ದುಂಡಗೆ ಬಿಳಿಯಾಗಿ ಮುದ್ದುಮುದ್ದಾದ
ಗೊಬ್ಬರದ ಹುಳಗಳನ್ನು ನೋಡದವರು ಯಾರು!
ಇವು ಹಟ್ಟಿಗೊಬ್ಬರದಲ್ಲಿ ಹುಟ್ಟಿ ಅಲ್ಲೆ ಬೆಳೆಯುತ್ತವೆ.
ಕೆಲವೊಮ್ಮೆ ಹಳೆಹುಲ್ಲು ಛಾವಣಿಯಲ್ಲೂ ಕಾಣಿಸುವುದುಂಟು.
ಟಪ್ಪನೆ ಕೆಳಕ್ಕೆ ಬಿದ್ದು ವದ್ದಾಡುತ್ತವೆ.
ಹೊರಕ್ಕೆ ಬಿಸಾಡಿದರೆ ಕಾಗೆಗಳು ಆತುರದಿಂದ
ಎತ್ತಿಕೊಂಡು ಹೋಗುತ್ತವೆ.  ಸಮೀಪದ
ಹಲಸಿ ಮರದ ಟೊಂಗೆಯಲ್ಲಿ ಕುಳಿತು
ಕುಕ್ಕಿ ತಿನ್ನುತ್ತವೆ.  ಮನುಷ್ಯರಿಗೆ
ತಾಳೆಹಣ್ಣುಗಳು ಹೇಗೋ ಹಾಗೆ ಕಾಗೆಗಳಿಗೆ
ಈ ಗೊಬ್ಬರದ ಹುಳಗಳು.
*****