ವಿಮಾನ ನಿಲ್ದಾಣಗಳು

ಅರಬ್ಬರಿಂದ ಬೆಳೆಯುತ್ತಿರುವ ಜೆಡ್ಡಾ-ರಿಯಾದ್-ದಹರಾನ್ ನಗರಗಳಿಗೆ ಹೊಸ ವಿಮಾನ ನಿಲ್ದಾಣಗಳ ಬೃಹತ್ ಯೋಜನೆಗಳನ್ನು ವಿದೇಶೀ ಕಂಪನಿಗಳು ಚೆನ್ನಾಗಿ ನಿರ್ವಹಿಸಿಕೊಟ್ಟಿವೆ.

ಮಧ್ಯಪೂರ್ವ ರಾಷ್ಟ್ರಗಳಲ್ಲಿ (ಮಿಡಲ್ ಈಸ್ಟ್) ಸೌದಿ ಅರೇಬಿಯಾ ದೇಶವೇ ಮೊದಲ ಸಣ್ಣ ವಿಮಾನಗಳನ್ಗು (ಜೆಟ್ ಏರ್‌ಕ್ರಾಫ್ಟ್) ಹೊಂದಿದ್ದು (1963ರಲ್ಲಿ) ಎಂದು ಪ್ರತೀತಿ. ಸೌದಿ ರಾಜ ಅಬ್ದುಲ್ ಅಜೀಜ್ ತನ್ನ ಸ್ವಂತ ಪ್ರಯಾಣ- ಕ್ಕೋಸ್ಕರ ಸಣ್ಣ ಏರ್‌ಕ್ರಾಫ್ಟ್ ಇಟ್ಟದ್ದು ಕೇಳಿರುತ್ತೇವೆ. 1963ರವರೆಗೆ ಸೌದಿಯಲ್ಲಾಗಲೀ ನೆರೆಯ ಕೊಲ್ಲಿ ರಾಷ್ಟ್ರ -ಗಳಲ್ಲಾಗಲೀ ವಿಮಾನಯಾನ ಶುರುವಾದದ್ದೇ ಇಲ್ಲವಂತೆ. ಇಂತಹ 1963ರ ಸಮಯದಲ್ಲಿ ಕಟ್ಟಿದ ಸಣ್ಣ ವಿಮಾನ ನಿಲ್ದಾಣಗಳಲ್ಲಿ ಬರಬರುತ್ತ ಪ್ರವಾಸಿ ಗರ+ಯಾತ್ರಿಕರು ಹೆಚ್ಚಾಗತೊಡಗಿದರು. ಒಂದು ಅಂದಾಜಿನ ಪ್ರಕಾರ ಆಗ ರಿಯಾದ್‌ ನಲ್ಲಿ 1,94,000 ಜೆಡ್ಡಾದಲ್ಲಿ 1,50,000, ದಹರಾನಲ್ಲಿ 33000, ಸ್ವದೇಶಿಯ ಹಾಗೂ ನೆರೆಹೊರೆಯ ಪ್ರಯಾಣಿಕರು ಪ್ರತಿವರ್ಷ ಬಂದಿಳಿಯತೊಡಗಿದರು. ಹೀಗೆ ಪ್ರಯಾಣಿಕರ ಸಂಖ್ಯೆ ಪ್ರತಿವರ್ಷ ಹೆಚ್ಚಾದಂತೆ ವ್ಯವಸ್ಥೆಯಲ್ಲಿ ಕೊರತೆ ಅನಿಸತೊಡಗಿತಂತೆ.

1973ರಲ್ಲಿ ಸೌದಿಯಲ್ಲಿ ಇಂಧನ (ಪೆಟ್ರೋಲ್‌)ದಿಂದ ಹಣದ ಪ್ರವಾಹ ಏರತೊಡಗಿತ್ತು. ದೇಶದ ಭವಿಷ್ಯಕ್ಕೋಸ್ಕರ ಹಣ ವಿನಿಯೋಗಿಸುವ ಪಂಚವಾರ್ಷಿಕ ಯೋಜನೆಗಳನ್ನು 1970ರಲ್ಲಿ ಕೈಗೆತ್ತಿಕೊಂಡರು. ಈ ಯೋಜನೆಯಲ್ಲಿ ಇಡೀ ಸೌದಿ
ನಾಡನ್ನು. ಸುಧಾರಣಾ ಪಥದಲ್ಲಿ ಕ್ಷಿಪ್ರವಾಗಿ ಸಾಗಿಸಲು ಯೋಜಿಸಿಕೊಂಡರು. ಇಂತಹ ಸಾಕಷ್ಟು ಯೋಜನೆಗಳಲ್ಲಿ ವಿದೇಶಿಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಅವರಿಗೊಂದು ಮಾನ್ಯತೆ ಕೊಟ್ಟು ತಮ್ಮ ದೇಶಕ್ಕೊಂದು ಒಳ್ಳೇ ಯೋಜನೆ ರೂಪಿಸಿ ಕೊಂಡರು. ಇಂತಹ ಯೋಜನೆಗಳಲ್ಲಿ ಪ್ರವಾಸಿಗರ ಅನುಕೂಲತೆಗೋಸ್ಕರ ಮೊದಲು
ಕೈಗೆತ್ತಿಕೊಂಡಿರುವ ಕಾರ್ಯವೇ ಈ ನವವಿಮಾನ ನಿಲ್ದಾಣಗಳ ನಿರ್ಮಾಣ ಕಾರ್ಯ.

ಈ ಕಾರ್ಯದಲ್ಲಿ ಜೆಡ್ಡಾಗೆ ಮೊದಲನೆಯ ಆದ್ಯತೆ ದೊರತದ್ದು ಸಹಜವೇ. ನಾವು 1980ರ ಜನವೆರಿಯಲ್ಲಿ ಜೆಡ್ಡಾದಲ್ಲಿಯ ಊರ ಹೊರಗಿನ ಅಲ್‌ಕಂದಾರಾ ಎನ್ನುವಲ್ಲಿ ಸಣ್ಣ ಹಳೇ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದೆವು. ಹಾಜ್‌ಯಾತ್ರಿಕರೂ ಕೂಡಾ ಇಲ್ಲಿಯೇ ಬಂದಿಳಿಯಬೇಕಾಗುತ್ತಿತ್ತು. ಇದಕ್ಕೂ ಮೊದಲೆಲ್ಲ ಯಾತ್ರಿಕರು ಕೆಂಪು   ಸಮುದ್ರದಲ್ಲಿ ಹಡಗಿನಿಂದ ಬಂದು ಜೆಡ್ಡಾ ಬಂದರಲ್ಲಿ ಇಳಿಯಬೇಕಾಗುತ್ತಿತ್ತು. ಅಷ್ಟೊಂದು ಹಣವಂತರಲ್ಲದವರು ಹಾಗೆ ಬರುತ್ತಾರೆ.

