ಬಾರೇ… ಬಾರೇ….
ನನ್ನೊಲವ ಗೆದ್ದ ನೀರೆ|
ಬಾರೇ ಬಾರೇ
ನನ್ನ ಹೃದಯ ಕದ್ದ ನೀರೆ|
ನೀರೆ ನೀರೇ
ನೀ ಚೆಲುವಲಿ ಮಿಂದ ಅಪ್ಸರೆ||

ತೋರೆ ತೋರೇ
ನೀಕರುಣೆಯಾ ತೋರೇ|
ಒಲವಲಿ ನೀ ಬಂದು ನನ್ನನು ಸೇರೆ
ನೀನೇ ನನಗೀಗ
ಮನದಲ್ಲಿ ಮಿನುಗುವ ತಾರೆ||

ಸೆಳೆದಿರುವೆ ನೀ ನನ್ನನೇ
ಸೆರೆಹಿಡಿದಿರುವೆ ನಾ ನಿನ್ನನೇ|
ಬೇಕೆನಿಸುತಿದೆ ನಿನ್ನಾಸರೆ
ದಿನವಿಡಿ ನಿನ್ನದೇ ಉಪಾಸನೆ||

ತಾಳಲಾರೆ ಈ ವೇದನೆ
ಬರಿ ನಿನ್ನದೇ ಆಲಾಪನೆ
ಮಾಡುತಿರುವೆ ನಿವೇದನೆ
ನೀಡು ನೀ ನಿನ್ನ ಅನುಮೋದನೆ||
*****