ಸದ್ದು ಗದ್ದಲದ ಒಳಗೆ
ಕದ್ದು ಕುಳಿತಂತೆ
ನೆನೆನೆನೆದು ಹೊಸಬಾಳ
ಕನಸ ಹೆಣೆದಳು ಆಕೆ
ನೆಚ್ಚು ನೂಪುರದಲ್ಲಿ
ಕೆಚ್ಚು ಕಾಮನೆಯಲ್ಲಿ
ತೊಳೆದ ಮುತ್ತಿನ ಹಾಗೆ ಹೊಳೆದಳಾಕೆ
ನಾಳೆ ನಾಳೆಯ ನೆನೆದು
ಕಲ್ಪನಾ ವಿಲಾಸ ಮೆರೆದು
ಹುಚ್ಚುಗುದುರೆಯ ಹತ್ತಿ ಹೊರಟಳಾಕೆ
ಮಾತು ಮಾತಿಗೂ ಲಜ್ಜೆ
ಕಣ್ಣ ನೋಟವು ಕದ್ದೆ
ಒನಪು ವಯ್ಯಾರ ಮೆರೆದಳಾಕೆ
ನಾಳೆಯೇ ಹೊಸಮನೆಗೆ
ಮರುದಿನವೇ ಶೋಬಾನ
ಎಲ್ಲ ಸಗ್ಗದ ಸುಖವು
ಮತ್ತಿನಲಿ ಮೆರೆದಳಾಕೆ
ವಿಧಿ ಅವನು ಕಟುಕ
ನಡೆಸಿ ತನ್ನ ಕುಹಕ
ಕಳಸಿದ್ದ ಹೊಸ ಹುರುಪ
ಮಸಣದೆಡೆಗೆ
*****