ಈ ಕಾರಣದಿಂದಾಗಿ ಪಟ್ಟಣಗಳ ಸುಧಾರಣೆ, ಯಾತ್ರಿಕರೆಡೆಗೆ ಗಮನಕೊಟ್ಟು ಜೆಡ್ಡಾದಲ್ಲಿ ದೊಡ್ಡ ವಿಮಾನ ನಿಲ್ದಾಣ ಕಟ್ಟಲು ನಿರ್ಧರಿಸಿಯೇಬಿಟ್ಟರು. ಜೆಡ್ಡಾದಿಂದ ಸುಮಾರು 25 ಕಿ.ಮೀ ಅಂತರದಲ್ಲಿ ಸಮೀಪ ಒಳ್ಳೆಯ ಸ್ಥಳ. ಭವಿಷ್ಯದಲ್ಲಿ ಎತ್ತರ ಕಟ್ಟಡಗಳಿಂದಾಗಲೀ ಮಾರುಕಟ್ಟೆಗಳಿಂದಾಗಲೀ ತೊಂದರೆಯಾಗದಂತೆ ಈ ಸ್ಥಳ ದೂರ ಇದೆ. ಸೌದಿ ಸರಕಾರದವರು ಜರ್ಮನ್ Hochtief ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಕಟ್ಟಡ ನಿರ್ಮಾಣ ಶುರು ಮಾಡಿದರು. ಈ ಕಟ್ಟಡಕ್ಕೆ ಮೊದಲು ಅಲ್ಲಿ ಬರುವ ಇತರ ವಿದೇಶೀ ಕಂಪನಿಗಳು ವಸಾಹತುಗಳಿಗೆಂದು ಅವರವರ ಕುಟುಂಬ ಗಳಿಗೆಂದು ಜರ್ಮನ್ ಸ್ಟ್ಯಾಂಡರ್ಡ್‌ ಮನೆ-ಮಾರ್ಕೆಟ್ಟು-ಶಾಲೆ-ಕ್ಯಾಸಿನೋ-ಈಜುಕೊಳ ಸಣ್ಣ ಥಿಯೇಟರ್ ಇನ್ನಿತರ ವ್ಯವಸ್ಥೆಗಳನ್ನೊಳಗೊಂಡ ಕ್ಯಾಂಪಸ್ ಕೂಡಾ ಕಟ್ಟಿದರು. ಇಂತಹದೇ ಒಂದು ಮನೆಯಲ್ಲಿ ನಾವಿದ್ದದ್ದು.

ಸುಮಾರು 105 ಚದರ ಕಿ.ಮೀಟರ್‌ಗಳಷ್ಟು ವಿಸ್ತರಣೆಯಲ್ಲಿರುವ ಈ ಬೃಹತ್ ಗಾತ್ರದ ವಿಮಾನ ನಿಲ್ಹಾಣ ಈವೂತ್ತು ಯಾರೇ ನೋಡಿದರೂ ದಂಗುಬಡಿಸು ವಂತಿದೆ. ನಾವೇನು ಮರುಭೂಮಿ ನಿಲ್ದಾಣದಲ್ಲಿದ್ದೇವೆಯೋ, ಅಥವಾ ಹಚ್ಚು
ಹಸಿರಿನ ಯುರೋಪದಲ್ಲಿದ್ದೇವೆಯೋ ಅನ್ನುವಂತಿದೆ.

ಇದನ್ನು ನಾಲ್ಕುವಿಭಾಗಗಳಾಗಿ ವಿಂಗಡಿಸಿದ್ಧಾರೆ. ನಿಲ್ಹಾಣದ ದಕ್ಲಿಣಕ್ಕೆ ಕೇವಲ ಸ್ವದೇಶಿಯ (ರಾಷ್ಟ್ರೀಯ) ವಿಮಾನಗಳಾದ ಸೌದಿಯಾ ವಿಮಾನಗಳು ಬಂದಿಳಿಯುವವು. ಉತ್ತರಕ್ಕೆ ವಿದೇಶಿ ವಿಮಾನಗಳು (ಅಂತರರಾಷ್ಟ್ರೀಯ), ಇದರ ಉತ್ತರಕ್ಕೆ ಕೇವಲ ಹಾಜ್‌ ಯಾತ್ರಿಕರ ದೇಶ ವಿದೇಶಗಳ ವಿಮಾನಗಳು.

ಹಾಗೂ ಪಶ್ಚಿಮದೆಡೆಗೆ ರಾಷ್ಟ್ರೀಯ-ಅಂತರರಾಷ್ಟ್ರೀಯ ಮುಖ್ಯ ರಾಜಕಾರಣಿಗಳ-ರಾಜರ ವಿಮಾನ ಸ್ಥಳ ಎಂದಿದೆ. ಪೂರ್ವದಲ್ಲಿ ಸೌದಿ ರಾಯಲ್ ಏರ್‌ಫೋರ್ಸಿನ ಘಟಕ ಇದೆ.

ಈ ಎಲ್ಲ ಕಟ್ಟಡಗಳ ನಿರ್ಮಾಣದ ಅಂತ್ಯದಲ್ಲಿ ನಾನಿದ್ದೆ. ಗುತ್ತಿಯವರು ನಾನು ಬರುವದಕ್ಕಿಂತ ಒಂದು ವರ್ಷ ಮೊದಲು ಈ ಸ್ಥಳದಲ್ಲಿ  ಅಡ್ಡಾಡಿ ಕಾರ್ಯ ನಿರ್ವಹಿಸಿರುವದರಿಂದ ನಾನು ಹೋದ ಹೊಸದರಲ್ಲೆಲ್ಲ ದಿನಲೂ ಸಾಯಂಕಾಲ ಈ
ಕಟ್ಟಡಗಳಲ್ಲೆಲ್ಲ-ರನ್‌ವೇಗಳ ಮೇಲೆಲ್ಲ, ಸಾಕಷ್ಟು ಸಲ ಅಡ್ಡಾಡಿಸಿ ಇಲ್ಲಿಯ ಪರಿಚಯ ಮಾಡಿಕೊಡುತ್ತಿದ್ದರು. ಈಗೆಲ್ಲ ಭಧ್ರಕಾವಲು ಇದೆ.

