ಗುಲಾಬಿಯ ವಾಸನೆ ಹಿಡಿಯಹೋಗಿ
ಮೂಗೊಳಗೆ ಮುಳ್ಳು ಮುರಿದು
ಅದೇ ಮೂಗುತಿಯೆಂದು
ಮುಟ್ಟಿ ಮುಟ್ಟಿ ನೋಡುತ್ತ
ಕನ್ನಡಿ ಮೀರಿ ಮುಖ ಹಿಗ್ಗಿಸುತ್ತ
ಉರುಹೊಡೆದ ಇತಿಹಾಸ ಹೇಳುತ್ತ
ವರ್‍ತಮಾನದ ಮಾನ ಕಳೆಯುತ್ತ
ಕನ್ನಡಿಗೆ ಕಲ್ಲು ಬೀಳುತ್ತದೆ.
ಆತ್ಮ ಚೂರುಚೂರಾಗುತ್ತದೆ.
*****
ಗುಲಾಬಿಯ ವಾಸನೆ ಹಿಡಿಯಹೋಗಿ
ಮೂಗೊಳಗೆ ಮುಳ್ಳು ಮುರಿದು
ಅದೇ ಮೂಗುತಿಯೆಂದು
ಮುಟ್ಟಿ ಮುಟ್ಟಿ ನೋಡುತ್ತ
ಕನ್ನಡಿ ಮೀರಿ ಮುಖ ಹಿಗ್ಗಿಸುತ್ತ
ಉರುಹೊಡೆದ ಇತಿಹಾಸ ಹೇಳುತ್ತ
ವರ್‍ತಮಾನದ ಮಾನ ಕಳೆಯುತ್ತ
ಕನ್ನಡಿಗೆ ಕಲ್ಲು ಬೀಳುತ್ತದೆ.
ಆತ್ಮ ಚೂರುಚೂರಾಗುತ್ತದೆ.
*****