Home / ಕವನ / ಕವಿತೆ / ಕನ್ನಡಾಂಬೆ ಎಲ್ಲಿರುವಳೊ ಅಣ್ಣ

ಕನ್ನಡಾಂಬೆ ಎಲ್ಲಿರುವಳೊ ಅಣ್ಣ

ಕನ್ನಡಾಂಬೆ ಎಲ್ಲಿರುವಳೊ ಅಣ್ಣ
ಕರ್ನಾಟಕದಲ್ಲಿ
ದಿಕ್ಕು ದಿಕ್ಕಲೂ ಹುಡುಕಿದರಿಲ್ಲ
ಕಾಣೆಯಾದಳೆಲ್ಲಿ?

ಬೆಂಗಳೂರಲಿ ಸುತ್ತಿ ನೋಡಿದೆ
ಕಡತಗಳಲ್ಲಿ ಕಣ್ಣಾಡಿಸಿದೆ
ವಿಧಾನಸೌಧ ಮೆಟ್ಟಿಲೇರಿದೆ
ಎಲ್ಲೂ ಕಾಣಲಿಲ್ಲ
ನಾಡ ಗೌಡ ಆ ಕೆಂಪೇಗೌಡ
ಅವನ ಕೂಡ ನಾ ತೋಡಿದೆ ದುಗುಡ
ಕನ್ನಡಾಂಬೆ ಎಲ್ಲಿ? ನನ್
ಕನ್ನಡಾಂಬೆ ಎಲ್ಲಿ?

ಕಲ್ಲು ಮೂರ್ತಿ ಮಾತಾಡಿದನಲ್ಲಿ
ಖಡ್ಗ ಹಿಡಿದ ಕೈ ಕೆಳಕ್ಕೆ ಚೆಲ್ಲಿ
ಕಂಬನಿಯನು ಚೆಲ್ಲಿ
ನಿನ್ನ ಹಾಗೆ ನಾನ್ ತಬ್ಬಲಿ ಇಲ್ಲಿ
ತೆರಳು ತೆರಳು ಹುಚ್ಚ !
ಬೇಡ ಸಮಯ ವೆಚ್ಚ

ಬೆಳಗಾವಿಯಲಿ ಕನ್ನಡ ಇಲ್ಲ
ಬಳ್ಳಾರಿಯಲಿ ತೆಲುಗೇ ಎಲ್ಲ
ಕೊಡಗಿನಲಿ ಮಲಯಾಳಿ ಸೊಲ್ಲ…
ತಲೆಗೇರಿತು ಅಮಲು
ಇಲ್ಲಿಲ್ಲದ ಕನ್ನಡತಿಯನರಸಿ
ಪರನಾಡಿಗೆ ನಾ ಪಯಣವ ಬೆಳೆಸಿ
ಹುಡುಕಿದೆ ಎಲ್ಲೆಲ್ಲೂ !

ಆಂಧ್ರದಲೆಲ್ಲೂ ತೆಲುಗು ತಾಯೆ
ದ್ರಾವಿಡ ದೇಶದಿ ತಮಿಳಿನ ಮಾಯೆ !
ಆಯಾ ನಾಡಲಿ ಆ ತಾಯ್ ವೈಭವ
ಸೋಲುಂಡಿತು ಜೀವ
ಅಲ್ಲೂ ಇಲ್ಲ ಇಲ್ಲೂ ಇಲ್ಲ
ಕನ್ನಡಾಂಬೆ ಎಲ್ಲೆಲ್ಲೂ ಇಲ್ಲ
ಅವಳ ಸುಳಿವನು ಕೊಟ್ಟಂಥವರಿಗೆ
ಕಾದಿದೆ ಬಹುಮಾನ ! ನನ್
ಎದೆಯಲಿ ಸನ್ಮಾನ !
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...