ಬೀಜಗಳು ಸಾಗರದಲಿ. ತೇಲಿ ಮತ್ತೆ ಹನಿ ಆಗಿ ಆಗಸಕ್ಕೇರಿ ಬಿಳಿ ಮೋಡಗಳು ತೇಲಿದ ನೀಲಿ ಆಕಾಶ. ಎಲ್ಲಾ ಗುಟ್ಟುಗಳ ನಿನ್ನಲ್ಲೇ ಇರಿಸಿಕೊಂಡು ಅವಸ್ಥೆಯಲಿ ಒಲೆಬೆಂಕಿ ಉರಿದು, ಬೀಜಗಳ ರೊಟ್ಟಿಗಳು ಹರಡಿದ ಬದುಕು. ಗಾ...

ಹಸಿರುಟ್ಟ ನೆಲದಲ್ಲಿ ಹೊಸತು ಬಗೆಯ ಕಂಡೆ ಹೊಸ ಬೆಳಕಿನ ಹಗಲಲ್ಲಿ ನಸು ನಾಚಿದ ಮೊಗವ ಕಂಡೆ || ಋತು ದರ್ಶನದಾ ನೆಲೆಯಲಿ ದಿವ್ಯತೆಯ ಭಾವವ ಕಂಡೆ ಸುಂದರ ಸ್ವಪ್ನಗಾನ ಲತಾಮಂಟಪದಲ್ಲಿ ನಳಿನ ಮುಖಿಯರ ನರ್‍ತನ ಕಂಡೆ || ಮೇಘಮಾಲೆಯ ಚಿತ್ತದೋಕುಳಿಯಲಿ ಚಿತ್ತ...

ಮಧುಮಧುರವಾದ ಹಿರಿಹಗಲು ಒಂದು ಬೆಳಗಿತ್ತು ಅವನ ಸುತ್ತು. ಹರ್ಷಾವತರಣ ಆನಂತ್ಯದಿಂದ ಪ್ರಭೆ ಬೀರಿದಂತೆ ಇತ್ತು. ಬಂಗಾರನಗೆಯ ಹೊಂಗಾವಲಲ್ಲಿ ಮೆರೆದಿಹವು ಸುಖದ ಬೀಡು, ಬಿಡುಗಡೆಯ ಪಡೆದ ಒಳಗಡೆಯ ಎದೆಯ ಹದಹದುಳವುಳ್ಳ ನಾಡು. ಆದೇವದೇವನಾ ಸೋಮರಸವು ಮೈಗಿಳ...

ತಾಯೇ, ಈ ಜನ್ಮ ನೀನಿತ್ತ ಭಿಕ್ಷೆ ಈ ಬದುಕು ನೀನಿತ್ತ ದೀಕ್ಷೆ|| ನೀ ಆಸೆಪಟ್ಟು ಹಡೆಯದಿದ್ದರೆ ನಾವೆಲ್ಲಿ ಇರುತಿದ್ದೆವು ಈ ಭೂಮಿ ಮೇಲೆ| ನೀ ಬೆಳೆಸಿ ಹರಸಿದ ಮೇಲೆ ನಾವು ನಿನ್ನಾಸೆಯಂತಾಗಿ ಸೇರಿಯೆವು ತರತರದ ನೆಲೆ|| ನಿನ್ನ ತ್ಯಾಗ ನಿಸ್ವಾರ್ಥ ಸೇವೆ...

ತಾಯಿ ಭಿಕ್ಷಾ ನೀಡವ್ವ ಮಂದಿ ಭಂಗಾ ನೋಡವ್ವ. ತೊಗಲು ಚೀಲದ ಬದುಕು ಕೆಟ್ಟೆ ಎಷ್ಟು ಕೊಟ್ಟರು ತುಂಬದ ಹೊಟ್ಟೆ ಅಲೆದು ಬೇಡಿ ಬಣ್ಣಗೆಟ್ಟೆ ನಾಯಿಗಿಂತ ಗೋಳುಪಟ್ಟೆ – ತಾಯಿ ಭಿಕ್ಷಾ ನೀಡವ್ವ. ಇಲ್ಲೆನಬೇಡವ್ವ, ಮುಂದಕ್ಕೆ ಹೋಗೆನಲೇಕವ್ವ ಒಂದು ಮಾತು, ಒಂದ...