1980ರ ಮೇ ಗೆ, ಈ ನಿಲ್ದಾಣಕ್ಕೆ ಅಲ್ಲಿಯ ರಾಜನ ಹೆಸರು “ಅಬ್ದುಲ್ ಅಜೀಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಲ್ಹಾಣ”ವೆಂದು- ಹೆಸರಿಸಿ ಪ್ರಯಾಣಕ್ಕೆ ತೆರವು ಮಾಡಿದರು. ಆ ದಿನ ಬೆಳಗಿನಿಂದಲೇ ವೈಭವದ ವಾತಾವರಣ, ಮಧ್ಯಾನ್ಹ ನಾವು ಹೋಗಿದ್ದೆವು. ಎಲ್ಲ ಕಡೆಗೂ ಅತಿಥಿಗಳಿಗೆ ರತ್ನಗಂಬಳಿ ಸ್ವಾಗತ. ಸ್ವಿಟಜರ್‌ಲ್ಯಂಡಿನಿಂದ ಸರಕು ಸಾಗಿಸುವ ಏಮಾನಗಳ ಮೂಲಕ ತುಂಬಿಬಂದ ಹೂವುಗಳು-ಗುಚ್ಛಗಳು, ತುಂಬಾ ಸುಂದರವಾಗಿದ್ಧವು. ನಮ್ಮಲ್ಲಿ ನಾನು ಸಾಕಷ್ಟು ಜಾತಿಯ ಹೂವುಗಳನ್ನು ನೋಡಿದ್ದೆ. ಅದರೆ ಇಲ್ಲಿಯ ಈ ಹೂವುಗಳ ಜಾತಿಗಳೇ ಬೇರೆ ಬೇರೆ. 8-10 ದಿನ ಇಟ್ಟರೂ ಕೆಡಲಾರದಂತಹವು. ಅವುಗಳ ವಿನ್ಯಾಸ ಬಣ್ಣ-ವಾಸನೆ ಎಲ್ಲ ಒಂಥರಾ ವಿಚಿತ್ರವೆನಿಸುವಂತಿದ್ದವು. ಇಲ್ಲಿ ಅವನ್ನೆಲ್ಲ ಹೊಂದಿಸಿಡುವ ರೀತಿಯೂ ಅಷ್ಟೇ ಮನಮೋಹಕವಾದುದಿತ್ತು. ಹೋದ ಎಲ್ಲ ಅತಿಥಿಗಳಿಗೆ ಹೂಗುಚ್ಛ ಜೊತೆಗೆ  ಕೇಕ್ ಮತ್ತಿತರ ಸಿಹಿ ತಿನಿಸುಗಳು ತಂಪು ಪಾನೀಯಗಳನ್ನು ಕೊಡುತ್ತ ಸ್ವಾಗತಿಸಿದರು. ಒಟ್ಬಾರೆ ಭಾರೀ ವೈಭವದಿಂದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.

ಈ ಮೊದಲೇ ಹೇಳಿದಂತೆ ಏರ್‌ಪೋರ್ಟ್ ಸುತ್ತೆಲ್ಡ ಹಚ್ಚ ಹಸಿರು ಹೂವು ಗಳಿಂದ ತುಂಬಿಹೋಗಿದೆ. ಇಲ್ಲಿಯೂ ವಿದೇಶೀ ತೋಟಗಾರಿಕೆ ಇಲಾಖೆಯವರು ತಮ್ಮ ಕೈ ಚಳಕವನ್ನು ಆಶ್ಚರ್ಯಕರವಾಗಿ ತೋರಿಸಿದ್ದಾರೆ. ಒಂದೆಡೆಗೆ ಒಳ್ಳೆಯ ನರ್ಸರಿ ಇದೆ. ಸುಮಾರು 15,000 ವಿವಿಧ ಗಿಡ-ಬಳ್ಳಿ-ಹೂ ಜಾತಿಗಳು ಕಾಣಿಸುವವು. ನಿಲ್ದಾಣದ ಸುತ್ತೆಲ್ಲ 72,000 ಗಿಡಗಳು (ಹೆಚ್ಚಾಗಿ ನೀಲಗಿರಿ ಮತ್ತು ಬಾದಾಮಿ ಗಿಡಗಳು) ಕಾಣಿಸಿತ್ತವೆ. ಇದಲ್ಲದೆ ಮರುಭೂಮಿಯ ಗಿಡಗಂಟೆಗಳನ್ನು ಹಚ್ಚಿದುದಾಗಿ ನರ್ಸರಿ ಯವರು ಹೇಳುತ್ತಾರೆ. ಅಷ್ಟೊಂದು ಹಸಿರು ಇದ್ದೇ ಇದೆ. ಸಂಶಯವೇ ಇಲ್ಲ ಈ ಸುಂದವಾದ ಪರಿಸರದ ಸಸ್ಯಶ್ಯಾಮಲ ನೋಟ ಜಗತ್ತಿನ ಯಾವುದೇ ವಿಮಾನ ನಿಲ್ದಾಣದ ಸೌಂದರ್ಯಕ್ಕೂ ಸರಿಸಾಟಿಯಾಗಿ ನಿಲ್ಲುವಂತಿದೆ.

ಮರುಭೂಮಿಯಲ್ಲಿ ನೀರಿನ ಸಮಸೈ ಇರುವಾಗ ಇವೆಕ್ಕೆಲ್ಲಿ ಯ ನೀರಿನ ಸರಬರಾಜು  ಸಂಶಯ ಬರದೇ ಇರದು. ಇಲ್ಲಿಯ ಹಸಿರಿಗೆ ಅಷ್ಟೇಅಲ್ಲ. ನಿಲ್ದಾಣದ ಪ್ರಯಾಣಿಕರಿಗೆ, ಹಾಜ್ ಯಾತ್ರಿಕರಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು
ಬೇಕೇಬೇಕು. ಅಂತೆಯೇ ಕೆಂಪು ಸಮುದ್ರದ ದಡಕ್ಕೆ ನೀರಿನ ಶುದ್ಧೀಕರಣ ಕೇಂದ್ರ್ಭ ಸ್ಥಾಪಿಸಿ ಸುಮಾರು 30,000 ಕ್ಯೂಬಿಕ್ ಮೀಟರದಷ್ಟು ನೀರು ಪ್ರತಿವರ್ಷ ಬಿಡುಗಡೆ ಮಾಡುತ್ತಾರೆ. ಮೊದ ಮೊದಲು ಗುತ್ತಿಯವರು  ಸಲ ಅಲ್ಲಿಯೂ ಅಷ್ಟಿಷ್ಟು ಕೆಲಸವೆಂದು ಹೋಗಿಬರುತ್ತಿದ್ದರು. ಎಲ್ಹಾ ಪವರ ಡಿಸ್ಟ್ರಿಬ್ಯೂಶನ್ ಸಿಸ್ಟಮದ ಟೆಸ್ಟಿಂಗ್ ಮತ್ತು ಕಮೀಶನ್ ಗುತ್ತಿಯವರೇ ಮಾಡಿದ್ದಾರೆ.

