Home / Poem

Browsing Tag: Poem

ಬಾಯ್ತೆರೆದು ಎಲ್ಲ ನುಂಗಲು ಕಾದಿರುವ ದೈತ್ಯ ಹಸಿವು ಚೂರೇ ಚೂರು ಒಡಲಿಗೆ ಬಿದ್ದೊಡನೆ ಅಕ್ಷಯಗೊಳುವ ರೊಟ್ಟಿಯದ್ಭುತಕ್ಕೆ ಬೆಕ್ಕಸ ಬೆರಗು. ಗಳಿಗೆ ಬಟ್ಟಲು ಖಾಲಿಯಲ್ಲ ರೊಟ್ಟಿ ಮುಗಿಯುವುದಿಲ್ಲ. *****...

ಸೂಜಿ ಮೊನೆ ಹೊತ್ತ ಸಂಬಂಧದ ಚೌಕಟ್ಟಿನ ಸಂ-ಸಾರ ದಾರವಾಗಿ ಒಡಲಲಿ ಸೇರಿದ ಕ್ಷಣ ಶುರುವಾಗಿದೆ ಹಸೀನಾದ ಬಾಳ ಬಟ್ಟೆ ನೇಯ್ಗೆ ಕೆಲಸ ಗೊತ್ತಿರದ ಕೈಗಳು ಮಾಡಿದ ಸೂಜಿ ಎಸಳು ಪ್ರೀತಿಯಿಂದ ಹೊಸೆದ ದಾರ ಎತ್ತಣದ ಸಂಬಂಧಗಳು ಇತ್ತಣವಾಗಿ. ಒಮ್ಮೊಮ್ಮೆ ಬೆಸೆದು ...

ಏನೇನೂ ಬೇಡವೆಂದು ತಪಸ್ಸು ಮಾಡಲು ಊರಾಚೆಗೆ ಹೋದ ಸನ್ಯಾಸಿಗೆ ಇಲಿಗಳ ಕಾಟ ತಪ್ಪಿಸಲು ಬೆಕ್ಕು ತಂದ ಬೆಕ್ಕಿಗೆ ಹಾಲೆಂದು ಹಸು ತಂದ ಹಾಲು ಕರೆಯಲು ಹೆಣ್ಣು ತಂದ ಮತ್ತಿನ್ನೇನು ಸನ್ಯಾಸಿ ಸಂಸಾರಿಯಾದ. *****...

ಅರವತ್ತರ ಮುದುಕ ಹತ್ತರ ಹುಡುಗಿ ಇಬ್ಬರೂ ಸೇರಿ ಸವೆಸಿದರು ದಾರಿ ಮುಂದೆ ಮುಂದೆ ಸಾಗಿದ ಮುದುಕ ಹಿಂದೆ ಹಿಂದೆಯೆ ಉಳಿದಳು ಹುಡುಗಿ ಮುದುಕನಿಗದು ನಿತ್ಯದ ದಾರಿ ನೋಡಲೇನಿದೆ? ಹುಡುಗಿಗೆ ಪ್ರತಿಯೊಂದು ಹೊಸದು ಬಿಟ್ಟರೆ ಸಿಗುವದೆ? ಹುಡುಗಿ ಹಳ್ಳದಲಿ ಕಾಲ...

ಹಿಂದೊಮ್ಮೆ ಕೂಡಾ ಹೀಗೆ ಆಗಿತ್ತಲ್ಲ. ಗಂಟುಗಂಟಾಗಿ ಸಿಕ್ಕು ಬಿದ್ದು ಅ- ಕ್ಷರದ ತಾರೆಗಳೆಲ್ಲ ನೆಲಕ್ಕೆ ಚೆಲ್ಲಿದಂತೆ ಜ್ಞಾನಪಾತ್ರೆಯ ಎದುರು ಹಸಿದ ಕಂಗಳು ಮೂರ್‍ಚೆಗೊಂಡ ಮನಸ್ಸು ನಗ್ನವಾಗಿ ನಿಂತುಬಿಟ್ಟವು ಕಾಲ ಚಲಿಸಲಿಲ್ಲ. ಆದರೆ ಮಜ್ಜಿಗೆಯೂಡಿದ ಮ...

ಎಲ್ಲವನ್ನೂ ಮರೆತುಬಿಡಬಹುದು ಆದರೆ ಮರೆಯುವುದು ಹೇಗೆ ಖರ್ಬೂಜದ ಹಣ್ಣುಗಳನ್ನು ಹೇರಿಕೊಂಡು ಬೀದಿಯ ತಿರುವಿನಲ್ಲಿ ಮರೆಯಾದ ಎತ್ತಿನ ಗಾಡಿಯನ್ನು? ನಮ್ಮ ಅನೇಕ ನೆನಪುಗಳ ಕನಸುಗಳ ಗಾಡಿ ಜನನಿಬಿಡ ಬೀದಿಯಲ್ಲಿ ನಾವೆಲ್ಲರೂ ನೊಡುತ್ತಿದ್ದಂತೆಯೇ ಕಾಣಿಸದಾಯ...

ಜೆರುಸಲೆಮ್ಮಿನ ಹೋಟೆಲಿನ ವೆರಾಂಡದಲ್ಲಿ ಕುಳಿತು ಹೀಗೆ ಬರೆಯುವುದೇ ‘ಮರುಭೂಮಿಯಿಂದ ಸಾಗರದತ್ತ ಸುಂದರ ದಿನಗಳು ಸಾಗಿ ಬರುತಿವೆ’? ಅಥವ ಹೀಗೆ ‘ಇಲ್ಲಿ ಈ ಜಾಗದಲ್ಲಿ ಕಾಣುತ್ತಿರುವ ಗುರುತು ನನ್ನ ಕಂಬನಿ ಬಿದ್ದು ಇಂಕು ಕಲಸಿ ಹೋದದ್ದರ ಗುರುತು’? ನೂರು...

ರಾಮ ಸುಂದರ ರಹಿಮ ಬಂಧುರ ತೀರ್ಪು ಸರಿಸಮ ಗಮಗಮ ಅವರು ಬಾಳಲಿ ಇವರು ಉಳಿಯಲಿ ಬೆಳಕು ಬೆಳಕಿಗೆ ಸರಿಗಮ ಭೂಮಿ ಸೀಮಿ ಬಯಲು ಬಾನು ಎಲ್ಲ ದೇವನ ಮಂದಿರ ಹೂವು ಹಸಿರಿಗೆ ಪಕ್ಷಿ ವೃಕ್ಷಕೆ ಬೇಡ ಬೇಡ ಕಂದರ ವಿಶ್ವ ಪ್ರೇಮದ ಗೋಪುರಽಽಽ *****...

1...5354555657...449

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...