ಆತುರದಿಂದ ಮತ್ತೆ ಹಾತೊರೆಯುತ್ತದೆ.
ಜೀವ ಒಂದು ಪರಿಶುದ್ಧ ಪ್ರೀತಿಗೆ
ಬೇಡುವದಿಲ್ಲ ಏನನ್ನು ಯಾವುದನ್ನೂ
ಅದನ್ನು ಹಂಚಬೇಕು ಹಾಗೆ ಸುಮ್ಮನೆ
ಮಾನ ಅಪಮಾನಗಳ ಹಂಗಿಲ್ಲ
ರಾಧೆ ಮೀರಾರಿಗೆ ಸತ್ಯದ ಹೊಳವಿನಲಿ
ಸರ್ವಶಕ್ತ ಒಲವೇ ನಂಬುಗೆ
ಜಗದ ಬೆಳಕು ಪ್ರತಿಫಲಿಸಲಿ ಹಾಗೆ ಸುಮ್ಮನೆ
ಯೋಚನೆ ಆಲೋಚನೆಗಳ ಆಗರ
ಒಳ ಮನಸ್ಸಿನಲಿ ಹಾದಿ ನಿರ್ಮಿಸಿ
ದಾರಿ ಸವೆಯುತ್ತಾಳೆ ಸೀತೆ ಪ್ರೀತಿಯಲಿ
ರಾಮಾಯಣ ಬೆಳೆಯುತ್ತದೆ ಹಾಗೆ ಸುಮ್ಮನೆ.
ಪ್ರೀತಿ ಇರುವಲ್ಲಿ ಭೀತಿ ಇರದೇ
ಪರಿಶುದ್ಧ ಗಂಗೆ ಹರಿಯುತ್ತಾಳೆ
ಎಲ್ಲಾ ಕ್ರಿಯೆಗಳು ಶಕ್ತಿಗಳು ಒಂದುಗೂಡಿ
ಮಹಾ ಸಮುದ್ರವಾಗುತ್ತದೆ ಹಾಗೆ ಸುಮ್ಮನೆ.
ಪ್ರೀತಿ ನದಿ ಕಡಲು ನಂಬಿಕೆ
ಮನಸ್ಸು ಯೋಚನೆಗಳ ಒಳಗೂಡಿ
ಜಾತ್ರೆಯಲಿ ತೇರು ಎಳೆಯುತ್ತದೆ.
ಎಲ್ಲ ಒಂದುಗೂಡಿದ ಬದುಕು ಅರಳುತ್ತದೆ ಹಾಗೆ ಸುಮ್ಮನೆ.
*****