ಇನ್ನೇನು ನಾ ಬೇಡಲಿ ನಿನ್ನ ನನ್ನ ಮನವೇ ನಿನ್ನದಾಗಿದೆ ನನ್ನ ಮನವ ನಡೆಸುವಾತ ನೀನು ನನ್ನದೆಲ್ಲವು ಈಗೊ ನಿನ್ನದಾಗಿದೆ ಆಕಾಶದೆತ್ತರಕ್ಕು ಹಾರಲಿ ನಾನು ಬುವಿಪಾತಾಳದಲಿ ಅಡಗಲಿ ನಾನು ಗಾಳಿಯಲಿ ತೇಲಲಿ ನಾನು ನನ್ನ ಮನವೆಲ್ಲ ತುಂಬಲಿ ನೀನು ಅನಂತಕೋಟಿ ಬ್ರಹ್ಮಾಂಡಗಳ ಒಡೆಯ ಪರಮಾತ್ಮ ನೀನು ನನ್ನ ಮನದಂತರಾಳದಲ್ಲೂ ನಿ...

ಒಬ್ಬ ದೊಡ್ಡದೊಂದು ಶನಿದೇವರ ಪಟವನ್ನು ಹೆಗಲಿಗೆ ಬಿಗಿದುಕೊಂಡು ಮನೆಮನೆಗೂ `ಶನಿದೇವರ ಭಕ್ತಿ’ ಎಂದು ಕೂಗುತ್ತಾ ಭಿಕ್ಷ ಕೇಳುತ್ತಿದ್ದನು.  ಶಾಮಣ್ಣ ನವರ ಮನೆ ಬಾಗಿಲಲ್ಲಿ ಬಂದು ನಿಂತಾಗ “ಏನಪ್ಪಾ, ಶನಿ ನಿನ್ನ ಹೆಗಲೇರಿಬಿಟ್ಟಿದ್ದಾನೆ...

ಆತ: ಅಪರೂಪಕ್ಕೆ ಸಿಕ್ಕಿದ ತನ್ನ ಸ್ನೇಹಿತನನ್ನು ಮಾತಿಗೆ ಎಳೆದು “ನಿನ್ನ ಮಗ ಪೋಲಿ ಅಲೆಯುತ್ತ ಕಾಲ ಕಳೆಯುತ್ತಿದ್ದನಲ್ಲಾ ಈಗಲೂ ಹಾಗಯೇ?” ಈತ: “ಈಗ ಅವ್ನುMBBS ಕಣಪ್ಪಾ” ಆತ: “ಪರವಾಗಿಲ್ಲವೆ; ಮೆಡಿಕಲ್ ಓದಿ ಡಾ...

ದುಡ್ಡು ಕೆಟ್ಟದ್ದೊ ಮನುಜಾ ಈ ಲೋಕದಿ ದುಡ್ಡು ಕೆಟ್ಟದ್ದೊ ಮನುಜಾ ||ಪ|| ಹೆಡ್ಡ ಮೂಢಾತ್ಮನೆ ದೊಡ್ಡ ದೊಡ್ಡವರನು ಮಡ್ಡು ಇಳಿಸುತ್ತಲೀ ಅಡ್ಡಬೀಳಿಸುವದು ||ಅ.ಪ|| ಹರನ ಪೂಜೆಯ ಕೆಡಿಸಿ ಸದ್ಗುರುವಿನ ವರಮಂತ್ರವನು ಬಿಡಿಸಿ ಗುರುಶಿಷ್ಯಭಾವವನರುಹಿ ಲಕ್ಷ...

ಆ ಊರು ಪ್ರಕ್ಷುಬ್ಧವಾಗಿತ್ತು. ಅಲ್ಲಿನ ಜನರಿಗೆ ಬದುಕು ಎನ್ನುವುದು ದುಸ್ತರವೆನಿಸಿತ್ತು. ಆಗಾಗ ಹಲವಾರು ಕೋಮುಗಳ ನಡುವೆ ಕಲಹ ಉದ್ಭವಿಸುತ್ತಿದ್ದವು. ಕ್ಲುಲ್ಲಕ ಕಾರಣಗಳು ಮನುಷ್ಯರಲ್ಲಿ ಹಿಂಸಾ ಪ್ರವೃತ್ತಿ ಹುಟ್ಟುಹಾಕಿ ಊರೆಂಬೋ ಊರನ್ನು ಸ್ಮಶಾನಮಾ...

ಒಳ್ಳೇ ನಾರಿ ಕಂಡೆ ಈಗಲೇ ಒಳ್ಳೇ ನಾರಿ ಕಂಡೆ ||ಪ|| ಇಳೆಯ ತಳದಿ ಕಳೆವರ ಭಲೆ ಋಷಿಗಳ ಮರುಳು ಮಾಡುವ ||ಅ.ಪ.|| ಕೈಯು ಕಾಲು ಇಲ್ಲಾ ಮೈಯೊಳು ಉಸುರು ಅಡಗಿತಲ್ಲಾ ವಿಷಯಸುಖದ ಪರಮಾತ್ಮ ಬ್ರಹ್ಮೋದಯ ನಿಶಿಕರದೊಳು ನಲಿದಾಡುತಿಹಳೋ ||೧|| ಮುಟ್ಟಲು ಕೊಲ್ಲು...

ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ ನೀರೊಳಗೆ ಕರಗಿ ಸುಟ್ಟು ಹೋಯ್ತು ಸುಣ್ಣಾ ||ಪ|| ಸತ್ಯವಿದು ಮಿಥ್ಯವಲ್ಲ ತಿಳಿಯೋ ಕಾಮಣ್ಣಾ ||ಅ.ಪ|| ಹೊನ್ನು ಹೆಣ್ಣು ಮಣ್ಣು ಈ ಮೂರು ಸುಳ್ಳಣ್ಣಾ ತಿಳಿದುನೋಡು ಗುರುವು ಕೊಟ್ಟ ಅವು ಮೂರು ಕಣ್ಣಾ ||೧|| ಕಳ...

(ಬೀದಿ ನಾಟಕದ ಹಾಡು) ಜಡುಗುಡ್ಡಿ ಜಡ್ಡಿ ನಕ್ಕ ನನ್ನ ನೋಡಿ ಚಂದ್ರ ನಕ್ಕ || “ಯಾಕಪ್ಪೋ” ಅಂದ್ರೆ ಅಂದ “ಆದೆಲ್ಲೊ ಮೆಂಬ್ರು” || ಜಡುಗುಡ್ಡಿ ಜಡ್ಡಿ ನಕ್ಕ ನನ್ನ ನೋಡಿ ಸೂರ್ಯ ನಕ್ಕ || “ಯಾಕಪ್ಪೊ” ಅಂದ್...

ಕನ್ನಡವೇ.. ನನ್ನ ಉಸಿರು ಕನ್ನಡವೇ.. ನಮ್ಮ ಹಸಿರು ಕನ್ನಡದಿ ನಾವುಗಳು ಏಳ್ಗೆಯನು ಸಾಧಿಸಲು ಜೀವನವು ಸಾರ್ಥಕವು ಕನ್ನಡದ ಭೂಮಿಯಲಿ ಅನ್ನ, ನೀರು, ಕನ್ನಡವಾಗಿಸಿ ಬೆಳೆದು ಬಾಳುತಿರುವ ಕನ್ನಡಿಗರು ಪ್ರಾಣವನು ನೀಡಿಯಾದರೂ ಉಳಿಸಬೇಕು ಕನ್ನಡವಾ… ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....