ಶೈಲಮಂದಿರದಲ್ಲಿ ಮಂಡಿಸಿದ್ದಳು ದೇವಿ ಮತ್ತಾವ ತೊಡಕಿಗೋ? ಚಿ೦ತಿಸುತ ಕುಳಿತು. ಮಂದಿರದಲೆತ್ತಲು ಪ್ರಾಂಗಣದ ಸುತ್ತಲು ತುಂಬಿತ್ತು ಕತ್ತಲು ಕದ್ದು ನಡೆದು. ಮಿನಿಗಿತು ಸೊಡರು ಮೂರ್ತಿಮುಂದೆ ದೇವಿಮೋಗದೊಲುಮೆ ಚಲುವ ಹರಿಸಿ. ಯೋಜನದ ಮುಗಿಲಿನಾ ಚಲುವಿನಾ ತಾರೆ! ಮಿನಿಗಿದಳು ಸ್ವರ್ಣದಲ್ಲಿ ಪಙ್ತಿಗೂಡಿ. ವಿಜನಾಲಯದಿ ...

ಇರುವೆಗಳು ಸಾಲು ಸಾಲಾಗಿ ಧಾನ್ಯ ಹಿಡಿದು ಹೋಗುತ್ತಿದ್ದವು. ಒಂದು ತುಂಟ ಇರುವೆ ಸಾಲಿನಿಂದ ಮುಂದೆ ಹೋಗಲು ಯತ್ನಿಸಿತು. ನಾಯಕ ಇರುವೆ ದಂಡಿಸಿ ಹೇಳಿತು “ನೀನು ಮನುಷ್ಯರಂತೆ ನಿಯಮ ಬಾಹಿರವಾಗ ಬೇಡ. ಅವರಂತು ನಮ್ಮಿಂದ ಶಿಸ್ತಿನ ಪಾಠ ಕಲಿಯಲಿಲ್ಲ...

ದಟ್ಟ ಮೆಳೆಯ ಬದುವಿನಲಿ ಅಂಡಲೆಯುತ್ತಿದ್ದ ಗೆಳತಿಗೆ ಎಲ್ಲೋ ಮರದ ತುದಿಯಲಿ ಪಕ್ಕನೆ ಕೈಸಿಕ್ಕ ಕೆಂಪು ಹಸುರಿನ ಬೋರಂಗಿ ಸಾಹಸದಿಂದ ಹಿಡಿದು ತಂದ ಮದರಂಗಿ. ಅದು ಪುರ್ರನೆ ಹಾರಿ ಮೈಯಲ್ಲಾ ರೋಮಾಂಚನ ಪುಟ್ಟ ಅಂಗೈತುಂಬ ಚೆಲುವಿನ ಚಿತ್ತಾರ ಸಾವಿರ ಸೂರ್ಯ ...

ಅಧ್ಯಾಯ – ೬ ನಾನು ಕಪ್ಪಗಿದ್ದೇನೆ, ನನ್ನ ತೆಂಗಿಯರೆಲ್ಲ ಬೆಳ್ಳಗಿದ್ದಾರೆ. ಬೇರೆಯವರು ಇರಲಿ ನನ್ನ ಅಪ್ಪ ಅಮ್ಮನೇ ನನ್ನನ್ನು ತಿರಸ್ಕಾರದಿಂದ ನೋಡುತ್ತಾರೆ. ನಾನು ಉಳಿದವರಿಗಿಂತ ಹೆಚ್ಚು ಕೆಲಸ ಮಾಡಿಕೊಡುತ್ತೇನೆ, ಆಟೋಟಗಳಲ್ಲಿ ಪ್ರೈಜ್‌ಗಳನ್...

ನಾನು ಕಾಯ್ದೆ ಬರಲಿಲ್ಲ ಅವಳು ನಾನೇ ಹೋದೆ ಕರೆಯಲಿಲ್ಲ ಒಳಗವಳು ಕರೆದರವರು ತೋರಿಸಿದರವರು ಹೇಳಿದರವರು ಮುಖ ಮುಚ್ಚಿದರು ಈಗವಳಿಗೆ ೩ ತಿಂಗಳಾಗಿತ್ತಂತೆ. *****...

ದೊಡ್ಡ ದೊಡ್ಡ ಮರಗಳು ನೀಡುವ ಹಣ್ಣುಗಳು ಹಲಸು ಮಾವು ಉಳಿಯಲಾರವು ಒಂದೆರಡು ವಾರಗಳು ಸಣ್ಣ ಸಣ್ಣ ಪೈರುಗಳು ನೀಡುವ ಕಾಳುಗಳು ರಾಗಿ ಜೋಳ ಧಾನ್ಯಗಳು ಉಳಿಯುತ್ತವೆ ಹತ್ತಾರು ವರ್‍ಷಗಳು *****...

ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ ಇದು ನಿಜವಾಗಿಯೂ ನನ್...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...