ಅಮ್ಮ ನಿನ್ನ ನೋಟದಲಿ
ಎಂಥ ಶಕ್ತಿ ತುಂಬಿದೆ ||
ನಿನ್ನ ಕರುಣೆಯಿಂದ
ಕಲ್ಲು ಕರಗಿ ಬರಡು
ಭೂಮಿ ಹಸಿರಾಯ್ತು ||ಅಮ್ಮ||
ನಿನ್ನ ದಯೆಯಿಂದಲಿ
ಹಾಲಾಹಲ ಮಂಥನದಿಂದ
ಅಮೃತವಾಯ್ತು ||ಅಮ್ಮ||
ನಿನ್ನ ಹಾಲು ಕುಡಿದ
ಕರುಳಬಳ್ಳಿ ನಿನ್ನ
ನೆತ್ತರ ನರನಾಡಿ ಮಿಡಿತವು ||ಅಮ್ಮ||
ನೀನೇ ದೈವ ನೀನೇ ಭಾವ
ನೀನೆ ಭಕ್ತಿಯ ಮುಕ್ತಿಯು
ನೀನೇ ಎನ್ನ ಶಕ್ತಿಯು ||ಅಮ್ಮ||
ಹುಟ್ಟಿದೆ ನಿನ್ನ ಬಸಿರಲ್ಲಿ
ಮೆಚ್ಚಿದೆ ನಿನ್ನ ಹೆಸರಲ್ಲಿ
ನೀನೇ ಎನ್ನ ಚೇತನವು ||ಅಮ್ಮ||
*****