ಕ್ರಾಂತಿಕಾರಿಗಳು ನಾವು
ಕೇಳಬೇಕು ಇಲ್ಲಿ ನೀವು ||

ಇರುವ ಬಡವರಿಗೆ ಮನೆ ಬೇಡ
ಇರದ ರಾಮನಿಗೆ ಮನೆ ಬೇಕು

ಜಾತ್ಯತೀತತೆ ಬೇಡ
ಧರ್ಮಾಂಧತೆಯೆ ಸಾಕು

ಭವಿಷ್ಯ ಬೇಡ ನಮಗೆ
ಜೋತಿಷವೊಂದೆ ಸಾಕು

ವರ್ತಮಾನವು ಯಾಕೆ
ಸನಾತನ ಇರುವಾಗ

ಸಂವಿಧಾನವು ಯಾಕೆ
ಇರುವಾಗ ಮನುಶಾಸ್ತ್ರ

ಇಲ್ಲಿ ಎಲ್ಲರು ಒಂದೆ
ವಾಸ್ತವ ಇರಲಿ ಹಿಂದೆ

ರಾಷ್ಟ್ರಕೆ ಒಂದೆ ಬಣ್ಣ
ಪ್ರಶ್ನೆಯ ಕಣ್ಣಿಗೆ ಸುಣ್ಣ

ಶಾಂತಿ ಆಗದು ನಮಗೆ
ಕ್ರಾಂತಿ ಕುವರರು ನಾವು

ನಮಗೆ ನಾವೆ ತತ್ವ
ಹೆಚ್ಚು ಮಾತು ಬ್ಭೆಡ
*****