ಗೀತದೊಳಗಿಹ ಬಲವು ಯಾತರೊಳಗೂ ಇಲ್ಲ!
ಭೂತಜಾತಂಗಳಿಗೆ ಈ ಜಗದ ದುಃಖಗಳ
ಆತಂಕಗಳ ಮರೆವುಮಾಡಿ, ಮನದೊಳಗಾವ
ಪಾತಕಿಯು ಪಾಪಗಳ ಹಗಲಿರುಳು ನೆನೆನೆನೆದು
“ತ್ರಾತನಿಲ್ಲವೆ ? ಸತ್ತೆ! ಅಯ್ಯೊ !” ಎಂದೋರಲುತಿರೆ,
ಮಾತೆಯಂತವನನ್ನು ಹಾಡಿ ಮಲಗಿಸಿ; ಯಾವ-
ನಾತುರತೆಯಿಂದಖಿಲ ಜನ್ಮವಂ ಕಳೆದು ಸಹ
ಸೋತು-ಸತ್ಯವು ಸಿಗದೆ-ಭೀತನಾಗಿರುವಾಗ
ಗೀತವೇ ಜೀವ, ಸದ್ಗೀತವೇ ಜೀವಾಳ, ಗೀತವೇ ಬ್ರಹ್ಮವಹುದು.
*****