ಅಲ್ಪ ತೃಪ್ತನಾಗಿರೆ
ಹೆಚ್ಚು ಸುಖವು ಜೀವನವು|
ಬಾಳು ಸುಗಮ ಸುಂದರ
ಬದುಕು ಬಲು ಹಗುರ|
ಇಲ್ಲದಿರೆ ಎಲ್ಲದಕೂ ಬೇಸರ
ವಿಷಮಸ್ಥಿತಿ, ಬದುಕು ಭೀಕರ||

ಇತಿಮಿತಿಯಲ್ಲಿರುವುದೇ ಬಲು ಸೊಗಸು,
ನನಸಾಗುವುದೆಲ್ಲಾ ಕಂಡ ಕನಸು|
ಮಿತಿ ಮೀರಿದರೆಲ್ಲಾ ಬರೀ ಕೆಡಕು||

ಅತಿಯಾದ ಆಸೆ ತರುವುದು ನಿರಾಸೆ|
ಬರೀ ಹಗಲುಗನಸು ನೋಡಲಷ್ಟೇ ಸೊಗಸು
ನಿಜವಾಗದೆಂದೆದಿಗೂ ಸತ್ಯಕ್ಕೆ ದೂರವಿಹುದು||

ಆಸೆಗಳಿರಬೇಕು ಈಡೇರುವಷ್ಟು,
ನಿಜದಿ ನೆರೆವೇರಿಸುವಷ್ಟು|
ಉಣಬೇಕು ಹಸಿವ ಇಂಗಿಸುವಷ್ಟು,
ಉಳಿಸಬೇಕು ನಾಳೆಮಾತ್ರಕೆ ಆಗುವಷ್ಟು
ಎಲ್ಲರಿಗೂ ಎಲ್ಲದೂ ಸಿಗಬೇಕು||
*****

ಜಾನಕಿತನಯಾನಂದ
Latest posts by ಜಾನಕಿತನಯಾನಂದ (see all)