Home / Kannada Poetry

Browsing Tag: Kannada Poetry

ಮೂಲ: ಸುರೇಂದ್ರಸೇನ್ ಗುಪ್ತ ನಾನು ಎನ್ನುವುದು ನನಗೆ ನನ್ನಿಂದ ನನ್ನಲ್ಲಿ, ನಾನೇ ಎಲ್ಲದರ ಶಿಖರ ಉತ್ತಮ ಪುರುಷ ನಾನು ಎತ್ತರದ ದನಿಯಲ್ಲಿ ಕೂಗಿಕೊಂಡೆ ಸುತ್ತ ಇದ್ದವರೆಲ್ಲ ಬೆಚ್ಚಿ ನೋಡಿದರು ದೇಶ ಹೊರಗಟ್ಟಿದ್ದ ದಂಗೆಕೋರನೊ ಎಂದು ಚಕಿತರಾದರು ಕೆಲವರ...

ದುರ್‍ಯೋದನಂಗ್ ಒಬ್ಬ ಸಕನಿ ಸೇರ್‍ಕಂಡಿ ಎಕ್ಕ ವುಟ್ಟೋಯ್ತ್ ಅಣ್ಣ ಕೌರೋನ ಮಂಡಿ ! ಅದಿನೆಂಟ್ ಅಕ್ಸೋಯಿನೀ ಸೇನೆ ಸಿಬ್ಬಂದಿ ಒಂದೆ ಯಿಡಿ ಬೂದಿಯಾಯ್ತ್ ಯುದ್ದದಲಿ ಬೆಂದಿ! ೧ ಆಯಾಗಿ ಮಲಗಿದ್ದೋನ್ ಆಸ್ಗೇಗೆ ತಗಣಿ ಬಂದು ಸೇರ್‍ಕಂಡಂಗೆ ಸೇರ್‍ಕಂಡ ಸಕನಿ!...

ಗೀತದೊಳಗಿಹ ಬಲವು ಯಾತರೊಳಗೂ ಇಲ್ಲ! ಭೂತಜಾತಂಗಳಿಗೆ ಈ ಜಗದ ದುಃಖಗಳ ಆತಂಕಗಳ ಮರೆವುಮಾಡಿ, ಮನದೊಳಗಾವ ಪಾತಕಿಯು ಪಾಪಗಳ ಹಗಲಿರುಳು ನೆನೆನೆನೆದು “ತ್ರಾತನಿಲ್ಲವೆ ? ಸತ್ತೆ! ಅಯ್ಯೊ !” ಎಂದೋರಲುತಿರೆ, ಮಾತೆಯಂತವನನ್ನು ಹಾಡಿ ಮಲಗಿಸಿ;...

ಮಕರಂದವಿಲ್ಲದ ಹೂವಿನಲ್ಲಿ ದುಂಬಿಗೇನಿದೆ ಕೆಲಸ? ರಸವಿಲ್ಲ; ಸರಸವಿಲ್ಲ ಬರೀ ನೀರಸ ಬದುಕು ಎಲೆ ಕಳೆದುಕೊಂಡ ಮರದಲ್ಲಿ ಹಕ್ಕಿಗಾವ ಆಸಕ್ತಿ? ಫಲವಿಲ್ಲ; ಒಂದಿಷ್ಟು ಛಲವಿಲ್ಲ ಬಲ ಕಳೆದು ಹೋದ ಬದುಕು ನೀರಿಲ್ಲದ ತೊರೆ ಸೆಳೆಯಬಹುದೇ ತನ್ನ ಕಡೆಗೆ ಜನರನ್ನು...

ಮೀನಿಗೆ ತಿಳಿಯದು ನೀರೇನೆಂದು ನೀರಿಗೆ ತಿಳಿಯದು ಮೀನೇನೆಂದು ಮೀನೊಳಗೆ ನೀರು ನೀರೊಳಗೆ ಮೀನು ನೀರು ಮೀನುಗಳೆರಡು ನಿನ್ನೊಳಗೊ ಬ್ರಹ್ಮ ಬೆಂಕಿಗೆ ತಿಳಿಯದು ಉರಿಯೇನೆಂದು ಉರಿಗೆ ತಿಳಿಯದು ಬೆಂಕಿಯೇನೆಂದು ಬೆಂಕಿಯೊಳಗೆ ಉರಿ ಉರಿಯೊಳಗೆ ಬೆಂಕಿ ಬೆಂಕಿ ಉ...

