ನಮ್ಮ ನಾಗರಿಕತೆಯತ್ತ ನೋಡಿದರೆ ನಾವು ಮನುಷ್ಯ ಸಮೂಹವಾಗಿ ಸಂಪಾದಿಸಿಕೊಂಡಿರುವ ಜ್ಞಾನಸಂಪತ್ತು ಅಗಾಧವೂ ಅಪರಿಮಿತವೂ ಆದುದು ಎಂದು ನಮಗನಿಸಬಹುದು. ಆದರೂ ನಾವು ಅರಿಯುವುದಕ್ಕೆ ಇನ್ನಷ್ಟು ಇದೆ-ಅದೆಷ್ಟು ಎನ್ನುವ ಬಗ್ಗೆ ನಮಗೆ ಸರಿಯಾದ ಅರಿವಿಲ್ಲದಷ್ಟು...

ಕೇಳಿಸಿಕೊಳ್ಳುವವನಂತೆ ದೂರ ದೂರ ಬಹು ದೂರದ ಮೌನ… ಉಸಿರು ಬಿಗಿ ಹಿಡಿದು ಕಿವಿಗೊಟ್ಟರೂ ನಮಗೆ ಕೇಳದ ನಿಶ್ಯಬ್ಧ. ಅವನೊಂದು ನಕ್ಷತ್ರ. ಅಸಂಖ್ಯ ಬೃಹತ್ ತಾರೆಗಳು, ನಮ್ಮ ಕಣ್ಣಿಗೆ ಕಾಣದೆ, ಅವನ ಸುತ್ತುವರೆದಿದೆ. ಅವನೇ ಎಲ್ಲಾ. ಇಲ್ಲೆ ಸುಳಿದಾಡ...

ಮೋಹನ ಮುರಳಿ ಕೃಷ್ಣಾ ಬೆಳದಿಂಗಳಿನಾ ಸಂಜೆಯಲಿ ಕೊಳಲನಾದದ ಅಲೆಗಳು ರಾಧೆಯ ಮನವನು ಕಾಡುವುವು ಎಲ್ಲಿರುವೆ ಹೇಳು ಮುಕುಂದಾ || ಎಲ್ಲಿ ಹುಡುಕಿದರು ಕಾಣದಾಗಿರುವೆ ಕಾಣುವಾತುರದಿ ರಾಧೆಯ ಕಂಗಳು ಮುದ್ದಾಡುವಾತುರದಿ ಮನವು ವಿರಹದ ವೇದನೆಯಲಿ ರಾಧೆಯೂ || ಚ...

ಯಾವ ಘೋಷ ಇದು ಇದಕ್ಕಿದ್ದಂತೆ ಈ ಕನಕಾಂಬರಿ ಸಂಜೆಯಲಿ ? ತೇಲಿ ಹಾಯುತಿದೆ ಪರಿಮಳದಂತೆ ತುಂಬಿ ಹರಿವ ಈ ಗಾಳಿಯಲಿ ತಾಳಮೃದಂಗದ ಬಡಿತ ಹಬ್ಬುತಿದೆ ಹೃದಯಕೆ ಲಗ್ಗೆಯ ಹೂಡುತಿದೆ ಮೋಹಕ ಗಾನದ ಕಂಠದೇರಿಳಿತ ಜೀವಕೆ ಮರುಳನು ಕವಿಸುತಿದೆ ಯಾವ ಅಲೌಕಿಕ ಶ್ರುತಿ...

ಜನ ನಾಯಕ ನಡೆದಾಗ ಎಂಥಾ ನೆಲವೂ ನಡುಗುವುದು ಕಡಲಿನ ನೀರೂ ಬರಡುವುದು ಜನ ನಾಯಕ ಕುಳಿತಾಗ ಎಂಥಾ ಪೀಠವು ಕುಲುಕುವುದು ಸಿಂಹಾಸನವೂ ಅಲುಗುವುದು ಜನ ನಾಯಕ ನುಡಿದಾಗ ಎಂಥಾ ಸದ್ದೂ ಅಡಗುವುದು ಗುಡುಗು ಕೂಡ ನಿಲ್ಲುವುದು ಜನ ನಾಯಕ ನಕ್ಕಾಗ ಎಂಥಾ ಹೂವೂ ಅರಳ...

ಪ್ರತಿವರ್ಷದಂತೆ ಏಪ್ರಿಲ್ ಹದಿನಾಲ್ಕು ಬಂದು ಹೋಯಿತು. ಅಂಬೇಡ್ಕರ್ ಒಂದು ಆಚರಣೆಯಾಗಿ ಹದಿನಾಲ್ಕರಂದು ಕಾಣಿಸಿಕೊಂಡು ಕಣ್ಮರೆಯಾದರು! ಅಂಬೇಡ್ಕರ್ ಆತ್ಮವಿಶ್ವಾಸ ಮತ್ತು ಪ್ರತಿಭಟನೆಯ ಒಂದು ಪ್ರತೀಕ. ಸಾಮಾಜಿಕ ಹೋರಾಟದ ಒಂದು ದಿಕ್ಸೂಚಿ. ಅಧ್ಯಯನ ಮತ್...

ಮೇಷ್ಟ್ರು : “ಭಾರತದ ರಾಜಧಾನಿ ಯಾವುದು?” ಶೀಲಾ : “ಬೆಂಗಳೂರು” ಮೇಷ್ಟ್ರು : “ತಪ್ಪು ಉತ್ತರ ಕೊಡ್ತಿದ್ದಿ.” ಶೀಲಾ : “ಇಲ್ಲ ಸಾರ್ ನೀವು ತಪ್ಪು ಪ್ರಶ್ನೆ ಕೇಳಿದ್ರಿ… ಕರ್ನಾಟಕದ ರಾಜಧಾನ...

ರಾಮ ಅತ್ತ ಸೀತೆ ಇತ್ತ ನಡುವೆ ರಾತ್ರಿ ಕೂಗಿತೆ ನಿನ್ನ ಬಿಲ್ಲು ಜಂಗು ತಿಂದು ಹುಲ್ಲು ಹುಡಿಯ ಮಲ್ಲಿತೆ ||೧|| ರಾಮ ರಾಮ ರಾಮ ಎನುತೆ ಕಾಮ ಕಾಮ ಎಂದೆನೆ ಸೀತೆ ಪ್ರೀತೆ ಪೂತೆ ಎನುತೆ ಕೋತಿ ದೂತೆ ಯಾದೆನೆ ||೨|| ಕಲಿಯ ಕೈಯ ಬಲಿಯು ಆದೆ ಸೀತೆ ಕೆಟ್ಟು ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...