
ಹಸಿವಿನ ಆಕರ್ಷಣೆ ರೊಟ್ಟಿಯಾಕೃತಿಯೆಡೆಗೆ ರೊಟ್ಟಿಯ ಧ್ಯಾನ ಹಸಿವೆಯಂತರಂಗದ ನಿಷ್ಕಲ್ಮಶ ನಿರಾಕಾರದ ಕಡೆಗೆ *****...
ಹಸಿವು ರೊಟ್ಟಿಗಾಗಿ ನಿರಂತರ ಕಾಯಬೇಕು ರೊಟ್ಟಿ ಹಸಿವೆಗಾಗಿ ನಿರತ ಬೇಯಬೇಕು ಕಾಯುವ ಬೇಯುವ ಪ್ರಕ್ರಿಯೆಯಲಿ ನಿರ್ವಿಕಾರ ಬದ್ಧತೆ ಸ್ಥಾಯಿಗೊಳಬೇಕು. ಅಲ್ಲಿಯವರೆಗೂ ಎಲ್ಲವೂ ಬರೀ ಆಟ. *****...













