Home / Poem

Browsing Tag: Poem

ಯಾವ ಬೋಧೆಯಿಂದಿವನು ಬೋಧಿ ಸತ್ವನಾದಾನು? ಯಾವ ಓದಿನಿಂದಿವನು ವಾದಾತೀತನಾದಾನು? ಯಾವ ಚಿಲುಮೆಯಿಂದ ಇವನ ಕೊರಡು ಚಿಗುರೀತು? ಯಾವ ಒಲುಮೆಯಿಂದ ಇವನಿಗೆ ಬಲ ಬಂದೀತು? ಯಾವ ದಾರಿದೀಪದಿಂದ ಇವನ ಕಗ್ಗಾಡು ಬೆಳಗೀತು? ಯಾವ ಸಾಧನೆಯಿಂದ ಇವನ ಬಾಧಕ ಭಂಗವಾದೀತ...

ಸಮುದ್ರ ಕಿನಾರೆಯಲ್ಲಿ ಎಲ್ಲಿ ದೊಡ್ಡ ದೊಡ್ಡ ಅಲೆಗಳು ಗೋಧಿಬಣ್ಣದ ಮರಳುಗಳನ್ನು ತಂದುಹಾಕಿವೆಯೋ ಅಲ್ಲಿ ಅದೇ ಬಣ್ಣದ ಏಡಿಗಳು ಯಥೇಷ್ಟ ಓಡಾಡುತ್ತವೆ. ಎಷ್ಟು ಚಿಕ್ಕವಿವೆ ಇವು ಎಂದರೆ ಒಂದು ಅಂಗಿಜೇಬಿನಲ್ಲಿ ಸುಮಾರು ಒಂದು ನೂರನ್ನು ಸುಲಭವಾಗಿ ತುಂಬಬಹ...

ನೋಡಿ ನಾನು ಇದ್ದಲ್ಲೇ ಇರೋವ್ನು ನನಗೆ ಮೂಡಣವೂ ಇಲ್ಲ ಪಶ್ಚಿಮವೂ ಇಲ್ಲ. ಉದಯವೂ ಇಲ್ಲ. ಅಸ್ತವೂ ಇಲ್ಲ. ಕೆಂಪು ಇಲ್ಲ ಕಪ್ಪು ಇಲ್ಲ. ಹಗಲೂ ಇಲ್ಲ, ರಾತ್ರೇನೂ ಇಲ್ಲ. ನನಗಿಲ್ಲ ಇದ್ಯಾವುದರ ಸೋಂಕು ಅದೆಲ್ಲಾ ಅವರವರ ಕಣ್ಣಿನ ಮಂಕು. *****...

ಬನ್ನಿ ಓ ತಾರೆಗಳೆ ನೆಲಕಿಳಿದು ಬನ್ನಿ ಆಗಸದ ಕಾಂತಿಯನು ಭೂಮಿಗೂ ತನ್ನಿ, ಕೋಟಿ ಮೈಲಿಗಳಾಚೆ ಹೊಳೆವ ತೇಜಗಳೆ ಬಂದು ನಮ್ಮನು ಹರಸಿ ಕಾಂತಿಗೋಳಗಳೆ. ಸೂರ್ಯ ಚಂದಿರ ಮುಗಿಲ ಜೊತೆ ಬಾಳುವವರೆ ಗಾಳಿ ಉಯ್ಯಾಲೆಯಲಿ ತೂಗಿಕೊಳುವವರೆ, ಎಂದೂ ಆರದೆ ಉರಿವ ನಂದಾದ...

ಇದು ನಿರಂತರವೂ ರಣರಂಗ, ಇಲ್ಲಿ ಯಾವುದೇ ಒಂದು ಆಯುಧ, ಒಬ್ಬ ವೀರನಾಯಕ, ಒಂದು ವಾಹನ, ಒಂದು ರೀತಿಯ ಕವಚ, ಒಂದು ತಂತ್ರ, ಒಂದು ಕೈಚಳಕ, ಒಂದು ವ್ಯೂಹ, ಒಂದು ಬಗೆಯ ಸೈನ್ಯ, ಒಂದು ನೆರೆಬೆಂಬಲ, ಒಂದು ತಯಾರಿ, ಒಂದು ಯುದ್ಧ ಘೋಷಣೆ, ಒಂದು ಅವಧಿ…...

ಕಟುಕರನೂ ಕರಗಿಸುವ ಹೂ ನಗು, ಹಾಲು ಕೆನ್ನೆ ಪುಟ್ಟ ಹೆಜ್ಜೆಯ ಬೆಳದಿಂಗಳ ಮಗು: ನಕತ್ರದ ಮಿಂಚು, ಸಾಕ್ಷಾತ್ ದೇವರ ಸಂಚು. *****...

ದುಂಡಗೆ ಬಿಳಿಯಾಗಿ ಮುದ್ದುಮುದ್ದಾದ ಗೊಬ್ಬರದ ಹುಳಗಳನ್ನು ನೋಡದವರು ಯಾರು! ಇವು ಹಟ್ಟಿಗೊಬ್ಬರದಲ್ಲಿ ಹುಟ್ಟಿ ಅಲ್ಲೆ ಬೆಳೆಯುತ್ತವೆ. ಕೆಲವೊಮ್ಮೆ ಹಳೆಹುಲ್ಲು ಛಾವಣಿಯಲ್ಲೂ ಕಾಣಿಸುವುದುಂಟು. ಟಪ್ಪನೆ ಕೆಳಕ್ಕೆ ಬಿದ್ದು ವದ್ದಾಡುತ್ತವೆ. ಹೊರಕ್ಕೆ ಬ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...