ಇಷ್ಟು ಈ ಕಟ್ಟಡಗಳ ವಿಷಯವಾಗಿ ಹೇಳಬೇಕೆಂದರೆ ಈ ಕೆ.ಎ.ಐ.ಎ.ಕ್ಕೆ (King Abdul Aziz Airport) ಕಿರೀಟ ಪ್ರಧಾನವಾದುದು-ಅಲ್ಲಿಯ ಇಸ್ಲಾಂ ಧರ್ಮಕ್ಕೆ ಹೊಂದುವಂತಹ ಸಂಸ್ಕೃತಿಕ ಕಲೆ. ಈ ಎಲ್ಲ ದ್ಭಷ್ಟಿಯೊಡಗೂಡಿದ
ತಂತ್ರಜ್ಞಾನ ಕಲ್ಪನಾತೀತವಾದುದು.

ಇಲ್ಲಿಯ “ಹಾಜ್‌ಟರ್ಮಿನಲ್” ನೋಡುವಾಗ ಇದಕ್ಕೆ ಸರಿಸಾಟಿಯಾಗು ವಂತಹದು ಬೇರೆಲ್ಲೆಯೂ ಇಲ್ಲ ಅನಿಸದೇ ಇರದು. ಪ್ರತಿವರ್ಷಲಕ್ಷಾನುಗಟ್ಟಲೆ ಬಂದಿಳಿಯುವ ಹಾಜ್ ಯಾತ್ರಿಕರ ಸಲುವಾಗಿಯೇ ನಿರ್ಮಿಸಿದ ಈ ಕಟ್ಟಡ
(ಹವಾ ಮಹಲ್ ಎಂದರೂ ಸರಿ) ಅನುಪಮಾವಾದುದು. ಅತೀ ಎಚ್ಚರಿಕೆಯಿಂದ ಹಾಜ್ ಯಾತ್ರಿಕರ ಭಾವನೆಗೆ ಸ್ಪಂದಿಸುವಂತೆ ಹೊಸ ತಂತ್ರಜ್ಞಾನಗಳನ್ನು ರೂಪಿಸುವಲ್ಲಿ ಅರ್ಕಿಟೆಕ್ಟರು ಜಯಶೀಲರಾಗಿದ್ದಾರೆ.

ಇದರಲ್ಲಿ ಎರಡು ವಿಭಾಗಗಳು, ಎರಡೂ ಪಕ್ಕ ಪಕ್ಕದಲ್ಲಿ ಯೇ ಇವೆ. ಉದ್ದ ಗಲಗಳ ಅಳತೆಯಲ್ಲಿ ಒಂದೊಂದು 750 x 340 ಮೀಟರುಗಳಷ್ಟಿವೆ. ಎರಡೂ ಕಟ್ಟಡಗಳ ನಡುವಿನ ಅಂತರ 160 ಮೀಟರುಗಳಷ್ಟು ಅಗಲ. ಹಾಜ್‌ ಸಮಯದಲ್ಲಿ
ಇಲ್ಲಿ ನಡುವೆ ಕಾರು, ಇತರ ವಾಹನಗಳು ಓಡಾಡಲು ವಿಶಾಲ ಸ್ಥಳವೂ ಇದೆ.

ನೋಡಲು ಗುಡಿಸಿಲಾಕಾರದಂತಿರುವ ಇದರ ಛಾವಣಿಗಳು 210 ಛಾವಣಿ ಗಳಿದ್ದು ಒಳ್ಳೆಯ ಫೈಬರ್‌ ಗ್ಲಾಸ್‌ಗಳಿಂದ ಜೋಡಿಸಿದ್ದಾರೆ. ಒಂದೊಂದು ಗುಡಿಸಲದ ಸುತ್ತಳತೆ 45 x 45 ಮೀಟರಗಳಷ್ಟುದ್ದು, ನೆಲದಿಂದ 6 ಅಂತಸ್ಸುಗಳಷ್ಟು ಎತ್ತರದಲ್ಲಿವೆ. ಬಿಳಿಯ ಫೈಬರ್ ಗ್ಲಾಸ್‌ನ ಹಲಗೆಗಳಿರುವದರಿಂದ ಗಾಳಿ ಬೆಳಕಿಗೇನೂ ತೊಂದರೆ ಇಲ್ಲ. ಹಾಜ್‌ಯಾತ್ರೆ ಸಮಯದಲ್ಲಿ ರಾತ್ರಿ ಮಾತ್ರ ಲೈಟ್‌ಗಳು ಝಗಝಗಿಸುತ್ತಿರುತ್ತವೆ. ಒಳ್ಳೆಯ ಜಾತ್ರೆ ಊರೇ ಅನಿಸುತ್ತದೆ.

ಈ ವಿಶಾಲವಾದ ಕಟ್ಟಡದ ಪೂರ್ವ ಪ‍ಶ್ಚಿಮಕ್ಕೆ ಕಟ್ಟಡಕ್ಕೆ ಹೊಂದಿಕೊಂಡೇ ವಿಮಾನದೊಳಗೆ ಹೋಗಲಿಕ್ಕೆ ಬರಲಿಕ್ಕೆ ಬೋರ್ಡಿಂಗ್ ಗೇಟ್‌ಗಳಿವೆ, ಹಾಗೂ ಪಾರ್ಕಿಂಗ್ ಸ್ಥಳಗಳೂ ಇವೆ. ಒಂದೇ ಸಮಯಕ್ಕೆ 30 ವಿಮಾನಗಳು ನಿಲ್ಲ- ಬಹುದಾದಂತಹ ಬೃಹತ್ ಕಟ್ಟಡ. ಒಳಗಡೆ ಯಾತ್ರಿಕರಿಗೆ ಬೇಕಾದ ಸೌಲಭ್ಯಗಳಾದ ಬ್ಯಾಂಕ್, ಪೋಸ್ಟ್ ಆಫೀಸು,
ರೆಸ್ಟೋರೆಂಟ್, ದವಾಖಾನೆ, ಮಾರ್ಕೆಟ್, ಬಸ್‌-ಕಾರ್‌-ಟ್ಯಾಕ್ಸಿಗಳ ಕೌಂಟರ್, ಅಷ್ಟೇ ಅಲ್ಲದೇ ಸ್ವಂತ ಅಡಿಗೆ ಮಾಡಿಕೊಳ್ಳುವವರಿಗೆ ತಕ್ಕ ವ್ಯವಸ್ಥೆಯೂ ಇದೆ. ಭಕ್ತರ ಭಾವನೆಗಳಿಗೆ ತಕ್ಕ ಪ್ರಶಸ್ತ ಸ್ಥಳ ಇದು.

