ಅಧ್ಯಾಯ ಹದಿನೆಂಟು ಕನ್ನಡ ಚಿತ್ರರಂಗಕ್ಕೂ ಹರಿಶ್ಚಂದ್ರನ ಬದುಕನ್ನು ಕುರಿತ ಚಿತ್ರಗಳಿಗೂ ವಿಚಿತ್ರವಾದ ನಂಟು ಇರುವಂತೆ ಕಾಣುತ್ತದೆ. ೧೯೪೩ರಲ್ಲಿ ಸುಬ್ಬಯ್ಯ ನಾಯ್ಡು ಮತ್ತು ಇತರರು ಎ.ವಿ.ಎಂ. ಸಂಸ್ಥೆಯ ನೆರವಿನೊಡನೆ ತಯಾರಿಸಿದ ಕನ್ನಡದ ‘ಸತ್ಯ ಹರಿಶ್ಚಂದ್ರ’ ಮೊಟ್ಟ ಮೊದಲ ಬಾರಿಗೆ ತಮಿಳು ಭಾಷೆಗೆ ಡಬ್ ಆಯಿತು. ...

ಕಂದೀಲಿನ ಬೆಳಕಿನಲಿ ಬೊಚ್ಚು ಬಾಯಿ ಮುದುಕಿಯ ಕನವರಿಕೆ, ಕದಲಿಕೆ ಒಂದೊಂದು ನೆರಿಗೆಯಾಳದಲೂ ಒಂದೊಂದು ನೆನಪು ಒಂದಿಷ್ಟು ಪುಳಕ ಸಾಕಷ್ಟು ದುಗುಡ ಆಳ ಆಳಕ್ಕಿಳಿದಂತೆಲ್ಲ ನೆನಪು ಬೇರುಗಳಿಳಿಸಿದ ಕಿತ್ತೆಸೆಯಲಾರದ ಹುಳ ಕೊರೆದ ಕಾಂಡ ಮುಸ್ಸಂಜೆಯ ಇಳಿ ಹೊತ...

ಸದಾ ಕಿಚಿಪಿಚಿಗುಡುವ ಗೊಂದಲದ ಗುಬ್ಬಿ ಗೂಡು ಕೇಳುವುದಿಲ್ಲ ಒಂದಾದರೂ ಸುಮಧುರ ಹಾಡು ಬಿಡುವಿಲ್ಲದೇ ತುಯ್ಯುವ ಒಂದು ವೀಣೆ ನಿರಂತರ ಕಾಡುವುದೇಕೋ ಕಾಣೆ! ಮಧ್ಯಂತರದಲಿ ನಿಂತ ನಾನು-ನನ್ನಂತವರು ದವಡೆಯ ಕೊನೆಯ ಹಲ್ಲುಗಳನ್ನು ಅರ್ಧವಷ್ಟೇ ಕಂಡವರು. ಹಳತು...

ಭಾರತ ದೇಶದ ಸ್ವಾತಂತ್ರ್ಯೋತ್ಸವದ ಸುವರ್ಣ ಹಬ್ಬವ ಮಾಡೋಣ ಬನ್ನಿರಿ ಗೆಳೆಯರೆ ದೇಶ ಬಾಂಧವರೆ ಸ್ವಾತಂತ್ರ್ಯವ ಕೊಂಡಾಡೋಣ ತಿಲಕ್ ಗೋಖಲೆ ಮಹಾತ್ಮ ಗಾಂಧಿ ಸುಭಾಷ್ ವಲ್ಲಭ ಜವಾಹರ ಸಾವಿರ ಸಾವಿರ ದೇಶಭಕ್ತ ಜನ ಹೋರಾಡುತ ಗಳಿಸಿದಾ ವರ ಎಷ್ಟೋ ಜನ ಪ್ರಾಣಗಳನ...

‘ಕನ್ನಡದ ಶೇಕ್ಸ್‌ಪಿಯರ್ ಯಾರು? ಎನ್ನುವ ಪ್ರಶ್ನೆ ಕನ್ನಡ ನಾಡುನುಡಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿನ ಕಠಿಣ ಪ್ರಶ್ನೆಗಳಲ್ಲೊಂದು. ಈ ಪ್ರಶ್ನೆಗೆ ಸ್ಪರ್ಧಿಗಳು ತಲೆ ಕೆಳಗೆ ಹಾಕುವುದೇ ಹೆಚ್ಚು. ಆ ವ್ಯಕ್ತಿ ಆಧುನಿಕ ಕನ್ನಡ ರಂಗಭೂಮಿಗೆ ಕಸುವು ತು...

ಗ್ರೀಸ್ ಸಖಿ ಹಿಮಗಲ್ಲಲಿ ಕೊರೆದ ಸುಂದರಿ ಲಿಪ್ ಸ್ಟಿಕ್ ತುಟಿತೆರೆದು ಬಳುಕಿ ಬಿನ್ನಾಣವಾಗಿ ಡ್ರಿಂಕ್ಸ್ ಬೇಕಾ…. ಹೆಸರುಗಳೇನೇನೋ ಹೇಳಿ ಗ್ಲಾಸ್ ಹಿಡಿದೇ ಇದ್ದಳು. ಬೆಚ್ಚಿಬೆರಗಾಗಿ ತಲೆ ಅಲುಗಾಡಿಸಿ ಕೇವಲ ತಂಪುನೀರು ಕೇಳಿದರೆ ತುಳು ತುಳುಕಿ ...

ಕೂತಲ್ಲಿ ಕೂಡಲಾರದ ನಿಂತಲ್ಲಿ ನಿಲಲಾರದ ಮನವೀಗ ಕಲ್ಲು ಬಿದ್ದ ಕೊಳ ಅವನನ್ನು ಹಾಗೆ ನೋಡಿದ್ದೇ ತಪ್ಪಾಯಿತೆ? ಆ ಕಣ್ಣುಗಳಲ್ಲಿ ಚಾಕು ಚೂರಿಗಳಿದ್ದದ್ದು ನನಗಾದರೂ ಏನು ಗೊತ್ತಿತ್ತು…? ಗೋಡೆಗಳು ಕೇಳಿಸಿಕೊಳ್ಳುವುದು ಹಲ್ಲಿಗಳು ಮಾತನಾಡುವುದು ಅ...

ಈ ಆಗಸ ಈ ತಾರೆ – ಜುಳು ಜುಳನೆ ಹರಿವ ಜಲಧಾರೆ ಮುಗಿಲ ಮಲೆಯೆ ಸಾಲೇ-ಆಹಾ ಯಾರದೊ ಈ ಬಗೆ ಲೀಲೆ! ಬೆಳಗ ಕಾಯ್ದ ಹಿಮವೋ – ಹಿಮವ ಮೆಲ್ಲನೆ ನೇಯುವ ತಮವೋ ತಮವ ಕಳೆದು ಹಿಮ ಓಡಿಸುವ ಬೆಚ್ಚನೆ ಬಿಸಿಲಿನ ಕ್ರಮವೋ! ಹೆಣ್ಣಿನ ಕಣ್ಣಿನ ದೀಪ ಉರಿಸ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....