Home / Poem

Browsing Tag: Poem

ಇನ್ನೂ ಅರ್ಥಾಗಲಿಲ್ಲೇನ್ನಿನ್ಗೆ ನಾಕಕ್ಸರಾ ಬಾಯಾಗಿಟಗಂಡು ನಾಕ ಪುಸ್ತಕಾ ತಲೆಯಾಗಿಟ್ಟುಗಂಡು ನಾಕ ಕಾಸ ಕೈಯಾಗಿಟಗಂಡು ಯಾಕ ಮೆರೀತಿಯಲೇ ಬಾಯಾಗೇ ಅಂತ್ರಕ್ಕೇಣೀ ಹಾಕ್ತೀ ಸಮತಾ, ಸೋದರತಾ, ಗಾಂಧಿ ತಾತಾ ಅಂತಾ ಬಂಗಾರದೊಳ್ಳೊಳ್ಳೆ ನಾಣ್ಣಿಗಳನ್ನ ಒದರಿ ಒ...

ಮಕ್ಕಳು ಟಾಟಾ ಎನ್ನುವುದ ಕೇಳಿ ಕಾಗೆಗಳು ಕಾಕಾ ಎನ್ನುತ್ತವೆ ಕೆಲವರು ಬೈ ಬೈ ಎನ್ನುವದ ಕೇಳಿ ನಾಯಿಗಳು ಬೌ ಬೌ ಎನ್ನುತ್ತವೆ ಮತ್ತೆ ಕೆಲವರು ಚೀರಿಯೋ ಎನ್ನುವುದ ಕೇಳಿ ಹಕ್ಕಿಗಳು ಚಿಲಿಪಿಲಿ ಗುಟ್ಟತ್ತವೆ. *****...

ಅಂತರಾಳ ಬೇರುಗಳ ಭಾವಸ್ಪರ್ಶಕೆ ಸಹ್ಯಾದ್ರಿಯ ತುಂಬೆಲ್ಲ ಹಸಿರು. ಎಣ್ಣೆ ಹಚ್ಚಿ ಎರೆದ ಮಿರುಗು ಗತ್ತಿನ ಮಾತು ವಯ್ಯಾರ ಗಗನ ಚುಂಬಿಸುವ ಹಂಬಲ. ನೂರು ಸಾವಿರ ಮಾತುಗಳ ಒಳಗೊಳಗಿನ ಚಡಪಡಿಕೆಗೆ ಮೌನ ಆದರೂ ಎಷ್ಟೊಂದು ಸ್ಪಷ್ಟ ಕಡಲ ನೆರೆತೊರೆ ಏರುಬ್ಬರ ಎಷ...

ಅನಿಸುತ್ತದೆ ನನ್ನ ಕಥಾನಾಕನನ್ನು ಹೀಗೆ ಒಂಟಿಯಾಗಿ ಬಿಡಬಾರದಾಗಿತ್ತು ಎಂದು.  ಆದರೆ ಬಿಟ್ಟಿದ್ದನೆಲ್ಲಿ ಇವುನು ನನ್ನನ್ನು ವರ್ಷಗಟ್ಟಲೆ ಸದಾ ತಲೆಯೊಳಗೆ ಹೊಕ್ಕು ಊಟ ನಿದ್ದೆಗೆ ಬಿಡದೆ ಮಳೆಗೆ ಸೋರುವ ಬಿಸಿಲಿಗೆ ಸುಡುವ ಬಾಡಿಗೆಮನೆಯಲ್ಲೂ ಮಂಚದ ಮೇಲೆ...

ಕತ್ತಲಾಗಿ ಬಿಡುತ್ತೆ ಬೇಡವೆಂದರೆ ಕೇಳದೇ ಇಲ್ಲೇ ಉಪ್ಪಿನಂಗಡಿಗೆ ಹೋಗಿ ಬರ್‍ತೇನೇಂತ ಹೋದ ಮಾರಾಯ ಸೂರ್ಯ ಸಾಮಿ ಮಾರನೇ ದಿನ ಮುಂಜಾವಿಗೇ ವಾಪಸ್ಸು ಬಂದದ್ದು, ನೋಡಿ ಮಾರಾಯ್ರೇ, ಎಂಥಾ ಆಸಾಮಿ *****...

ಹೇಗೆ ಸಹಿಸಲೇ ಇದರಾಟ ತಾಳಲಾರೆ ತುಂಟನ ಕಾಟ ಸಣ್ಣದಾದರೂ ಶುದ್ಧ ಕೋತಿ ಸಾಕಮ್ಮ ಇದ ಸಾಕಾಟ! ನೂರು ಇದ್ದರೂ ಸಾಲದು ಬಟ್ಟೆ ನಿಮಿಷ ನಿಮಿಷಕೂ ಒದ್ದೆ! ತೂಗೀ ತೂಗೀ ತೂಕಡಿಸುತ್ತಿರೆ ನಗುವುದು ಬೆಣ್ಣೇ ಮುದ್ದೆ! ಕೇಕೆ ಹೊಡೆವುದು ಕೋಗಿಲೆಯಂತೆ ಗರ್ಜನೆಯಂತ...

ಹೂವರಳಿ ನಿಂತು ಕಾಯಾಗಲೆಂದು ಕಾದೂ ಕಾದೂ ಕಣ್ಣು ಬೆಳ್ಳಗಾಗುತ್ತವೆ ಮೊಗ್ಗಿದ್ದಾಗಿದ್ದ ಮುರುಕ ಮೊನಚೆಲ್ಲಾ ಬಿಚ್ಚಿಟ್ಟ ಎಸಳಿನೊಳಗೆ ಮುದುರಿ ಹೋಗುತ್ತದೆ ಅದೇ ಅರಳಿದಾಗ ನಕ್ಕಿದ್ದು ಅರುಣೋದಯದಂತೆ ಕ್ಷಣಿಕ ಬಿಸಿಲೇರಿದಂತೆಲ್ಲಾ ಈ ಹೂಗಳಿಗೆ ಅಗ್ನಿದಿವ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...