ಐಸುರ ಮೊರುಮ ಎರಡು ಯಾತಕೆ ವರ್ಮ
ಸೋಸಿ ನೋಡಿಕೋ ವಿಚಾರ ಮರ್ಮ || ಪ ||

ಕಾಸೀಮ ಶರಣರು ಸಮರಕ್ಹೋಗಿ
ಕೆಸರೊಳು ಕಮಲ ಒಳಗೆದ್ದು ಮರ್ಮ || ೧ ||

ಭವರಾಳಿ ಕೆಳ‌ಅಟ್ಟ ರಣದೊಳಗೆದ್ದು
ಕುಟಿಲ ಯಜೀದನ ಕಪಟದ ಮರ್ಮ || ೨ ||

ವಿಪರೀತ ಲೋಕದೊಳು ಶಪಥವ ಮಾಡಿಕೊಂಡು
ಕುಂತಾದಿ ಭ್ರಮಿಸಿದಾ ಸುಭಟನ ಮರ್ಮ || ೩ ||

ಶಿಶುನಾಳಧೀಶನ ವಸಮತಿ ಲಾಲಿಸಿ
ಲಷ್ಕರ ಕರ್ಮಕೆ ಒಪ್ಪುವ ಮರ್ಮ || ೪ ||
*****