ಗುತ್ತಿಗೆದಾರರ ದೇವಸ್ಥಾನದಲ್ಲಿ ಜೀತಕ್ಕಿರುವ ದೇವರುಗಳೇ ಹೇಳಿ ಈ ಎಂಜಲೆಲೆ ಎತ್ತುತ್ತ ತುತ್ತು ಕೂಳಿಗಾಗಿ ಎಸೆದ ಎಲೆಗಳ ಸುತ್ತ ನಿಂತವರು ಬೀದಿ ಮಕ್ಕಳು ತಾನೆ? ದೇವರೇ ನೋಡಲ್ಲಿ ಹೆಕ್ಕುತ್ತಿರುವ ತುತ್ತನ್ನು ಮಕ್ಕಳ ಕೈಯಿಂದ ಕಿತ್ತು ತಿನ್ನುತ್ತಿರು...

೧ ನನ್ನ ನಾಡ ಚೆನ್ನ ನಾಡ ಬನ್ನ ಬಡುತ ಪೊರೆಯುವ ನನ್ನಿಯಿಂದ ತಾಯಿನಾಡ ಹೊನ್ನ ಸಿರಿಯ ಬೆಳಗುವ ೨ ನಾಡ ಬವರ ಬವಣೆಯಲ್ಲಿ ಜೀವವನ್ನು ನೀಡುವ ಹೇಡಿತನವ ಹೊಡೆದು ಹಾಕಿ ರೂಢಿಯಲ್ಲಿ ಮರೆಯುವ ೩ ನಾಡನುಡಿಯ ನಾಡನಡೆಯ ನಾಡಿನಲ್ಲಿ ನಡಿಸುವ ಕಾಡುತಿರುವ ಕಾಡು ಜ...

ಕನ್ನಡಾಂಬೆ ಎಲ್ಲಿರುವಳೊ ಅಣ್ಣ ಕರ್ನಾಟಕದಲ್ಲಿ ದಿಕ್ಕು ದಿಕ್ಕಲೂ ಹುಡುಕಿದರಿಲ್ಲ ಕಾಣೆಯಾದಳೆಲ್ಲಿ? ಬೆಂಗಳೂರಲಿ ಸುತ್ತಿ ನೋಡಿದೆ ಕಡತಗಳಲ್ಲಿ ಕಣ್ಣಾಡಿಸಿದೆ ವಿಧಾನಸೌಧ ಮೆಟ್ಟಿಲೇರಿದೆ ಎಲ್ಲೂ ಕಾಣಲಿಲ್ಲ ನಾಡ ಗೌಡ ಆ ಕೆಂಪೇಗೌಡ ಅವನ ಕೂಡ ನಾ ತೋಡಿದ...

ಮೂಲ: ಭಾಸ್ಕರ ಚಕ್ರವರ್ತಿ ಈ ಉದ್ದನೆ ಕಾರಿಡಾರ್ ಒಂದು ಇಕ್ಕಟ್ಟು ಓಣಿಯ ಹಾಗೆ. ಇವತ್ತು ರಾತ್ರಿ ಇಲ್ಲಿ ಕುರ್ಚಿಯೊಂದೆ ಕೂರುತ್ತದೆ. ದೂರದ ಪೊದೆಯಿಂದ ಚಂದಿರ ಬಾನಿಗೆ ಜಿಗಿಯುತ್ತದೆ; ಮಹಡಿ ಬದಿಯಿಂದ ಬೆಕ್ಕು ಒಲೆ ಕಡೆ ನೆಗೆಯುತ್ತದೆ. ಗರಿಕೆ ಹಾಡುತ...

ನಾಡಿನ್ ಬಡವ ! ಸರ್‍ಕಸ್ ಸಿಮ್ಮ ! ಕಮ್ಚಿ ಯಿಡಿದೋನ್ ಬೆಪ್ಪ್ ನನ್ ತಮ್ಮ! ಔನ್ಗೆ ಯೆದರಿ ಬಾಲಾ ಮುದರಿ ಮೂಲ್ಯಾಗ್ ಮುದರ್‍ಕೊಬೇಕ ? ಕಮ್ಚಿ ಯಿಡಿದೋನ್ ಕೈಲ್ ಏನ್ ಆಗ್ತೈತೆ ? ಔನ್ಗೆ ಯೆದರ್‍ಕೊಬೇಕ ! ೧ ನಿನ್ಗೇ ಗೊತ್ತಿಲ್ಲಾ ನಿನ್ ಸಕ್ತಿ! ಯೋಳಾಕ್ ...

1...2122232425...161

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....