Home / Kannada Poetry

Browsing Tag: Kannada Poetry

ಗೊತ್ತಿರುವುದು ನನಗೆ ಪಂಚೆಯ ಶ್ರೀರಾಮ ಹುಟ್ಟಿರುವುದು ಈಗ ಚೆಡ್ಡಿಯ ಶ್ರೀರಾಮ || ರಾಮ ಹುಟ್ಟಿದ ಅಂದು ತಾಯಿಯ ಗರ್ಭದಲಿ ಅವನೆ ಹುಟ್ಟಿದ ಇಂದು ಮಸೀದಿ ಮೂಲೆಯಲಿ ಅಂದು ರಾಮನ ಜನನ ಹಗಲು ಹೊತ್ತಿನಲ್ಲಿ ಇಂದು ಅವನ ಜನನ ತೂತು ಕತ್ತಲಲ್ಲಿ ಅಂದು ಬಿಲ್ಲು...

ಮೂಲ: ಭಾಸ್ಕರ ಚಕ್ರವರ್ತಿ ಕಣ್ಣೀರ ಹನಿಯೊಂದು ಮರುಭೂಮಿಯಲ್ಲಿ ಉರುಳಿತು ಅಮ್ಮ ತಂಗಿ ಅದನ್ನು ಹುಡುಕುವುದಕ್ಕೆ ಹೊರಟರು. ಹತ್ತಿ ಔಷಧದ ಜೊತೆ ಡಾಕ್ಟರೂ ಬಂದರು. ಕಪ್ಪು ಗೌನು ತೊಟ್ಟ ಅಡ್ವೊಕೇಟ್ ಕೂಡ. ಮೂಕನಂತೆ ನಾನು ಇಡೀ ಮೂರು ತಿಂಗಳು ಮೌನವಾಗಿದ್ದ...

ಇ೦ದು ಸಂಜೆಯ ನಿಟ್ಟು ನಿಟ್ಟಿಗೆ ಬೆಳೆದು ನಿಂತಿದೆ ಸಂಪದ ಹಕ್ಕಿ ಹಾರಿದ ಹಾಗೆ ಹರಿಯಿತು ಮನದಿ ಊರಿದ ಆ ಪದ ಚೆಂಗುಲಾಬಿಯ ಬನವು ಅರಳಿದೆ ನೋಡು ಬಾನಿನ ದಂಡೆಗೆ ಪ್ರಾಣ ಶುಕವೇ ಕ್ಷುಬ್ಧವಾಯಿತು ಬಂತು ಕಣ್ಣಿನ ಕಿಂಡಿಗೆ ಸ್ವರ್ಗಲೋಕದ ಸ್ವರ್ಣ ದ್ವಾರವು ...

ನನ್ನ ಮದ್ದಾನೆಯೆ! ನಿನ್ನ ತೋಳ ಸೊಂಡಿಲಾಡಿಸಪ್ಪಾ- ಮಗುವೆ! ಆಡು-ಆಡು. ನನ್ನ ಪಾರಿವಾಳವೆ ನಿನ್ನ ಗೋಣನ್ನಾಡಿಸಪ್ಪಾ- ಮಗುವೆ! ಆಡು-ಆಡು. ನನ್ನ ಅರಸಂಚೆಯೆ! ಅಡಿಯಿಡು, ನಡೆ ನಡೆ. ಮಗುವೆ! ಆಡು-ಆಡು ನನ್ನ ಅರಗಿಳಿಯೇ! ತುಟಿ ಬಿಚ್ಚು, ನುಡಿ ನುಡಿ. ಮಗ...

ದೊಡ್ಡ ಮರದ ಮೇಲೆ ಅಲ್ಲಲ್ಲಿ ಜೇನುಗೂಡು ರೆಂಬೆಗೊಂದರಂತೆ; ಅಕ್ಕ-ಪಕ್ಕದ ಮನೆಗಳ ರೀತಿ ಜೇನುಹುಳುಗಳ ಹಾರಾಟ ಸಿಹಿಹನಿಯ ಹುಡುಕಾಟ ಜೇನುಗೂಡಿನಿಂದ ತೆರಳಿ, ಮರಳುವ ಆಟ ಸಂಚಯಿಸಿ ತಂದ ಮಕರಂದವ ಚಂದದಲಿ ಶೇಖರಿಸಿ ಹನಿಹನಿಯ ಜೇನನ್ನು ಕಣಜವಾಗಿಸುವ ತವಕ ನಾ...

