Iruve
ಇರುವೆ ಇರುವೆ ಬಾ ಇಲ್ಲಿ
ಯಾವ್ಯಾವ್ ಊರು ನೋಡಿದ್ದೀ?
ಯಾವ್ಯಾವ್ ಊರ್‍ನಲ್ ಏನೇನ್ ಕಂಡಿ,
ಈಗ ಎಲ್ಲಿಗ್ ಹೊರಟಿದ್ದೀ?

ಬಾಗಿಲ ಸಂದು, ಗೋಡೆ ಬಿರುಕು
ಬೆಲ್ಲದ ಡಬ್ಬ, ಹಿತ್ಲು
ತಿಂಡೀ ಇರೋ ಹುಡುಗನ ಜೇಬು,
ಹಾಲಿನ ಪಾತ್ರೇ ಸುತ್ಲೂ.

ಒಂದೊಂದ್ ಊರೂ ಒಂದೊಂದ್ ಥರ.
ಬಸ್ಸೇ ಇಲ್ಲದ ಊರ್ಗೆ
ನಡಕೊಂಡ್ಹೋಗೋಗೇ ಬಂದಿದೀನಿ
ಚಪ್ಲಿ ಇಲ್ದೇ ಕಾಲ್ಗೆ!

ಸಕ್ಕರೆ ಬಂಡೆ, ಬೆಲ್ಲದ ಬೆಟ್ಟ
ಹಾಲಿನ ಲೋಟದ ಬಾವಿ
ಸುತ್ತಿ ಈಗ ಹಿಡಿದಿದ್ದೀನಿ
ಮತ್ತೆ ಮನೇ ಹಾದಿ.
*****