ಇದರಂತೆ “ಸೌದಿಯಾ ಟರ್ಮಿನಲ್’ ಈ ಕಟ್ಟಡದ ಹೊದಿಕೆ ಅರ್ಧಚಂದ್ರಾಕೃತಿಯನ್ನು ಹೋಲುವ 7 ಅರ್ಧಚಂದ್ರಗಳ ಸಿಮೆಂಟಿನ ಬಿಳಿಯ ಹೊದಿಕೆ. ಎದುರು ಗಡೆಯೇ ನೀರಿನ ಕೊಳ, ಅದರೊಳಗೆ ಕಾರಂಜಿ. ಈ ವಿಭಾಗದಲ್ಲಿ ಸೌದಿಯವ ಸ್ವದೇಶಿ ವಿಮಾನಗಳು ನಿಲ್ಲುವ ಸ್ಥಳ. ಪ್ರತಿತಾಸಿಗೆ 3500 ಜನ ಪ್ರವಾಸಿಗರು ಬಂದಿಳಿಯುವಂತಹ ವ್ಯವಸ್ಥೆ ಇಲ್ಲಿದೆ. ಇದಕ್ಕೆ ಹೊಂದಿಕೊಂಡೇ ಉತ್ತರದಲ್ಲಿ “ನಾರ್ತ್ ಟರ್ಮಿನಲ್”. ಇಲ್ಲಿ ವಿದೇಶಿ ಪ್ರವಾಸಿಗರ ವಿದೇಶಿ ವಿಮಾನಗಳು ಬಂದಿಳಿಯುತ್ತವೆ. ಇಲ್ಲಿಯೂ ಫೋನ್, ಬ್ಯಾಂಕ್, ಹೋಟೆಲ್‌ಗಳ ವ್ಯವಸ್ಥೆಗಳಿವೆ.

ಹಾಗೆಯೇ ಇಲ್ಲಿ “ರಾಯಲ್ ಪೆವಿಲಿಯನ್” (Royal Pavilion) ನೋಡುವಂತಿದೆ. ಅದರೆ ಯಾವ ಜನ- ಸಾಮಾನ್ಯನೂ ನೋಡುವಂತಿಲ್ಲ. ಅಂದರೆ ಇದು ಅಲ್ಲಿಯ ರಾಜ ಹಾಗೂ ಅವನ ಅತಿಥಿಗಳಿಗೆ, ದೇಶ ವಿದೇಶಗಳ ಮಂತ್ರಿ ಮುಖ್ಯಸ್ಥರಿಗೆ ಮಾತ್ರ. ಒಳಗಡೆ ವಿಶಾಲವಾದ ಸುಂದರ ಭವ್ಯ ರತ್ನಗಂಬಳಿ, ಒಳ್ಳೆ ಸೋಫಾಗಳಿವೆ
ಸುಸಜ್ಜಿತವಾದುದು. ಒಳಗಡೆಯೇ ಕಾನ್‌ಫರೆನ್ಸ್ ರೂಂ, ಪ್ರೆಸ್ ರೂಂ, ಆಫೀಸು ಇನ್ನಿತರ ಅನುಕೂಲತೆಗಳಿವೆಯೆಂದು ಗುತ್ತಿಯವರು ಹೇಳಿದರು. ‘ಆಗೆಲ್ಲ (1980) ಪೂರ್ತಿ ವಿಮಾನ ನಿಲ್ದಾಣದ ಕೆಲಸ ಭರದಿಂದ ಸಾಗಿದಾಗ ಎಲ್ಲ ದೇಶದ “ಇಂಜಿನೀಯರು” ಕಾಂಟ್ರಾಕ್ಟರರು-ಕೆಲಸಗಾರರು. ಆರ್ಕಿಟೆಲ್ಟ್‌ಗಳು ಓಡಾಡಲೇಬೇಕಿತ್ತು. ಆಗೆಲ್ಲ ಗುತ್ತಿಯವರು ಸಾಕಷ್ಟು ಸಲ ಅಲ್ಲಿ ಹೋಗಿಬರುತ್ತಿದ್ದರು. ಈಗ 24 ತಾಸೂ  ಕಾವಲು ಪಡೆ ಸುತ್ತುವರೆದಿರುತ್ತದೆ.

ಇವಕ್ಕೆಲ್ಲ ಹೊಂದಿಕೊಂಡೇ ಆಲ್ಲಲ್ಲಿಯೆ ಏರ್ ಕಾರ್ಗೋ ಕಟ್ಟಡ; ಫುಡ್  ಸರ್ವಿಸ್ ಬಿಲ್ಡಿಂಗ್‌ಗಳಿವೆ. ಕಂಟ್ರೋಲ್ ಟಾವರ್, ಎಲೆಕ್ಟ್ರಿಕಲ್ ಪವರ್‌ ಸೆಂಟರ್‌ಗಳಿವೆ. 81ರಲ್ಲಿ ಉದ್ಘಾಟನೆ ಆಗುವವರೆಗೆ ಇಲ್ಲೆಲ್ಲ ಸಾಕಷ್ಟು ಸಲ ಬಂದು ಅಡ್ಡಾಡುತ್ತಿದ್ದೆವು.

ಇಲ್ಗೆಲ್ಲ ಕಾರಿನಲ್ಲಿ ಹೋಗುವದಾದರೆ ನಮ್ಮ ಮನೆಯಿಂದ ಕೇವಲ ಐದು ನಿಮಿಷದ ಹಾದಿ. ಸ್ವಲ್ಫ ಸುತ್ತುಹಾಕಿ ಹೋಗಬೇಕಷ್ಟೆ. ಕ್ಯಾಂಪಸ್ಸಿನ ದಂಡೆಗುಂಟ ಹಾಕಿರುವ ದಿನ್ನೆಯ ಮೇಲೇರಿ ನಿಂತು ನೋಡಲು ಬಹಳ ಆನಂದವೆನಿಸುತ್ತಿತ್ತು. ನಾವು ಹೆಚ್ಚಾಗಿ ಸಂಜೆ ಇಲ್ಲಿಗೆ ಬಂದು ಒಂದು ತಾಸಾದರೂ ಅಡ್ಡಾಡಿ ಎಲ್ಲ ದೇಶಗಳ ಬರು
ಹೋಗುವ ವಿಮಾನಗಳನ್ನು ನೋಡುತ್ತ ಖುಷಿಪಡುತ್ತಿಡ್ಡೆವು. ಗುತ್ತಿಯವರು ಮಕ್ಕಳಿಗೆ ವಿಮಾನಗಳು ಏರುವಾಗ ಇಳಿಯುವಾಗಿನ ಅವುಗಳ ಚಲನವಲನ, ತಂತ್ರಜ್ಞಾನ, ಕಂಟ್ರೋಲ್‌ಟವರ್, ಫೀಲ್ಡ್, ಲೈಟಿಂಗ್, ರನ್‌ವೇ, ಈ ತರಹ ಸಾಕಷ್ಟು ವಿಷಯ ಹೇಳುತ್ತಿದ್ಧರು. ವಿವಿಧ ದೇಶಗಳ ತರ ತರಹದ ಆಯ ಅಳತೆ ಬಣ್ಣಗಳ ವಿಮಾನಗಳು ಆಕಾಶದಲ್ಲಿ ಸುತ್ತುತ್ತೆ ನಮ್ಮ ಕಣ್ಣುರಿದೆಯೇ ಕಿವಿಗಡಚಿಕ್ಕುವಂತೆ ಸಪ್ಪಳಮಾಡಿ ನೆಲ ತಲುಪಿ ಅಗೀಗ ಅಪ್ಪಳಿಸಿ ಕಿಡಿ ಎಬ್ಬಿಸಿ ಮುಂದೋಡುವ ದೃಶ್ಯಗಳನ್ನು 10 ವರ್ಷಗಳ ಕಾಲ ನೋಡಿದರೂ, ಪ್ರತಿಸಲವೂ ಪ್ರತಿವಿಮಾನದ ಅಬ್ಬರದ ಓಡಾಟ ನೋಡುವದರಲ್ಲಿ ನನಗದೇನೋ ಹೊಸತನವೇ ಕಾಣಿಸುತ್ತಿತ್ತು. ಆಟಿಗೆ ಸಾಮಾನುಗಳಂತೆ ಅಕಾಶದಲ್ಲಿ ಒಂದರ ಹಿಂದೊಂದರಂತೆ ಸಾಲು ಹಚ್ಚಿರುವ ವಿಮಾನಗಳ ದ್ಭಶ್ಯ ಮರೆಯಲಸಾಧ್ಯ. ಹಾಜ್ ಸಮಯದಲ್ಲಿ (ಬಹಳಷ್ಟು ಚಾರ್ಟಡ್ ವಿಮಾನುಗಳು ಬರಿದಿಳಿಯುತ್ತವೆ) ಈ ದೃಶ್ಯ, ಅದೂ ಸಂಜೆ ರಾತ್ರಿ ನೋಡಿದರಂತೂ ,ಅವಿಸ್ಮರಣೀಯ, ನನ್ನ ಕಣ್ಣು ಮುಂದೆ ಈಗಲೂ ಆ ದೃಶ್ಯಗಳು ಬಂದು ಒಂಥರಾ ಖುಷಿ ಕೊಡುತ್ತವೆ.

