Home / Poem

Browsing Tag: Poem

ಆಕಾಶ ತುಂಬೆಲ್ಲ ನಕ್ಷತ್ರಗಳಾ ಬೀಜ ಬಿತ್ತಿದವರಾರೆ ಗೆಳತಿ- ನೋಡ ನೋಡ ಬೆಳೆ ಹೊಳೆಹೊಳೆವ ಮಣಿಗಳಾ ಸುತ್ತೋಣ ಬಾರೆ ಗೆಳತಿ ದಿಕ್ಕು ದಿಕ್ಕಿಗೂ ಕತ್ತೆತ್ತಿ ನೋಡಿದರ ನಗತಾವ ನೋಡ ಗೆಳತಿ- ಫಳಫಳಿಸುವಾ ವಜ್ರಗಳಾ ನೋಡು ನೋಡುತಿರೆ ಕಿವಿಯೋಲೆ ಸರಗಳಾದಾವು ಗ...

ಮಾನಸ ಲೋಕದ ಪ್ರಭುವೆ ಮನ ಮಾನಸದ ಹೊನಲಿನ ವಿಭುವೆ ||ಪ|| ಮುಗಿಲಿಗೂ ಮಿಗಿಲು ನಿನ್ನಯ ಹರವು, ಕಡಲಿಗೂ ಹಿರಿದು ತಿಳಿವಿನ ಅಳವು, ಸಮೀರನ ಹಿಂದಿಕ್ಕೂ ವೇಗದ ಲೀಲೆ, ಅನಲನ ದಾಟಿಸೋ ಅಪುವಿನ ಓಲೆ, ಮಾಯಾ ಮೃಗದ ನಯನದ ಮಿಂಚೊ, ನಾನಾ ಛಾಯೆಯ ಥಳುಕಿನ ಸಂಚೋ,...

ಹನಿ ಹನಿ ಬೆವರಿಳಿದ ಹನಿ ಮನಸ್ಸು ಅಂವ ಹೊರಟಿದ್ದಾನೆ ಸುಡು ಬಿಸಿಲಿನಲಿ ತುಸುವೇ ದೂರ. ಯಾರೋ ದುಂಬಾಲು ಬಿದ್ದು ಬೆನ್ನಟ್ಟಿದವರ ಹಾಗೆ ನಡು ಮಧ್ಯಾಹ್ನದಲಿ. ಟ್ರಕ್‌ಗಳು ಬಸ್ಸುಗಳು ದಾರಿಯಲಿ ಹಾಯ್ದು ಹೋಗುತ್ತವೆ ಬಿಸಿಲು ಗುದುರೆಯ ತಿಳಿ ತಿಳಿ ಜಲದ ಬ...

ನಾನೇನೂ ಮಾಡದೇ- ಸುಮ್ಮನೇ- ಕುಳಿತಿರುವಂತೆ ನಿಮಗನ್ನಿಸಿದೆಯಾ? ಇಡೀ ಬ್ರಹ್ಮಾಂಡವೇ ನನ್ನ ಹಾಗೇ- ಸುಮ್ಮನೇ ಕುಳಿತುಬಿಟ್ಟಿರುವಂತೆ… ನಿಮಗನ್ನಿಸುವುದಿಲ್ಲವೆ? *****...

ಈ ಗಂಡಾ ಆ ಗಂಡಾ ಜೋಡು ಪುಂಡರ ಕೂಡಿ ಹುಚಮುಂಡಿ ಮೆಣಸಿಂಡಿ ಚಟ್ನಿಯಾದೆ ಈ ಬಂಡಾ ಆ ಮಂಡಾ ಜೋಡು ಕೋಣರ ಕೂಡಿ ನೆಗ್ಗೀದ ತಾಬಂಡಿ ತೂತು ಆದೆ ಸೀರಿಯೊಬ್ಬನು ಸೆಳೆದ ಚರ್ಮವೊಬ್ಬನು ಹರಿದ ಲಟಪಟ ಯಲುಬೆಲ್ಲ ಲಡ್ಡು ಆತ ಗಟ್ಟಿಮುಟ್ಟಿನ ಹೇಂತಿ ಚಿಪ್ಪಾದೆ ಚಿಬ...

ಕಪ್ಪು ಕೆಂಪು ಕಳಗಳಲ್ಲಿ ಒಳ್ಳೇ ಕುಳ ಸಿಕ್ಕಿದರೆ ರಂಗಿಯ ಹೊಡೆತ ನೋಡಬೇಕು ಅವಳ ಹಿಡಿತ ನೋಡಬೇಕು ಅವಳ ಆಟ ನೋಡಬೇಕು ಅವಳ ಬೇಟ ನೋಡಬೇಕು ಅವಳ ಕುದುರೆ ಲಗೀ ಲಗೀ ಮಡಿಲು ನಿಗೀ ನಿಗೀ ಮೊದಲ ಸುತ್ತಿನಲೆ ಹಾಕ್ತಾಳೆ ಚೆಕ್ ಹುಡುಗಿ ಚಿಕ್ ಚಿಕ್ ಇವಳ ಕುದುರ...

ಪ್ರತಿದಿನ ಬೆಳಗ್ಗೆ ಕನ್ನಡಿಯೊಳಗೆ ನನ್ನದೆ ದರ್ಶನ ಹೊರಡುವ ಅವಸರ ಒಂದಿಷ್ಟು ಕ್ರೀಮುಬಳಿದು ಲ್ಯಾಕ್ಮೆ ಹಚ್ಚುವಷ್ಟರಲ್ಲಿ ಸಮಯ ಒಂಬತ್ತು ಬಿಂದಿ ಇಡುವ ಹೊತ್ತು ಗಳಿಗೆ ತಟಸ್ಥ ಕೈ ಬಿಂದಿ ಇಡದೆ ಮುಗಿಯದು ಸಿಂಗಾರ ದೊಡ್ಡ ಬಿಂದಿ, ಚಿಕ್ಕ ಬಿಂದಿ ನಕ್ಷತ...

ಕಪ್ಪಡರಿದ ಕಂದೀಲು ನಾನಿನ್ನೂ ಉಜ್ಜಿ ಹೊಳಪೇರಿಸೇ ಇಲ್ಲ! ದೇವರ ಮುಂದಲ ನಂದಾದೀಪ ಯಾವಾಗಲೋ ಆರಿ ಬತ್ತಿ ಸುಟ್ಟು ಕರಕಾಗಿತ್ತಲ್ಲ! ಹೀಗೆ ಇದ್ದಕ್ಕಿದ್ದಂತೆ ಮೋಡ ಮುಸುಕಿ ಕತ್ತಲಾವರಿಸುತ್ತದೆಂದು ಯಾರಿಗೆ ಗೊತ್ತಿತ್ತು? ಗುಟ್ಟಾಗಿ ಬಸಿರಾದ ಮೋಡ ಯಾವ ಕ...

ಎಲೆ ಮರೆಯ ಕಾಯಿಗಳನ್ನು ಹಣ್ಣಾಗುವ ಮೊದಲೇ ಯಾರ್ಯಾರೋ ಕಿತ್ತುಬಿಟ್ಟರು. ನಮ್ಮೂರ ಚೆಂದದ ಹೆಣ್ಣುಗಳನ್ನು ಇನ್ನೂ ಕಣ್ಣು ಬಿಡುವಷ್ಟರಲ್ಲೆ ಯಾರ್ಯಾರೋ ಮದುವೆಯಾಗಿಬಿಟ್ಟರು. *****...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...