ಹೀರುತ್ತಿರುವುದು ಇಂಧನವಲ್ಲ ಪ್ರಕೃತಿ ಮಾತೆಯ ರಕ್ತ ಕುಸಿದರೆ ತಾಯಿ ನಮಗಿನ್ನಾರು ಅರಿಯಲು ಆಗೊ ನೀ ಶಕ್ತ ; ಗೆಳೆಯ ಅರಿಯಲು ಆಗೊ ನೀ ಶಕ್ತ || ಪ || ಸಾಲದೆ ಹೊಂಗೆ ಸಾಲದೆ ಬೇವು ಸಾಲದೆ ಹಿಪ್ಪೆ ಸಾಲು ಎಷ್ಟು ಬೇಕೊ ತೈಲವು ನಿನಗೆ ಕಣ್ತೆರೆದಿಂದು ಹೇಳು ತಾಯಿ ಉರಿದರೆ ಧಗಧಗ ಎಂದು ನಿನ್ನಯ ಹೊಟ್ಟೆ ತಂಪೆ? ಕೆನ್ನ...

ಕಗ್ಗತ್ತಲ ಭೇದಿಸಲೊಂದು ಬಿಸಿಲ ಕೋಲು ಉಸಿರಾಡಲು ಒಂದಿಷ್ಟು ಗಾಳಿ ಇನ್ನೇನು ಬೇಕು? ಕಚ್ಚಲೊಂದು ಬಣ್ಣದ ಚೆಂಡು ಚಚ್ಚಲೊಂದು ಮರದ ಕುದುರೆ ಇನ್ನೇನು ಬೇಕು? ಬರೆಯಲೊಂದು ಮಣಿಕಟ್ಟಿನ ಸ್ಲೇಟು ಬತ್ತಾಸು ಕೊಳ್ಳಲು ಆರು ಕಾಸು ಇನ್ನೇನು ಬೇಕು? ಕಣ್ಣಿಗೆ ಹ...

ನಮ್ಮ ದೇಶದ ಸ್ವಾತಂತ್ರ್ಯ ಅಹಿಂಸಾತ್ಮಕವಾಗಿ ಲಭ್ಯವಾಯಿತೆಂದು ಹೇಳಲಾಗುತ್ತಿದೆ. ಆದರೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಂಭವಿಸಿದ ಕೆಲವು ಘಟನೆಗಳು ತದ್ವಿರುದ್ಧ ನಿಲುವನ್ನು ನಿರೂಪಿಸುತ್ತವೆ. ಹೀಗೆಂದ ಕೂಡಲೇ ನಮ್ಮ ದೇಶದ ಜನರೆಲ್ಲರೂ ಶಸ್ತ್ರ...

ಅಧ್ಯಾಯ ೧೧ ಸಂತಸದ ನಡುವಿನ ಚಿಂತೆ ತಿಂಡಿ-ಕಾಫಿ ತಂದಿಟ್ಟು ಬಲವಂತ ಮಾಡಿದರೂ ಯಾಕೋ ತಿನ್ನಲು ಮನಸ್ಸಾಗದೆ ಬರೀ ಕಾಫಿ ಮಾತ್ರ ತೆಗೆದುಕೊಂಡಳು. ಒಳಗಿರುವ ಹಿರಿಯ ಜೀವವನ್ನು ಒಮ್ಮೆ ನೋಡಬೇಕೆಂದು ಮನಸ್ಸು ಬಯಸಿತು. ಅದನ್ನು ವ್ಯಕ್ತಪಡಿಸಿದಳು. “...

ಚುನಾವಣೆ, ಕೋಮು ಗಲಭೆ-ಇಂಥ ಕೆಲವು ಮುಖ್ಯ ಸಂದರ್ಭಗಳಲ್ಲಿ ನಮ್ಮ ಜನರ ಕಲ್ಪನಾಶಕ್ತಿಗೆ ಮೇರೆಯೇ ಇರುವುದಿಲ್ಲ. ಎಲ್ಲಾ ರೀತಿಯ ವದಂತಿಗಳನ್ನು ಹುಟ್ಟು ಹಾಕುತ್ತಾ, ಹಬ್ಬಿಸುತ್ತ, ವಾತಾವರಣವನ್ನೇ ತಬ್ಬಿಬ್ಬು ಮಾಡುತ್ತಾ ಕೆಲವರು ತಮ್ಮ ಪ್ರತಿಭಾ ಶಕ್ತಿ...

ಜಗತಿನಲ್ಲಿ ಈಗ ಎಲ್ಲಿ ಯಾರೇ ಅಳುತ್ತಿರಲಿ, ಕಾರಣವಿಲ್ಲದೆ ಅಳುತ್ತಿದ್ದರೆ, ನನಗಾಗಿ ಅಳುತಿದ್ದಾರೆ. ಜಗತ್ತಿನಲ್ಲಿ ಈಗ ಎಲ್ಲಿ ಯಾರೇ ನಗುತ್ತಿರಲಿ, ಕಾರಣವಿಲ್ಲದೆ ನಗುತ್ತಿದ್ದರೆ, ನನ್ನ ಕಂಡು ನಗುತ್ತಿದ್ದಾರೆ. ಜಗತಿನಲ್ಲಿ ಈಗ ಎಲ್ಲಿ ಯಾರೇ ಹೋಗುತ...

ಅಮ್ಮ ನಿನ್ನ ನೋಟದಲಿ ಎಂಥ ಶಕ್ತಿ ತುಂಬಿದೆ || ನಿನ್ನ ಕರುಣೆಯಿಂದ ಕಲ್ಲು ಕರಗಿ ಬರಡು ಭೂಮಿ ಹಸಿರಾಯ್ತು ||ಅಮ್ಮ|| ನಿನ್ನ ದಯೆಯಿಂದಲಿ ಹಾಲಾಹಲ ಮಂಥನದಿಂದ ಅಮೃತವಾಯ್ತು ||ಅಮ್ಮ|| ನಿನ್ನ ಹಾಲು ಕುಡಿದ ಕರುಳಬಳ್ಳಿ ನಿನ್ನ ನೆತ್ತರ ನರನಾಡಿ ಮಿಡಿತವ...

ಹನಿ ಹಾಕಲು ಹೊರಟ ಸಂಜಿ. ಮಳೆ ಬಿದ್ದೂ ಕುಣಿಯದ ನವಿಲು. ಅರ್ಧ ಆಕಾಶವನ್ನೆ ಮುಚ್ಚಿದೆ ಮುಗಿಲು. ಸಮೆದ ಬೆಣಚು ಕಲ್ಲಿನ ತುಂಡು ಚಿಕ್ಕಿ, ಬಾನಿನಲ್ಲಿಲ್ಲ ಒಂದೇ ಒಂದು ಹಕ್ಕಿ ಸ್ತಬ್ಧ ಗಿಡಮರ, ಥಂಡಿಗಾಳಿ, ನೇಸರನಿಲ್ಲದ ಸಭೆ ಬೇಸರವೋ ಬೇಸರ. ಏನು ಸಾಧಿಸ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...