ಕಂಡೆನೊ ನಾ!

ಕಂಡೆನೊ ನಾ! ಬೇವಿನ ಜೀವದ ಈ-ಬಾ-ಳು!!

ಈ ಲೋಕ ಈ ರಾಜ್ಯ ಈ ಊರು ಈ ಮನೆ
ಕಾಲಾನುಕ್ರಮದಲ್ಲಿ ಜನರಾಶಿ ಒಂದಾಗಿ,
ಬಲ್ಲಿದ ಬಡವನ ಶತಕೋಟಿ ಸಂಸಾರ-  ||ಕಂ||

ಸಾಗರ-ಭೂಮಿಯ ನಡೆ ಕಂಡು ಮೊರೆವುದೊ,
ಯೋಗ ತಾರಕೆಗಳು ಮಿಣುಮಿಣುಕಿ ನಗುವುದೊ;
ಆಗದೀ ಜನಭಾರ ಕಲ್ಭೂಮಿ ಆಳುವುದೊ-  ||ಕಂ||

ತತ್ವಗಳೊಂದೆಡೆಽ ಉದ್ಧಾರ ಕಾಯ್ವುವು,
ನೀತಿಗಳ್ ಬಿರುಗಾಳಿ ಅಲೆಯೊಳು ಸಾಗ್ವುವು;
ಮಾತು ಮಾತಿನ ಜೀವ, ತೋರಲಿದರೆ ಜೀವ-  ||ಕಂ||

ಅವಸರದ ಆಲಾಪ, ದಣೀದ ದೇಹಿಯ ತಾಪ,
ಭುವನತ್ರಯದ ಪಾಪ, ಸಮ್ಮಿಳಿತ ಮಾಕೂಪ,
ಭವ ಸರಸಿಜನದು ಸರಸತಿಯರ ಶಾಪ-  ||ಕಂ||

ಮನುಜನ ಮನಶ್ಶಕ್ತಿ ಮರುಳಾಗಿ ಕಲ್ಲಂತೆ,
ತನುಮನವೆಲ್ಲವು ಸ್ವಾರ್ಥಕ್ಕೆ ಮರೆಹೋಗಿ
ಜನಗಣವು ಪಶುಗಣವಾದ ವೈಚಿತ್ರ್‍ಯವೊ-  ||ಕಂ||

ರಂಗುರಂಗಿನ ತಳಕು, ಬಣ್ಣ ಬಣ್ಣದ ಬೆಳಕು;
ಶೃಂಗಾರ ಸಂಪತ್ತು ನಗುಸರಸ ಸವಿಮಾತು;
ಭೃಂಗಕುಂತಲ ‘ಷೋಕು’, ಕೃತಕ ಜೀವದ ಮಂಕು-  ||ಕಂ||

ಜನ ಜನಿತ ಜನಮೋಹ, ಜೀತ ಜೀತದ ಜೀವ,
ಗಣನೀಯ ಗಂಭೀರ, ಚಂಚಲ ವ್ಯವಹಾರ,
ದಣಿದ ಬಾಳಿನ ಸಾರ ಸಾಕು ಸಾಕು ಸಾಕೀ ಹಾರ!  ||ಕಂ||

ಒಂದಿಽನ ನಾನೊಂದು ಪೂಗಿಡವ ನಟ್ಟೆನೊ,
ಮುಂದಾರು ದಿನ ಕಳೆದು ನಾನೋಡಿ ಅತ್ತೆನೊ;
ಅಂದಿಽತು ನನಗಽದು ‘ಚಿಗುರೆಽಲೆ ಕೊಡೆ’ನೆಂದು-  ||ಕಂ||

ಹಸುರಾಂತ ವನಶೋಭೆ ನೀಲಾಕಾಶದ ಪ್ರಭೆ,
ಹಸುಗೂಸು ಹುಸಿ ಸೊಬಗು ಪಂಚಭೂತದ ಬೆಡಗು,
ನಸುನಗುತ ಒಲಿದಽರು ವಿರಸ ಪ್ರಕೃತಿಯದೊ-  ||ಕಂ||

ಜನಕೋಟಿ ಈ ಜಗದಿ ಸಂಸಾರವೆಂದೆಂದು
ಮುನಿಜನವು ಕವಿಗಣವು ಹಾಡಿ ಪಾಡಿದರಂದು,
ಋಣಮುಕ್ತ ಜೀವಽದ ಪಾಡನ್ನು ಹಾಡುತ್ತ;  ||ಕಂ||

ಲೋಕವು ದಿನಕೊಂದು ರೂಪವ ಪಡೆವುದೊ,
ಸಾಕಿಽದ ಕೋಳಿಯ ಬೆಳೆಸಂತೆ ಬದಲಾಗೆ;
ಈ ಕರ್ಮ ಜಾಲಕ್ಕೆ ಪ್ರಾಣಗಳರ್ಪಿಸಿ-  ||ಕಂ||

ಸಲ್ಲಲಿತ ಸುಖಶಾಂತಿ-ರಣರಂಗ ಭಯಕ್ರಾಂತಿ;
ಮಲ್ಲಳಿಯ ಇನಿವಾಡು-ಸಂಸಾರ ಒಳಪಾಡು,
ಬಲ್ಲವರ ವಿದ್ವತ್ತು-ಲೋಕನಾಶಕೆ ಹೇತು!  ||ಕಂ||
*****

ಕೀಲಿಕರಣ : ಕಿಶೋರ್‍ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೧೦
Next post ಜಯದ್ರಥನ ಕೊಲೆ

ಸಣ್ಣ ಕತೆ

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

 • ರಾಜಕೀಯ ಮುಖಂಡರು

  ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

 • ಕನಸುಗಳಿಗೆ ದಡಗಳಿರುದಿಲ್ಲ

  ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…