ಚೂರಾದ ಕನ್ನಡಿ ಜೋಡಿಸಿ ಪ್ರತಿಬಿಂಬ ಕಾಣುವ ತವಕ ಹರಡಿದ ತುಂಡು ಕನಸುಗಳ ಹರಿದ ಚಿಂದಿಗಳ ಹೊಂದಿಸಿ ಎಲೆ ಚಂಚಿ ಹೊಲಿಯುವಾಸೆ ಬಿರಿದ ಹಾಳು ಗೋಡೆಗಳಲ್ಲಿ ಹುಟ್ಟಿದ ಹುಲ್ಲು ಗರಿಕೆ, ಹುತ್ತಗಳು ಬೆಳದಿಂಗಳ ಆ ಬಯಲಿನಲಿ ಲಾಂದ್ರದ ಮಂದ್ರ ಬೆಳಕು ಚಂದ್ರನಿಗ...

ಮೂಡಲ ಗಿರಿಯಪ್ಪ ಮೂಡಿ ಬಂದಾಗ ಬೆಟ್ಟದ ಬಣ್ಣವೆ ಬಂಗಾರ ಬೆಟ್ಟದ ಬಣ್ಣ ಬಂಗಾರ ಎಂದಾನ ತಾನ ತಂದನಾ ತಂದನಾನ ಕೋಲೂ ಕೋಲೆನ್ನ ಕೋಲೇ ರನ್ನದಾ ಚಿನ್ನದಾ ಕೋಲೂ ಕೋಲೆನ್ನ ಕೋಲೇ ಆ ಬಣ್ಣದಾ ಕೋಲೂಕೋಲೆನ್ನ ಕೋಲೇ ಮೂಡಲ ಗಿರಿಯಪ್ಪ ಮೂಡಿ ಬಂದಾಗ ಮೋಡದ ಬಣ್ಣವೆ ...

ದ್ವಾ ಸುಸರ್‍ಣಾ ಯುಯುಜಾ….. ಉಪನಿಷತ್ತಿನ ಶ್ಲೋಕದ ಅವಿನಾಭಾವದ ಹಕ್ಕಿಗಳೇ ಈ ಸಾಹಿತ್ಯ ಮತ್ತು ಧರ್ಮ ಅದನ್ನು ಬಿಟ್ಟು ಇದಿಲ್ಲ ಇದನ್ನು ಬಿಟ್ಟು ಅದಿಲ್ಲ ಬೀಜ ವೃಕ್ಷ ನ್ಯಾಯದಂತೆ ಗುದ್ದಾಡಲಿಲ್ಲ ಇವು ಒಂದನ್ನೊಂದು ಒರಗಿ ನಿಂತವು ಗುದಮುರಿಗೆ ...

ಏನೆ? ಏನೆ? ಏನದು? ಬಾತಿದೆ? ಕೊಳೆತಿದೆ? ಮೇಗಡೆ ಹಾರುತ್ತಿದೆ ಡೇಗೆ ನರಿಯೊಂದು ಊಳಿಡುತ್ತಿದೆ ನಾಯೊಂದು ಹೊಂಚು ಹಾಕಿದೆ ಕಾಗೆಗಳು ತಾರಾಡುತ್ತಿವೆ ಇರುವೆಗಳು ದಂಡೆತ್ತಿವೆ ನೊಣಗಳು ಗುಂಯ್‌ ಗುಡುತ್ತಿವೆ ಮಿಜಿ ಮಿಜಿ ಮಿಜಿ ಮಿಜಿ ಮೂಗು ಮುಚ್ಚಿಕೊಂಡರ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...