ಮೂಲ: ಭಾಸ್ಕರ ಚಕ್ರವರ್ತಿ

ಅಚ್ಚುಮೆಚ್ಚಿನ ಲೇಖಕ ಯಾರೂ ಇಲ್ಲ ನನಗೆ
ಪುಸ್ತಕ ಓದಿ ಕೂಡಲೆ ಮುಚ್ಚಿಬಿಡುತ್ತೇನೆ
ಓಡಿ ಹೋಗಿ ನನ್ನ ಹಾಸಿಗೆಗೆ ಜಿಗಿದು
ಎಷ್ಟೋ ಹೊತ್ತು ಸುಮ್ಮನೆ ಮಲಗಿರುತ್ತೇನೆ
ನಿರಾಳವಾಗಿರುತ್ತೇನೆ.
ಆಹ ಹಾಸಿಗೆ! ನನ್ನ ಪರಮಮಿತ್ರ!
ನನ್ನ ನೆಮ್ಮದಿ, ನನ್ನ ಸುಖದ ಸೂತ್ರ!

ಪುಸ್ತಕದ ಷೆಲ್ಫಿನಲ್ಲಿ ಎಷ್ಟೋ ಪುಸ್ತಕ ಇವೆ,
ಎಷ್ಟೋ ಜನ ಲೇಖಕರೂ ಇದ್ದಾರೆ
ಆದರೆ
ಎಲ್ಲಿ ಆ ಲೇಖಕ, ಯಾರ ಪಾತ್ರಗಳು
ಹಾಸಿಗೆಯಲ್ಲಿ ಮಲಗಿ ನಿರಾಳವಾಗಿರುವುವೋ
ಆ ಪಾತ್ರಗಳ ಲೇಖಕ?
*****