Home / Kannada

Browsing Tag: Kannada

ಅಪ್ಪ ನಿನ್ನೆ ಸರ್ಕಸ್ ತೋರ್ಸೋಕ್ ಕರ್ಕೊಂಡು ಹೋಗಿದ್ರು ಏನ್ ಮಜಾ! ಟೆಂಟ್ ಭರ್ತಿ ಜನ ಸೇರಿದ್ರು ಸರ್ಕಸ್ ಮಾಡೋ ಜನಗಳ್ ಜೊತೆ ಪ್ರಾಣೀನೂ ಇದ್ವು, ಮಂಗ ಕುದುರೆ ನಾಯಿ ಕರಡಿ ಎಲ್ಲಾ ಸೇರಿದ್ವು. ಚಾರ್ಲಿ ತಲೆಮೇಲ್ ಹತ್ತಿ ಕೋತಿ ಲಾಗ ಹಾಕ್ಬಿಡ್ತು, ಅವನ...

ನಕ್ಕಂತೆ ಇರುವ ಸಿರಿಮೊಗವೆ! -ಅದಕೆ ತಕ್ಕಂತೆ ಇರುವ ಕಣ್‌ಬೆಳಕೆ!- ನಿಂತಂತೆ ಕಾಣುವ ನಿರಾತಂಕ ದೀಪವೆ! ಅಂತರಂಗದ ಜೀವ ನದಿಯೆ! ನಕ್ಕಂತೆ ಇರುವ ಸಿರಿಮೊಗವೆ! -ಹೂಗೆನ್ನೆ- ಗುಕ್ಕುವಂತಿರುವ ನೊರೆಹಾಲೆ! ತಂತಿಯಲಿ ಇಂಪು ಹರಿದಂತೆ ಈ ಮನೆಯೊಳಗೆ ಸಂತಸವ ...

ಕನ್ನಡದ ತಿಳಿನೀರ ನಾನೊಂದು ಬೊಗಸೆಯಲಿ ಕುಡಿದು ನೋಡಿದೆನದರ ಸವಿಯನ್ನು ನಾನೊ; ಕುಡಿಕುಡಿದು ಮುದವಾಂತು ನಲ್ಗಬ್ಬ ಸಾರವನು ಬಾಯ್ದುದಿಯೊಳನವರತ ಇರಿಸಲೆಳಸಿದೆನೊ! ಎಷ್ಟು ತತ್ವದ ಗೀತ?  ಎಷ್ಟು ಮೋಹದ ಮಾತು? ವಚನರಾಶಿಯ ಸಾರ, ಪುರಾಣಗಳ ಮೇಳ! ಗದ್ಯ ಪದ್...

ನಿಶ್ಚಿಂತನಿರಾಳದಲ್ಲಿ ಆಡುವ ಮಹಾದೇವನ ಕರ್ತೃವೆಂದರಿದ ಕಾರಣದಿಂದ, ತತ್ವವೆಂಬುದನರಿದು ಮನವ ನಿಶ್ಚಿಂತವ ಮಾಡಿ, ನಿಜಸುಖದಲ್ಲಿ ನಿಂದು, ಕತ್ತಲೆಯ ಹರಿಯಿಸಿ, ತಮವ ಹಿಂಗಿಸಿ, ವ್ಯಾಕುಲವನಳಿದು, ನಿರಾಕುಳದಲ್ಲಿ ನಿಂದು, ಬೇಕುಬೇಡೆಂಬುಭಯವಳಿದು, ಲೋಕದ ...

ಅಲೆ ಅಲೆಗಳು ಎಳೆದು ಮುದ್ದಿಸುತ ಮುನ್ನುಗ್ಗುವ ಹಡಗಿನ ಅಂಚಿಗೆ ನಾನೊರಗಿ ನಿಂತಿದ್ದೆ. ತುಂತುರ ಮಳೆಗೆ ಹೊಯ್ದಾಟದ ಹಡಗಿನ ಗಮ್ಮತ್ತಿಗೆ ಮೈಯೆಲ್ಲಾ ಕಚಗುಳಿಯಾಗುತ್ತಿತ್ತು ದೂರದ ದೀಪಸ್ತಂಭ ಸರಹದ್ದಿನ ಭವ್ಯ ಮಹಲುಗಳು ಸರಕು ಹಡಗುಗಳ ಓಡಾಟ ಮಂಜು ಮೋಡಗ...

