Home / Poem

Browsing Tag: Poem

ಉರುಳಿ ಅರಿವಿನ ಮೋರಿಯಲ್ಲಿ ನರಳುತ್ತಿರುವೆ ಇಲ್ಲಿ ನೆಮ್ಮದಿ ಎಲ್ಲಿ ? ಕೊಳೆತು ನಾರುತ್ತಿರುದ ಹಳೆಯ ಭೂತ ; ಅದರ ಮೇಲೇ ಮೊಳೆತ ಹೊಸ ಕನಸುಗಳ ತುಡಿತ, ಎರಡು ಗಡಿಗಳ ನಡುವೆ ಒಡೆದು ಬಿದ್ದಿದೆ ರೂಪ. ಹೊಕ್ಕುಳಿನ ಹುರಿ ಕಡಿದು ಹಳಿ ಬಿಟ್ಟು ಹೊರನಡೆದು ಪ...

ಹಠಾತ್ತಾಗಿ ಬಂದ ಚಡಪಡಿಕೆ ಅದ್ಹೇಕೋ ನಿನ್ನ ಪಾದಗಳು ಒಮ್ಮೆಲೆ ನೆನಪಾದವು ಪಾದಗಳ ಬಳಿ ಕುಳಿತು ಸರಿರಾತ್ರಿ ಧ್ಯಾನಿಸಿದ ನೆನಪು ಇಡೀ ದೇಹವನ್ನು ಉಂಡ ಮೇಲೆ ಉಳಿದದ್ದೇನು?? ತೃಪ್ತಿಯಿಂದ ಅಪ್ಪಿ ಮಲಗುವುದಷ್ಟೇ ಕನಸು ನನಸು ಬೀಜ ಮೊರೆತದ ಜೀವ ಮಿಡಿತದ ಸ...

ಕಾಲಕಾಲಕ್ಕೆ ತಿರುಗಿ ತಿರುಗಿ ಏರಿ ಇಳಿದ ರಾಗತಾಳಕ ಅಮ್ಮ ಒಂದೇ ಲಯವಿಟ್ಟಳು ಜೋಕಾಲಿ ಜೀಕಿ ರಾತ್ರಿ ಕತ್ತಲೆ ಹಗಲುಬೆಳಕು ಹದವಿಧದ ಚಲನೆಗೆ ಅಮ್ಮ ಚಾಲನೆ ಕೊಟ್ಟಳು ಕಂದನ ಮೆದುಬೆರಳುಗಳ ಹಿಡಿದು. ಮತ್ತೆ ಮತ್ತೆ ಸುತ್ತ ಸುಳಿವ ಬಿದ್ದು ಏಳುವ ಸಾವಿರಾರು...

ಚಪ್ಪಲಿಗಳನ್ನು ಎಲ್ಲಿ ಇಡಬೇಕೋ ಅಲ್ಲೇ ಇಡಬೇಕು ಮೇಲಿಟ್ಟರೆ ಪೂಜೆ ಮಾಡೆನ್ನುತ್ತವೆ ಕೆಳಗಿಟ್ಟರೆ ಕೆಸರಲ್ಲೇ ಹೂತುಕೊಳ್ಳುತ್ತವೆ. *****...

ಸೊರಾದ ಕೋಳಿಗಳು ಕೊಕ್ಕೊಕ್ಕೋ ಕೂಗುವುದಿಲ್ಲ ಬೆಳಗಾಯಿತೆಂದು ಹೇಳುವುದಿಲ್ಲ ಸೊರಾದ ಕೋಳಿಗಳು ತತ್ತಿಗಳನ್ನು ಇಡುವುದಿಲ್ಲ ಕಾಳುಗಳನ್ನು ಹೆಕ್ಕುವುದಿಲ್ಲ ಸೊರಾದ ಕೋಳಿಗಳು ಎಲ್ಲಿಗೂ ಹೋಗುವುದಿಲ್ಲ ಕತ್ತುಗಳನ್ನೂ ಎತ್ತುವುದಿಲ್ಲ ಸೊರಾದ ಕೋಳಿಗಳಿಗೆ ಏ...

ಸದ್ದು ಗದ್ದಲದ ಒಳಗೆಕದ್ದು ಕುಳಿತಂತೆನೆನೆನೆನೆದು ಹೊಸಬಾಳಕನಸ ಹೆಣೆದಳು ಆಕೆ ನೆಚ್ಚು ನೂಪುರದಲ್ಲಿಕೆಚ್ಚು ಕಾಮನೆಯಲ್ಲಿತೊಳೆದ ಮುತ್ತಿನ ಹಾಗೆ ಹೊಳೆದಳಾಕೆ ನಾಳೆ ನಾಳೆಯ ನೆನೆದುಕಲ್ಪನಾ ವಿಲಾಸ ಮೆರೆದುಹುಚ್ಚುಗುದುರೆಯ ಹತ್ತಿ ಹೊರಟಳಾಕೆ ಮಾತು ಮಾತ...

ಮುತ್ತಿನಂತಹ ಅಕ್ಕಂದಿರಿಬ್ಬರನ್ನು ಕುದುರೆಯೊಂದು ಕೆಡವಿ ಕಂಗೆಡಿಸಿದ ಸುದ್ದಿ ನಿಮಗೂ ತಲುಪಿರಬಹುದು ಅಕ್ಕಂದಿರೇ ಹುಚ್ಚುತನದಿಂದ ಕುದುರೆಯನ್ನು ಕೆಣಕಿ ಕಂಗೆಟ್ಟರೆಂದು ಹಬ್ಬಿಸಿದ ಸುದ್ದಿಯನ್ನು ನೀವು ನಂಬಿರಲೂಬಹುದು. ಬಯಲೊಳಗೆ ಬಯಲಾದರಂತೆ ಅಕ್ಕಂದ...

ಬದುಕೆಂಬುದೊಂದು ತೆರೆದ ವಿಶ್ವವಿದ್ಯಾಲಯ ದೇವರೇ ಕುಲಾಧಿಪತಿ ಬೇಕಿದ್ದನ್ನು ಆರಿಸಿಕೊಂಡು ನೀನೇ ಓದಿಕೊಳ್ಳಬೇಕು ಸಾವಕಾಶ: ಪಾಸಾಗಬೇಕೆಂದು ಅವಸರಿಸಬೇಡ ಹುಷಾರು ಇಲ್ಲಿ ಪಾಸಾದವರಿಗವಲ್ಲ; ಫೇಲಾದವರಿಗೆ ಮಾತ್ರ ಪ್ರವೇಶಾವಕಾಶ *****...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...