ನಾವು ನೋಡಿದ ಎಷ್ಟೋ ವಿಮಾನಗಳ (ಹೆಸರುಗಳಲ್ಲಿ)ಲ್ಲಿ ಇಲ್ಲಿ ಒಂದಿಷ್ಟು ಹೇಳುತ್ತೇನೆ. ಏರ್ ಇಂಡಿಯಾ, ಏರ್‌ಫ್ರಾನ್ಸ್, ಅಲ್ ಇಟಾಲಿಯಾ (ಇಟಲಿದೇಶ), ಬಿಮಾನ್ಸ್‌ (ಬಂಗ್ಲಾದೇಶ) ಬ್ರಿಟಿಷ್ ಏರ್‌ವೇಸ್,- ಚೈನಾಏಯರ್ ಲೈನ್ಸ್, ಇರಾಕ್‌ ಏಯರ್, ಟುನಿಸ್ ಏಯರ್, ಟಿರ್ಕಿಷ್ ಏಯರ್‌ಲೈನ್ಸ್, ಸಿರಯನ್ ಏರ್‌ಲೈನ್ಸ್, ಸ್ವಿಸ್ ಏಯರ್ (ಸ್ವಿಟ್ಜರ್‌ಲ್ಯಾಂಡ್), ಸುಡಾನ್, ಸೋಮಾಲಿ ಏರ್‌ವೇಸ್, PIA (ಪಾಕಿಸ್ತಾನ) ಲುಪ್ತಾನ್ಸ್ (ಜರ್ಮನ್) ಲಿಬಿಯಾ, ಕುವೈತ್, ಇಜಿಪ್ತ, ಕೋರಿಯಾ ಏರ್‌ಲೈನ್ಸ್, ರಾಯಲ್‌ಡಚ್ ಏರ್‌ಲೈನ್ಸ್ (KLM) ಗರುಡ ಏರವೇಸ್ (ಇಂಡೋ
ನೇಶಿಯಾ), ಐಬೇರಿಯಾ  SAS  (ಸ್ಕ್ಯಾಂಡಿನೇವಿಯಾ), ಇಥಿಯೋಪಿಯಾ, ಇರಾಕ, ಯಮನ್, ಸುಡಾನ್, ಕೆನಿಯಾ ಮುಂತಾದ ಮುಂತಾದ ಇನ್ನು 25 ಹೆಸರಗಳನ್ನಾದರೂ ಹೇಳಬಹುದು.

1974ರಲ್ಲಿ ಶುರುವಾದ ಈ ವಿಮಾನ ನಿಲ್ಹಾಣದ ಕೆಲಸ ಪೂರ್ಣ ಮುಗಿದದ್ದು 1981ರಲ್ಲಿ 35 ದೇಶಗಳ 11,000 ಕೆಲಸಗಾರರ ಈ ಬೃಹತ್ ಯೋಜನೆಯು ಅಲ್ಲಿಯ ಸರ್ಕಾರದ ವಿಮಾನೋಡ್ಡಾಣ ಇಲಾಖೆಯ  IAP= Inter national Airport) ನೇತೃತ್ವದಲ್ಲಿ ಮುಗಿದು ಈಗೆಲ್ಲ ಸರಾಗವಾಗಿ ನಡೆದುಕೊಂಡು ಹೋಗುತ್ತಿದೆ. 15
ವರ್ಷಗಳಿಂದ ಇಲ್ಲಿಯೇ ಗುತ್ತಿಯವರು ಸಿನಿಯರ್ ಇಂಜಿನಿಯರ್ ಎಂದಿದ್ದು, ಈಗ ಸ್ವದೇಶಕ್ಕೆ ಮರಳುವುದರಲ್ಲಿದ್ದಾರೆ.

ಇದರಲ್ಲೇ ರಾಜಧಾನಿ “ರಿಯಾದ್”ದಲ್ಲಿ ನ (K.K.I.A.) ‘ಕಿಂಗ್ ಖಲೀದ್ ಅಂತರಾಷ್ಟ್ರ್ರೀಯ ವಿಮಾನ ನಿಲ್ದಾಣದ’ ವಿನ್ಯಾಸವೂ ಅದರ ಆಯ ಅಳತೆ ಚೊಕ್ಕಟತನ – ಇನ್ನಿತರ ಅನೇಕ ಸುವ್ಯವಸ್ಥೆಗಳನ್ನೊಳಗೊಂಡಿರುವುದು
ನೋಡಿದರೆ ಬೆರಗಾಗುವಂತಿದೆ.

