Home / Poem

Browsing Tag: Poem

ಬಾ ವಸಂತ ಹೊಸ ಬಾಳಿನ ಬಾಗಿಲ ತೆರೆ ಬಾ, ಹಳೆ ದಿನಗಳ ತರಗೆಲೆಗಳ ಸರಿಸಿ ನಡೆದು ಬಾ, ನಿನಗಾಗೇ ಕಾದಿವೆ ಜನರ ಮನಗಳು, ಹೊಸ ತೋರಣ ಕಟ್ಟಿವೆ ಮಣ್ಣ ಮನೆಗಳೂ. ಮರಮರವೂ ಚಾಮರ ನಿನಗೆ ಬೀಸಲು, ಹೂರಾಶಿಯ ಹೊತ್ತಿವೆ ಪಥಕೆ ಹಾಸಲು, ಜಗದ ಹೃದಯ ಕುಣಿಸುವ ಋತುರಾ...

ಆತುರದಿಂದ ಮತ್ತೆ ಹಾತೊರೆಯುತ್ತದೆ. ಜೀವ ಒಂದು ಪರಿಶುದ್ಧ ಪ್ರೀತಿಗೆ ಬೇಡುವದಿಲ್ಲ ಏನನ್ನು ಯಾವುದನ್ನೂ ಅದನ್ನು ಹಂಚಬೇಕು ಹಾಗೆ ಸುಮ್ಮನೆ ಮಾನ ಅಪಮಾನಗಳ ಹಂಗಿಲ್ಲ ರಾಧೆ ಮೀರಾರಿಗೆ ಸತ್ಯದ ಹೊಳವಿನಲಿ ಸರ್ವಶಕ್ತ ಒಲವೇ ನಂಬುಗೆ ಜಗದ ಬೆಳಕು ಪ್ರತಿಫಲ...

ನಾವೀರ್ವರು ಜತೆಗೂಡುತ ಕಳೆದಾ ಸುಖದ ಹೂವ ಹೊಂಬಾಳನು ನೆನೆವೆನೆ, ಕಣ್ಣು ಮಿಡಿಯುವುದು ದುಃಖದ ಹನಿಯಳಿದಾ ಬಾಳಿಂದಿಲ್ಲವೆ, ಸೇರಿರೆ, ಅಳಿಮನೆ ! ಗೆಳತಿ, ಯಾವುದ ನೆನೆಯಲಿ, ಯಾವುದ ಬಿಡಲಿ? ಅಂದು ಒಲವಿನ ಮೊದಲಿನ ಮುತ್ತಲಿ ಲಜ್ಜೆ ಸಂತಸದ ಕಮಲದ ಮುಖವನು...

ಯಮನ ಪ್ರತಿನಿಧಿಗಳು ಕೊಳವೆಬಾವಿಗಳು ಬಾಯ್ದೆರೆದು ನಿಂತಿವೆ ಬಲಿತೆಗೆದುಕೊಳ್ಳಲು ಬಿದ್ದು ಹೊರಬಂದರೆ ಪುನರ್ಜನ್ಮ ಹೆಣವಾಗಿ ಬಂದರೆ ಮರುಜನ್ಮ *****...

ಅಫಜಲ್‌ಗಂಜಿನಲ್ಲೊಂದು ದಿನ ಅಲ್ಬುಕರ್ಕೆಂಬವನು ತನ್ನ ಆಫೀಸಿನಿಂದ ಮರಳುತ್ತಿದ್ದವನು ಮಾಯವಾದನು ಇದ್ಡಕ್ಕಿದ್ದ ಹಾಗೆ ಚಾವಣಿಯಿಂದ ಹೊಗೆ ನೆಲದಿಂದ ಧಗೆ ಎದ್ದು ಹೋದ ಹಾಗೆ (ಸಿನಿಮಾ ಕತೆಗಳ ಮಾದರಿ) ಆದರಿದು ಮಾತ್ರ ಖಾತರಿ) ಎಲ್ಲಿ ಹೋದನಲಲ್ಬುಕರ್ಕ ಪರ...

ಹಾಲು ಗಲ್ಲದ ಮೇಲೆ ಗುಳಿ ಬಿದ್ದ ಚೆಂದ ನೋಡುಗನೆ ಕಣ್ಮನವ ತೆರೆದು ಸವಿ ಆನಂದ ಮುಗ್ಧ ನಗೆಯಲಿ ಗೋಪಿಗೆ ಕಚಗುಳಿಯ ಇಟ್ಟವನು ಎಳಸು ತೋಳಲಿ ಮೈಯ ಬಳಸಿ ಬಂದವನು ನೂಪುರದ ಇಂಪಿನಲಿ ಹೆಜ್ಜೆನಾದದ ಪೆಂಪಿನಲಿ ಭೂಮಿಯ ಸ್ವರ್ಗವ ಮಾಡಿ ಹರ್ಷ ತಂದವನು ಕೈಯ-ಕೊಳಲ...

ಎಂದಾದರೊಂದು ದಿನ ಬರುವೆ ಏನೆ ಕೇಳಲೇ ಬಾಗಿಲ ತೆರೆದು ಬೆಳಕನ್ನು ನೀಡಿ ಇಬ್ಬನಿಯ ತಂಪಿಗೆ ಕಂಪನು ಚೆಲ್ಲಿ || ಹೊಸಿಲ ಮೆಟ್ಟಿ ಬರಲು ನನ್ನರಸಿಯೆ ನಿನ್ನ ಮೊದಲ ಹೆಜ್ಜೆಗೆ ಕಾಲ್ ಮಿಂಚಿನ ಬೆಳ್ಳಿ ಬೆಳಕಾಗಿ ಆವರಿಸಿ ಮಿಂಚಿಹುದೆ ನನ್ನಂಗಳ ಹೊಂಗಿರಣವು ನ...

ಮಾಡೋದೇನು ಬೇಜಾರು ತುಂಬಾ ಬೋರು ಎಷ್ಟು ಆಳಕ್ಕೆ ಡ್ರಿಲ್ ಮಾಡಿದರೂ ಸಿಲಿಲ್ಲ ಒಂದೇ ಒಂದು ತೊಟ್ಟು ನೀರು ತಲೆಬಿಸಿ; ಇನ್ನೇನು ಮಾಡ್ಲಿ ನೀವೇ ಹೇಳಿ ಆರ್ಡರ್ ಮಾಡಿ ಕುಳೀತಿದ್ದೇನೆ ಒಂದು ಚಿಲ್ಡ್ ಐಸ್ ಬೀರು. *****...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...