Home / Poem

Browsing Tag: Poem

ಬೆಳಕಿನಲೆ ದೀಪಾವಳಿ ಹಣತೆ ಹೊಳೆ ದೀಪಾವಳಿ ಇರುಳಿನೆದೆಯನು ಸೀಳಿ ಹಬ್ಬುವ ಹಬ್ಬ ಈ ದೀಪಾವಳಿ. ಕವಿವ ಕತ್ತಲ ತಳ್ಳುತ ಬಲಿಯ ಹೆಡತಲೆ ಮೆಟ್ಟುತ ಜನದ ಮನಕೆ ಮೋದ ಸಂತಸ ಸುರಿಯುವೀ ದೀಪಾವಳಿ. ಸಣ್ಣ ಹಣತೆಯ ಕುಡಿಗಳು ಉರಿವ ಸೂರ್ಯನ ಮರಿಗಳು ಒಟ್ಟು ನಿಂತರೆ...

ಬೀದಿ ರಾಡಿಯಲಿ ಉರುಳುರುಳಿ ಆಡಿ ಮೈ ಮನವೆಲ್ಲಾ ಹಗುರಾಗಿ ಗಾಳಿಯಲಿ ತೇಲಾಡಿ ತನ್ನನೇ ಮರೆವ ಕನಸು ರೊಟ್ಟಿಗೆ. ಜಾಣ ಕುರುಡು ಜಾಣ ಕಿವುಡು ಜಾಣ ಮರೆವು. ಎಚ್ಚರದ ನಿಲುವು ಹಸಿವೆಗೆ....

ಎಲೆಗಳು ಉದುರಿ ಅಂಗಳದ ತುಂಬೆಲ್ಲಾ ಹರಡಿ ಹಾಸಿ ಮಳೆ ನೆನೆದ ರಾತ್ರಿ ಎದೆಯ ನದಿಯ ತುಂಬ ನೀರು ಅಲೆಗಳು ಮರಿಹಕ್ಕಿಗಳಂತೆ ಮುದುರಿದ ನೆನಪುಗಳು ಆಕಾಶದಲ್ಲಿ ಕಳಚಿಬಿದ್ದ ತಾರೆಗಳು ಕವಳದ ಎಚ್ಚರದ ತುಂಬ ಕನಸುಗಳು ಅಚ್ಚ ಅಳಿಯದೇ ಉಳಿದುಹೋದ ಗಾಯದ ಕಲೆಯ ಕೆ...

ಗಾಳಿಯಲ್ಲಾವುದೋ ಕೋಗಿಲೆಯು ತನ್ನದೆಯ ಅಳಲ ತೇಲಿಬಿಡುತ್ತಿದೆ. ದೂರದಲಿ ನೀಲಿಮೆಯ ಆಗಸದಿಂದೊಂದು ಬಿಳಿಯನ್ನು ಸಿಡಿದಂತೆ ನಕ್ಷತ್ರ ಮೂಡುತಿರೆ, ಮೂಡಲೋ ಬೇಡವೋ ಎನುತ ಚಿಂತಿಸುತೊಂದು ಎಳತಾರೆ ಕತ್ತಲಲಿ ಬೆದರಿ ಹೊದ್ದಿದೆ ಮುಸುಕು ! ಕಾರಂಜಿ ಕೆರೆಯಲ್ಲಿ...

ನೀರಿಲ್ಲ ನೆರಳಿಲ್ಲ ಹೊರಗೆ ಕಾಲಿಡುವಂತಿಲ್ಲ ಅಂಥ ಕಡು ಬೇಸಗೆಯಲ್ಲಿ ಹಿಮಾಲಯದಿಂದೊಬ್ಬ ಹಿಮ ಮಾನವ ಹೈದರಾಬಾದಿಗೆ ಬಂದು ಕುಳಿತನು ಒಂದು ದೊಡ್ಡ ಬಂಡೆಯ ಮೇಲೆ ಅದೇನು ವಿಚಿತ್ರ! ತಣ್ಣಗಾಯಿತು ಹವೆ ಒಮ್ಮೆಲೆ ಹುಲ್ಲು ಕಮರಿದಲ್ಲಿ ನೆಲ ಬಿರಿದಲ್ಲಿ ಎದ್ದ...

ಮಕ್ಕಳೆಂದರೆ ಮಾತೆಯೊಡಲಿಗೆ ತಂಪು ನೀಡಿ ಸೆರಗಂಚಿನಲಿ ಜಗದ ವಿಸ್ಮಯಕೆ ಭಾಷ್ಯ ಬರೆದವರು ಸರಳತೆ ಮುಗ್ಧತೆ ನಿಷ್ಕಪಟತೆಗೆ ಸಾಟಿಯಾದವರು ಹೂ ನಗೆಯ ಮಿಂಚು ಹರಿಸಿ ವ್ಯಥೆಯ ಬದುಕಿಗೆ ಬೆಳಕಾಗುವವರು ಮಕ್ಕಳೆಂದರೆ ತುಂಟಾಟ ಮೊಂಡಾಟಕ್ಕೆ ಏಣೆಯಾದವರು ಮೈಮನಕ್...

ಹೂಗಳ ಮೌನ ಮಾತಾಗುವ ಹೊತ್ತು ನಾನು ಅರಳಬೇಕಷ್ಟೇ… ವಿಷಾದದ ಹಗಲು ಹಳತಾದ ರಾತ್ರಿಗಳು ಹಳೆಯ ಕಾಗದದ ಪುಟದಂತೆ ಅಟ್ಟಸೇರಿ ಎಷ್ಟೋದಿನ ಮೌನದಿ‌ ಮಲಗಿದಂತೆ ರಾತ್ರಿಗಳಿಗೂ ವಯಸ್ಸಾಗುತ್ತದೆ ಮುಪ್ಪಾಗುತ್ತದೆ ; ಚರ್ಮ ಸುಕ್ಕುಗಟ್ಟುತ್ತದೆ ಗೆಳೆಯಾ ಬ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...