1978ಕ್ಕೆ ಇಲ್ಲಿಯ ಕಟ್ಟಡ ಕೆಲಸ ಸುರುಮಾಡಿ 1983ರ ಡಿಸೆಂಬರಕ್ಕೆ ಇದನ್ನು ಸಂಚಾರಕ್ಕೆ ತೆರವು ಮಾಡಿದರು. ಅಗ ಜೆಡ್ಡಾದಲ್ಲಿ ಏರ್‌ಪೋಟ್೯ದ ಅನುಭವದ ಸಾಕಷ್ಟು ಜನ ರಿಯಾದ್‌ಗೆ ಹೋದರು. ನಮ್ಮ ಭಾರತದ ಶ್ರೀ ಬಾಗಿಯಾ ಎನ್ನುವವರೂ ಅಲ್ಲಿ ಹೋಗಿ ಎರಡು ವರ್ಷ ಇದ್ದರು ನಡುವೆ ಸಾಕಷ್ಟು ಸಲ ಶ್ರೀಮತಿ ಭಾಗಿಯಾ ಬರುತ್ತಿದ್ದರು. ರಿಯಾದ್ದಲ್ಲಿ ಮಹಿಳೆಯರು ಪೂರ್ತಿ ಬುರ್ಕಾದಲ್ಲಿ ಇರುವ ವಿಷಯ ಹೇಳಿ ತಮ್ಮ ಬೇಸರಿಕೆ ಬಹಳ ವ್ಯಕ್ತಪಡಿಸುತ್ತಿದ್ದರು. ಮೊದಲು ನಮ್ಮ ಕ್ಯಾಂಪಸಿನಲ್ಲಿದ್ದಾಗೆಲ್ಲ ಯುರೋಪಿಯನ್ನರನ್ನೇ ಮೀರಿಸುವಷ್ಟು ಉಡುತೊಡುಗೆಗಳು, ಮೀತಿಮೀರಿದ ಫ್ಯಾಷನ್‌ಗಳು ಮಾಡುವರು ನಾನು ನೋಡಿ ಆಶ್ಚರ್ಯಪಡುತ್ತಿದ್ದೆ. ಪಾಪ ರಿಯಾದ್‌ಗೆ ಹೋದಮೇಲೆ ಏನೇ ಫ್ಯಾಷನ್ ಮಾಡಿಕೊಂಡರೂ ಮೇಲೆ ಬುರ್ಕಾ (ಕೇವಲ ಕಣ್ಣುಬಿಟ್ಟು) ಹಾಕಿಕೊಳ್ಳಬೇಕಲ್ಲಾ ಅನ್ನುವದೇ ಅವರಿಗೆ ದೊಡ್ಡ
ಸಮಸ್ಯೆಯಾಗಿತ್ತು. ಹೀಗಾಗಿ ಸ್ನೇಹಿತರ ನೆಪಮಾಡಿಕೊಂಡು ಜರ್ಮನಿಗೋ, ಅಮೇರಿಕ ಗೋ 3-4 ತಿಂಗಳು ಹೋಗಿಬಿಡುತ್ತೇನೆ ಅನ್ನುತ್ತಿದ್ದರು.

ಸರಿ, ಮೊದಲಿನ ವಿಷಯಕ್ಕೆ ಬರೋಣ; ಇಲ್ಲಿಯ K.K.I.A. ದಲ್ಲಿಯೂ ಮೂರು ವಿಭಾಗಗಳನ್ನು ಮಾಡಿದ್ದಾರೆ. ಒಂದು ಸ್ವದೇಶಿಯದು, ಇನ್ನೆರಡು ವಿದೇಶಿಯ ವಿಭಾಗಗಳೆಂದು. ಇಲ್ಲಿಯ ಕಟ್ಟಡದ ಮೇಲ್ಛಾವಣಿ-ಒಳಛಾವಣಿ ವಿನ್ಯಾಸ ಜಗತ್ತಿ
ನಲ್ಲೆಲ್ಲಿಯೂ ಇಲ್ಲ. ತ್ರಿಕೋನಾಕೃತಿಯ ಛಾವಣೆಗಳಿದ್ದು ಗಾಳಿ-ಬೆಳಕಿಗೆಂದು ಸರಿಯಾಗಿ ಯೋಚಿಸಿಯೇ ಕಟ್ಟಿರುವರು. ಇದು ಸೌದಿ ರಾಜನ ಹಳೆಯ ಅಥವಾ ಐತಿಹಾಸಿಕ ಮನೆ ‘ಅಲ್‌ದಿರಿಯಾ’ ದಂತಿದೆ ಎಮದು ಅನ್ನುವರು.

ನಾವು ಬಾಂಬೆಯಿಂದ ಜೆಡ್ಡಾಕ್ಕೆ ಹೋಗಬೇಕಾದಾಗ ರಿಯಾದ್ ಮೇಲಿಂದಲೇ ಹೋಗಬೇಕಾಗುತ್ತಿತ್ತು. ಕೆಲವೊಂದು ಸಲ ವಿಮಾನ ಕೂಡಾ ಬದಲಿಸಬೇಕಾಗುತ್ತಿತ್ತು. ಆ ಸಮಯದಲ್ಲೆಲ್ಲ ಒಂದೆರಡು ತಾಸು ಅಲ್ಲಿ ಕಳೆಯಬೇಕಾಗುತ್ತಿತ್ತು. ಅಗೆಲ್ಲ ಒಳಗೆ ಅಡ್ಡಾಡಿ ಹೊಸ ಹೊಸ ವಿಷಯ ವಿನ್ಯಾಸಗಳೆಲ್ಲ ನೋಡುತ್ತಿದ್ದೆವು. ಒಂದೆಡೆಗೆ ವಿಶಾಲವಾದ ಷಡ್ಬುಜಾಕೃತಿಯ ನಮಾಜ್ ಮಾಡುವ ಸಾರ್ವಜನಿಕ ಸಭಾಂಗಣವಿದೆ. ಇಲ್ಲೆಲ್ಲಾ ಇಸ್ಲಾಂ ಧರ್ಮದ ನವ್ಯತೆ ಕಾಣುತ್ತೇವೆ. ಸುಮಾರು 5000ಜನ ನಮಾಜ್ ಮಾಡುವಷ್ಟು ಸ್ಥಳ ಇದೆ. ಒಳಗಡೆಯ ವಿಚಾರಣಾ ವಿಭಾಗದಿಂದ ಹಿಡಿದು ತಪಾಸಣಾ ವಿಭಾಗದವರೆಗೆ ಅಥವಾ ಅಲ್ಲಿಂದ ಬಿಡುವವರೆಗೆ ಯಾವೊಬ್ಬ ಫೋಲಿಸನಿಗೂ ಇಂಗ್ಲೀಷ್ ಬರುವುದಿಲ್ಲ. ಅವರು ತಮ್ಮ ಭಾಷೆಯೆಲ್ಲಿ ಏನೇನೋ ಕೇಳುತ್ತಾರೆ. ನಾವು ನಮ್ಮಲ್ಲಿರುವ ಪ್ರವಾಸಿಗೆ ಸಂಬಂಧಿಸಿದ ಎಲ್ಲ ಕಾಗದ ಪತ್ರ ಅವರ ಮುಂದಿಟ್ಟು ಬಿಡುತ್ತಿದ್ದೆವು. ಅದರಲ್ಲಿ ಅವರಿಗೆ ಯಾವುದು ಬೇಕೋ ಅದಷ್ಟು ತೆಗೆದು ನೋಡಿ ಸೀಲ್‌ಹಾಕಿ ‘ಯಲ್ಲಾ’ (ಹೋಗಿರಿ) ಅನ್ನುತ್ತಾರೆ. ಅವರ ಕೈ ಸನ್ನೆಯ ಮುಖಾಂತರವೇ ನಾವು ಮುಂದೆ ಸರಿಯಬೇಕು.
ಭಾಷಾ ಸಮಸ್ಯೆ ಎಷ್ಟೋ ಸಲ ಬೇಸರ ತರುತ್ತದೆ.

