
ಭಾಳ ಒಳ್ಳೇವ್ರ್ ನಮ್ ಮಿಸ್ಸು ಏನ್ ಹೇಳಿದ್ರೂ ಎಸ್ಸೆಸ್ಸು, ನಗ್ತಾ ನಗ್ತಾ ಮಾತಾಡ್ತಾರೆ ಸ್ಕೂಲಿಗೆಲ್ಲ ಫೇಮಸ್ಸು. ಜಾಣಮರಿ ಅಂತಾರೆ ಚಾಕ್ಲೇಟಿದ್ರೆ ಕೊಡ್ತಾರೆ, ಬೆನ್ನು ತಟ್ಟಿ ಕೆನ್ನೆ ಸವರಿ ಬೆಣ್ಣೆ ಕಂದ ಅಂತಾರೆ! ಆಟಕ್ ಬಾ ಅಂತಾರೆ ಆಟದ್ ಸಾಮಾನ...
ಹಾಗೇ ನೋಡ್ತಾ ನೋಡ್ತಾ ಹೋದ್ರೆ ನನ್ ಲಚ್ಮೀನೆ ಒಳ್ಳ್ಯೋಳು | ಘಟ್ಟ್ಯಾಗೇನೊ ಮಾತಾಡ್ತಾಳೆ ಆದ್ರೂನೂವೆ ಒಳ್ಳ್ಯೋಳು || ಅವ್ಳೂ ಬಂದು ಸಿದ್ದೇ ಎಡ್ವಿ ಹದ್ನಾರ್ ವರ್ಷ ಹಾರ್ಹೋಯ್ತು | ಸೇತ್ವೇ ಕೆಳ್ಗೆ ಕಲ್ಮಣ್ ಮುಚ್ಚಿ ಹೊನ್ನೀರ್ ಕಾಲ್ವೆ ತುಂಬ್ಹೋಯ್ತ...
ಮಾಮರದ ಕೊನರೆಲೆ ಅಂಚಿನಲಿ ಮಿನುಗುವ ಸಿಹಿಮಾವು ಒಂದು ನೋಡಿ, ಕಣ್ಣರಳಿ ಮನವುರುಳಿ ತನ್ನಲ್ಲೆ ಚಿಂತಿಸಿತು- ಬೀಳಿಸಲೆ ಬೇಕು ಎಂದು! ಮರ ಏರಿ ಇನಿವಣ್ಣ ಕೈಯ್ಯಾರೆ ತರಲೆಂದು ಯೋಚಿಸಿದೆ ತಲೆಯನೆತ್ತಿ; ಬೆಳೆದಿತ್ತು ಎತ್ತರಕೆ ತೆಂಗು ಕೌಂಗನು ಮೀರಿ ನೋಡಿ...
ನಾಲ್ಕು ವರ್ಷದ ಕಾಲ, ನಕ್ಕು ನಲಿದಾಡಿದೆವು ಕೂಡಿ ಕಲಿತೆವು, ಒಡನೆ ಕುಣಿದಾಡುತ ಕಂಡ ಕನಸುಗಳೇನು! ಆಡಿದಾಟಗಳೇನು! ಕೊನೆಯುಂಟೆ, ಮೊದಲುಂಟೆ, ಕನಸೆ ಜೀವ! ಉಗಿಯ ನಿಲ್ದಾಣದಲಿ ನೂರಾರು ಎಡೆಯಿಂದ ಜನರ ಜಂಗುಳಿ ನೆರೆದು ಚಣಗಳೆರಡು ಉರುಳೆ ಹಾದಿಯ ಹಿಡಿದು...
“ಶಿವನಿಗ್ಯಾಕೆ ಮೂರ್ ಕಣ್ಣು?” “ಅವನು ದೇವ್ರಲ್ವ?” “ಲಕ್ಷ್ಮೀಗ್ಯಾಕೆ ಅಷ್ಟೊಂದು ಕಯ್?” “ಅವಳೂ ದೇವ್ರಲ್ವ?” “ಬ್ರಹ್ಮಂಗ್ ನಾಕ್‌ತಲೆ ಯಾಕಮ್ಮ?” “ವಿಷ್ಣೂ ಮಗನಲ್ವ...
ಎಳೆದೂ, ಎಳೆದೂ ಇರುಳು, ತೂಗಿ ತಡೆದೂ ಬೆಳಗು, ನನ್ನೀ ಕೈಹಿಡಿದವಳು ಹಾಸಿಗೆ ಹಿಡಿದಿರಲು. ಓಡಿಸಲಳವೇ ಚಿಂತೆ, ಬಿಡುವೇ ಬಳಲಿಕೆಗೆ, ನನ್ನೀ ಜೀವದ ಕಣ್ಣು ಹಾಸಿಗೆ ಹಿಡಿದಿರಲು? ಎಳೆದೂ, ಎಳೆದೂ…. ಭರವಸೆ ಒಂದೂ ಇಲ್ಲ; ಅಂಜಿಕೆ ಭಯವೇ ಎಲ್ಲ. ಕಣ್...
ಪಡುವಣ ದಿಗಂತದಲಿ ಅಗ್ನಿದೇವನ ಒಂದು ಕಾಲ್ಚೆಂಡು ಮೇಲ್ಹಾರಿ ಕೆಳಬೀಳ್ವುದೊ! ಬ್ರಹ್ಮಗಿರಿ ಎಂದೆಂಬ ಬೆಟ್ಟದಾ ಅರುಗಾಗಿ ದಿನಕರನು ಇಣಿಕಿಣಿಕಿ ಮರೆಸೇರ್ವನೊ! ಎಲ್ಲಿಂದ ಯಾವೆಡೆಗೆ? ಯಾವೂರು ಪೋಗ್ವನೊ ಅಗ್ನಿಯಾ ಚಂಡು ಈ ಕೆಂಬಣ್ಣದೀ; ಪಡುವಣದ ಪ್ರಾಂತದ...
ಮೋಡ ಬಸಿರಿನೊಳಗೆ ಹೂತಿಟ್ಟ ಬಯಕೆಗಳು ಒಂದೊಂದಾಗಿ ಸುಡುತ್ತ ಬೂದಿಯಾಗುವಾಗ ಫಳಾರನೆ ಹೊಡೆಯುವ ಸಿಡಿಲಿನ ಶಬ್ದಕ್ಕೆ ಹೊಟ್ಟೆಯೊಡೆದು ಹನಿ ಹನಿಗುಡುತ್ತ ಸುರಿಯುತ್ತಿದ್ದಂತೆಯೇ ತೊಳೆಯುತ್ತದೆ ಹಕ್ಕೆ ಗಟ್ಟಿದ ಮನಸನ್ನು ಮಳೆ ಎಂದರೆ ಪ್ರೀತಿ ನನಗೆ ̵...