ದುಡಿಯುತಿಹರೂ ನಾವೆ ಮಡಿಯುತಿಹರೂ ನಾವೆ ಜಗಕೆ ಅನ್ನವ ನೀಡುತಿಹರು ನಾವೆ! ತುತ್ತೊಂದು ಅನ್ನವನು ಬೇಡುತಿಹೆವು! ನಿಮಗಾಗಿ ಜೀವನವ ಸವೆಸುತಿಹೆವು! ಮೈಯ ದಂಡಿಪರಾವು ರಕ್ತ ಹರಿಸುವರಾವು ದಿನವು ಜನ್ಮವ ತೇಯುತಿಹರು ನಾವು! ಧನಿಕರಿಗೆ ಹೊನ್ನ ಬಣ ಕೂಡಿಸಿಹ...

ಪ್ರಿಯ ಸಖಿ, ಪ್ರಪಂಚದಲ್ಲೇ ಅತಿ ಶ್ರೇಷ್ಠ ಜೀವಿ ಮಾನವನೆನ್ನುತ್ತಾರೆ. ಏಕೆಂದರೆ ಅವನು ಚಿಂತಿಸಬಲ್ಲ, ಮಾತಾಡಬಲ್ಲ, ವಿವೇಚಿಸಬಲ್ಲ  ಎಲ್ಲಕ್ಕಿಂತಾ ಹೆಚ್ಚಾಗಿ ಎಲ್ಲವನ್ನೂ ಪ್ರೀತಿಸಬಲ್ಲ ಮನಸ್ಸೊಂದು ಅವನಲ್ಲಿದೆ. ಅದೇ ಅವನ ಹಿರಿಮೆಯನ್ನು ಹೆಚ್ಚಿಸಿದ...

ಇರುವೆ ಇರುವೆ ಬಾ ಇಲ್ಲಿ ಯಾವ್ಯಾವ್ ಊರು ನೋಡಿದ್ದೀ? ಯಾವ್ಯಾವ್ ಊರ್‍ನಲ್ ಏನೇನ್ ಕಂಡಿ, ಈಗ ಎಲ್ಲಿಗ್ ಹೊರಟಿದ್ದೀ? ಬಾಗಿಲ ಸಂದು, ಗೋಡೆ ಬಿರುಕು ಬೆಲ್ಲದ ಡಬ್ಬ, ಹಿತ್ಲು ತಿಂಡೀ ಇರೋ ಹುಡುಗನ ಜೇಬು, ಹಾಲಿನ ಪಾತ್ರೇ ಸುತ್ಲೂ. ಒಂದೊಂದ್ ಊರೂ ಒಂದೊಂ...

ಅಭಿಮನ್ಯು ವಧೆಗೆ ಖತಿಗೊಂಡ ಪಾರ್ಥನ ಕಂಡು ಅಪಾರ ಕೃಪೆಯಿಂದ ಶ್ರೀ ಕೃಷ್ಣ ನೆರವಿಗೆ ಬಂದು ಸುದರ್ಶನವನೆಸೆಯಲಾ ಹಗಲ ಬಾನ್ಗೆ, ಅದು ಮರೆಮಾಡಿತಂತೆ ಆ ಸೂರ್ಯಮಂಡಲವನು. ರವಿ ಮುಳುಗಿ ರಾತ್ರಿಯಾಯಿತು ಎನುವ ಭ್ರಾಂತಿಯಲಿ ತಲೆಯನೆತ್ತಿದ ಜಯದ್ರಥನ ತಲೆ ನಿಮ...

ಕಂಡೆನೊ ನಾ! ಬೇವಿನ ಜೀವದ ಈ-ಬಾ-ಳು!! ಈ ಲೋಕ ಈ ರಾಜ್ಯ ಈ ಊರು ಈ ಮನೆ ಕಾಲಾನುಕ್ರಮದಲ್ಲಿ ಜನರಾಶಿ ಒಂದಾಗಿ, ಬಲ್ಲಿದ ಬಡವನ ಶತಕೋಟಿ ಸಂಸಾರ-  ||ಕಂ|| ಸಾಗರ-ಭೂಮಿಯ ನಡೆ ಕಂಡು ಮೊರೆವುದೊ, ಯೋಗ ತಾರಕೆಗಳು ಮಿಣುಮಿಣುಕಿ ನಗುವುದೊ; ಆಗದೀ ಜನಭಾರ ಕಲ್...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...