
ಹೊಕ್ಕೆ ನಾನು ಅಚಲಪ್ರಸನ್ನ ಪ್ರಾಸಾದಸೌಧ ಒಂದು. ಸ್ಪಟಿಕಮುಕುರ ಪ್ರತಿಬಿಂಬ ಎಂಬ ತೆರ ಕಂಡೆ ದಿನ್ಯ ಅಂದು. ನಾಗಮೋಡಿಯಲಿ ಏರುತಿತ್ತು ಏನೋ ಪುರಾಣಶಕ್ತಿ, ಯುಗದಜುಗದ ತಿರುಪಣಿಯ ದಾರಿಯನು ಸಾವಕಾಶ ಹತ್ತಿ. ಜನ್ಮಮರಣದಜ್ಞಾನಬಂಧ ಬೆಳಕಾಗಿ ಬಿಡಿಸಿಕೊಂಡು...
ಶ್ರೀ ಮಹಾತ್ಮರ ರಾಣಿ ಕಸ್ತೂರಿಮಾನಿನೀ ಓ ಜಗತ್ಸಂಹಿನೀಂ – ಭಾರತತಪಸ್ವಿನೀ ಮಲ್ಲಿಕಾಸ್ಮಿತವದನಿ – ಸುತ್ಯಾಗದರ್ಶಿನೀ ಲೋಕದಾಸೆಯ ಬಿಟ್ಟು – ಪ್ರೇಮಸೂರೆಯ ಕೊಟ್ಟು ಸರ್ವಾತ್ಮ ಲೀಲೆಯೊಳು – ಧರ್ಮ ಕವಚವ ತೊಟ್ಟು ಸತ್ಯದರ್ಶ...
ಹೋಳಿ ಹಬ್ಬ ಬಂದಿದೆ ರಕ್ತದೋಕುಳಿಯ ಚೆಲ್ಲುತ ಕೊಚ್ಚಿ ಹಾಕಿದ ಅಸಂಖ್ಯಾತ ಮನುಜರ ಗುಂಡಿ ಗುಂಡಿಗಳಲ್ಲಿ ಎಸೆದ ಹೆಣ ರಾಶಿ ಹರಿದ ರಕ್ತಕ್ಕೆ ನೆಲದ ಒಡಲು ಕೆಂಪಾಗಿದೆ ಅಂದು ಬಲಿಯಾದ ಬಸುರಿಯರು ಭೂಮಿಗಿನ್ನೂ ಬಾರದ ಹಸುಳೆಯನ್ನು ಸಿಗಿದು ತ್ರಿಶೂಲಕ್ಕೆ ಸಿ...
ಎಷ್ಟೊಂದು ಚಳಿ ಈ ಕಂಬಳಿ ಹುಳಕೆ ಕಂಬಳಿ ಹೊದ್ದೇ ಹೊರಡುವುದು ಮಳೆಗಾಲವಾಗಲಿ ಬೇಸಿಗೆಯಾಗಲಿ ಕಂಬಳಿಯಿಲ್ಲದೆ ಹೋಗುವಂತಿಲ್ಲ ಎಷ್ಟೊಂದು ಶೀತ ಈ ಬಸವನ ಹುಳಕೆ ಮೈ ಕೈ ಶೀತ ಕೊಂಬುಗಳು ಶೀತ ಯಾವಾಗಲೂ ನೆಗಡಿ-ಇದಕೆ ಚಳಿಯಾಗಲಿ ಸೆಕೆಯಾಗಲಿ ನಡೆದಲ್ಲೆಲ್ಲಾ ನ...
ನನ್ನ ಅಜ್ಜನ ಕುಲ ಯಾವುದೋ ಅವನ ಅಜ್ಜನ ನೆಲೆ ಯಾವುದೋ ನನ್ನ ಅಪ್ಪನ ಸೆಲೆ ಯಾವುದೋ ನಾನೇನು ಬಲ್ಲೆ? ನಾನು ಕಸಿ ಮಾವಿನ ಮರ ಕಡಲಂಥ ಹೆಣ್ಣು ತೆರೆಯಣ್ಣ…… ಕಣ್ಣು! *****...
ಕಾಲನ ಗಳಿಗೆ ಬಟ್ಟಲನ್ನು ಕುಡುಗೋಲನ್ನು ಕೈಯಲ್ಲಿ ಹಿಡಿದಿರುವ ಚೆಲುವನೇ ನೀನಿನ್ನು ಮುಂಚಿನಂತಲ್ಲ ಕರಗುತ್ತ ಬೆಳೆದಿರುವೆ, ಸುತ್ತಲಿನ ಗೆಳೆಯರೆಲ್ಲರ ಕೊಡವಿಕೊಂಡಿರುವೆ. ಅದು ನಿನ್ನ ಸವಿಯಿಚ್ಛೆ ಬಲಿತುದನು ತೋರುವುದು. ಎಲ್ಲ ಗೊಂದಲವನು ನಿಯಂತ್ರಿಸಬ...