ಸೌದಿಯ ಮೂರನೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಈಗಿರುವ ರಾಜನ ಹೆಸರಿನಲ್ಲಿದೆ. (King Fahad International Airport) ಈ ಕಿಂಗ್ ಫಹದ್ ಅಂತರರಾಷ್ಟ್ರೀಯ. ನಿಲ್ದಾಣ ದಮಾದ್‌ದಲ್ಲಿದೆ. ಅಷ್ಟೊಂದು ಹೇಳಿಕೊಳ್ಳು ವಂತಹ ಜನನಿಬಿಡ ಪ್ರಸಿದ್ಧ ನಗರವಲ್ಲವಾದರೂ ಸುತ್ತೆಲ್ಲ ದೊಡ್ಡ ಎಣ್ಣೆಕಂಪನಿಗಳಿವೆ. ಸಮುದ್ರ ದಂಡೆಗುಟ ಸಾಕಷ್ಟು ಔದ್ಯೋಗಿಕತೆ ಜಾಗ್ರತೆಗೊಳ್ಳುತ್ತಿದ್ದಂತೆ ಅದಕ್ಕಾಗಿ ಬರುವ ಕೆಲಸಗಾರರ ಅನುಕೂಲಕ್ಕೆಂದು ಒತ್ತಡಬಂದಾಗ ಈ ನಿಲ್ದಾಣದ ಕಟ್ಟಡ ಸುರುವಾಯಿತು. ನನಗೇ ಈ ಏಪೋರ್ಟ ನೋಡಲಿಕ್ಕೆ ಸಾಧ್ಯವಾಗಲಿಲ್ಲ.
ದಮಾದ್‌ದಿಂದ ಸುಮಾರು 25-30 ಕಿ.ಮೀಗಳಷ್ಟು ಅಂತರದ “ಅಲ್‌ಕೋಬರ್‌” (Al-Kobar)ದಲ್ಲಿ ಶ್ರೀ ಶಿವನಂಜಪ್ಪ ಅವರ ಪತ್ನಿ ನಳಿನಿಯವರು ಬಾಂಬೆಯಿಂದ ಬಂದು ಎರಡು ವರ್ಷಗಳಾಗಿದ್ದವು. ಅವರು ಸಾಕಷ್ಟು ಸಲ ನಮ್ಮನ್ನು ಕರೆದರೂ ನಮಗೆ ಹೋಗಲಾಗಲಿಲ್ಲ. ಮಗಳು ಅಮೃತಾಳನ್ನಾದರೂ ಕಳಿಸಿರಿ ಎಂದಿದ್ದರು. ಹೀಗಾಗಿ ಅವಳೊಬ್ಬಳೇ ವಿಮಾನದಿಂದ ಹೋಗಿ ದಮಾಮ್ ನಿಲ್ದಾಣದಲ್ಲಿಳಿದಳು. ನಂತರ ಅವರಲ್ಲಿ ಹತ್ತು ದಿನ ಇದ್ದು ಅರಾಮವಾಗಿ (ಬೆಂಗಳೂರಿನ) ಊಟ-ತಿಂಡಿ ತಿಂದುಂಡು ಅಡ್ಡಾಡಿ ಸೂಪರ್‌ ಸ್ಟೋರ್‌ಗಳಿಗೆ ಭೇಟಿಕೊಟ್ಟು ಹಾಗೂ ದಮಾಮ್‌-
ಬಹರೇನ್‌ಗಳ ನಡುವೆ ಕಟ್ಟಿರುವ ಕಾಸವೇ ಬ್ರಿಡ್ಜ್ ಮೇಲೆಲ್ಲ ಅಡ್ಡಾಡಿ ಬಂದಳು.

ಈ ಏರ್ಪೊರ್ಟ್ ಹೊಸದಿದೆ. ಜೆಡ್ಡಾ, ರಿಯಾದ ಎರ್‌ಪೋರ್ಟ್‌ಗಳಿಗಿಂತಲೂ ಸುಂದರವಂತೆ. ಲಂಡನ್ನಿನ ಹೀತ್ರೋ, ಪ್ಯಾರಿಸ್ಲಿನ ಲಿಯೋನಾರ್ಡ ಡ ವಿಂಚಿ -ಮೊದಲಾದ ವಿಮಾನ ನಿಲ್ದಾಣಗಳೂ ಕೂಡಾ ಸುಸಜ್ಜಿತವಾಗಿಯೂ ಅಕರ್ಶಕವಾಗಿಯೂ ಇವೆ. ಅದರೆ ಸೌದಿಯ ಜೆಡ್ಡಾದ ವಿಮಾನ ನಿಲ್ದಾಣದ ಸುತ್ತಲೂ ಗಗನಚುಂಬಿಗಳಿಲ್ಲದಿರು
ವುದರಿಂದ ಇದರ ಸೌದರ್ಯ ವೈಶಾಲ್ಯಗಳು ಎದ್ದು ಕಾಣುತ್ತವೆ. ಯೂರೋಪಿನ ನಿಲ್ದಾಣಗಳಿಗೆ ಈ ಲಾಭವಿಲ್ಲ.

ಸೌದಿಯ ಈ ಮೂರು ಬೃಹತ್ ನಿಲ್ದಾಣಗಳು ಅವರ ದೇಶದ ಶೋಕೇಸ್‌ದೊಳಗೆ ಇಟ್ಟಂತಹ ಸುಂದರ, ಬೆಲೆಯುಳ್ಳ- ಉಪಯೋಗಿಸುವ ವಸ್ತುಗಳೆಂದು ಹೇಳಿದರೆ ತಪ್ಪಾಗಲಾರದು.

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇದು ಎಂಥಾ ಲೋಕವಯಯ್ಯ ?
Next post ಶವ ಕ್ಷೇತ್ರಗಳು

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…