ಎಲ್ಲರಂಥವನಲ್ಲ ನಮ್ಮ ಗೊಮ್ಮಟ ಮಳೆಯಲು ಬಿಸಿಲಲು ಇವನೊಬ್ಬನೆ ಮನ್ಮಥ ಏನು ಮೈ ಏನು ಮಾಟ ‘ಏನುದಾತ್ತ ನೋಟವು ಹುಟ್ಟಿದುದಕೆ ಸಾರ್‍ಥಕವಾಯ್ತೊ ಇವನು ನಿಂತ ಬೆಟ್ಟವು ರಾಜ್ಯ ಬಿಟ್ಟು ವಿರಾಜಮಾನ ಈ ವರ್‍ಧಮಾನ ಯುಗದಗಲ ಜಗದಗಲ ಈ ಪ್ರವರ್‍ಧಮಾನ ಎಂಥ ಮನದ ಎ...

ದೂರದಿಂದ ನೋಡಿದರೆ ಬದುಕು ಅದೆಷ್ಟು ಸುಂದರ? ಬಿಚ್ಚಿ ಒಂದೊಂದೇ ಪದರು ಮುಟ್ಟಿ ನೋಡಿದರೆ ಹೂರಣ ಕಿಚ್ಚು ಮುಟ್ಟಿದ ಸಂಕಟ ರಕ್ಕಸನ ವಿಷದ ಹಲ್ಲು ಚುಚ್ಚಿ ಮಾಡಿದ ಗಾಯ ಹೆಪ್ಪು ಗಟ್ಟಿದ್ದ ಕೆಂಪು ರಕ್ತ ತೆರೆದು ತೋರಿದರೆ ಲೋಕಕೆ ಏಳುವುದು ನನ್ನಡೆಗೇ ಬೆರ...

ಕ್ರಾಂತಿಕಾರಿಗಳು ನಾವು ಕೇಳಬೇಕು ಇಲ್ಲಿ ನೀವು || ಇರುವ ಬಡವರಿಗೆ ಮನೆ ಬೇಡ ಇರದ ರಾಮನಿಗೆ ಮನೆ ಬೇಕು ಜಾತ್ಯತೀತತೆ ಬೇಡ ಧರ್ಮಾಂಧತೆಯೆ ಸಾಕು ಭವಿಷ್ಯ ಬೇಡ ನಮಗೆ ಜೋತಿಷವೊಂದೆ ಸಾಕು ವರ್ತಮಾನವು ಯಾಕೆ ಸನಾತನ ಇರುವಾಗ ಸಂವಿಧಾನವು ಯಾಕೆ ಇರುವಾಗ ಮನ...

ಮೂಲ: ಭಾಸ್ಕರ ಚಕ್ರವರ್ತಿ ಅಚ್ಚುಮೆಚ್ಚಿನ ಲೇಖಕ ಯಾರೂ ಇಲ್ಲ ನನಗೆ ಪುಸ್ತಕ ಓದಿ ಕೂಡಲೆ ಮುಚ್ಚಿಬಿಡುತ್ತೇನೆ ಓಡಿ ಹೋಗಿ ನನ್ನ ಹಾಸಿಗೆಗೆ ಜಿಗಿದು ಎಷ್ಟೋ ಹೊತ್ತು ಸುಮ್ಮನೆ ಮಲಗಿರುತ್ತೇನೆ ನಿರಾಳವಾಗಿರುತ್ತೇನೆ. ಆಹ ಹಾಸಿಗೆ! ನನ್ನ ಪರಮಮಿತ್ರ! ನನ...

ನಾನು ನೀನು ಬೇರೆ ಏನು? ಒಲಿದು ಬೆರೆತ ಹಾಲು ಜೇನು! ಯುಗ ಯುಗಗಳ ಬಲಿದ ಆಸೆ ಜನ್ಮಾಂತರಗಳ ಪಿಪಾಸೆ ಫಲಿಸಿ ಬಂದ ಹೃದಯಂಗಮ ನಮ್ಮೆದೆಗಳ ಸಂಗಮ ೧ ಗಂಗೆ ಯಮನೆ ಕೂಡಲಿಲ್ಲ ಕರಿದು ಬಿಳಿದು ಬೆರೆಯಲಿಲ್ಲ ನಾನು ನೀನು ಬೇರೆಯಲ್ಲ ಅತುಲವೀ ಸಮಾಗಮ ೨ ಆಕಾಶದ ಚಿ...

1...1516171819...161

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....