ನಿನಗೆ ಒಂದು ಮಾತು ಹೇಳಬೇಕು.
ಅದು ಏನು ಅಂತ ನಿನಗೆ ಗೊತ್ತಿದೆ
ಅಂತ ಅಂದು ಕೊಂಡಿದ್ದೇನೆ.
ಅದನ್ನು ನಿನಗೆ ಯಾಕೆ ಹೇಳಲ್ಲ ಅಂದರೆ
ಅದನ್ನೆಲ್ಲ ನೀನು ನನಗೆ ಕೊಟ್ಟಿದ್ದೀ.
ನೀನು ಕೊಟ್ಟಿರುವಷ್ಟು ಅದನ್ನು ನಾನು ನಿನಗೆ
ಕೊಡಲು ಆಗಲ್ಲ ಅಂತ ನನಗೆ ಚೆನ್ನಾಗಿ ಗೊತ್ತು.
ಆದರೆ ಯಾಕೆ ಕೊಡಬೇಕು ಹೇಳು ?
ನೀನೇನು ನನ್ನ ಕೊಡು ಅಂತ ಕೇಳಲ್ಲ.
ಅದಕ್ಕೇ ಅಂತ ಕಾಣುತ್ತೆ ನೀನು ಅಷ್ಟು ದೊಡ್ಡವಳಾಗಿ
ನಾನು ಅಷ್ಟು ಚಿಕ್ಕವನಾಗಿ ನನಗೆ ಕಾಣುವುದು. ನೀನು
ನನಗೆ ಕೊಟ್ಟದ್ದನ್ನೆಲ್ಲಾ ಪಡೆದೂ
ಪಡೆದು ಪಡೆದು ನಾನು ತಪ್ಪಾಗಿ ಬಿಟ್ಟಿದ್ದೇನೆ.
ನನಗೆ ಆಗುವುದು ಅನ್ನಿಸುವುದು ಎಲ್ಲ ನಿನಗೆ ಗೊತ್ತು
ನೋಡು, ಮಗುವಿನ ಹಾಗೆ
ತೊದಲು ಹೆಜ್ಜೆ ಇಟ್ಟು ಬಂದು,
ತಲೆಗೆ ಎರೆದು ಕೊಂಡು ಬಿಸಿಲಿಗೆ
ಬೆನ್ನು ಮಾಡಿ ಕುಳಿತಿರುವ
ನಿನ್ನ ತೊಡೆ ಹತ್ತಿ ತಬ್ಬಿಕೊಂಡು
ನಿನ್ನ ಕೆನ್ನೆಗೆ ಮುತ್ತಿಡುತ್ತೇನೆ
ಅದೇನೇ ಎಲ್ಲಾ ಅಂದುಕೋ, Please
*****