ಒಂದೂರಿನಲ್ಲಿ ಒಬ್ಬ ರಾಜ, ಅವನಿಗೊಬ್ಬ ಪ್ರಧಾನಿ ಹಾಗೂ ಒಬ್ಬ ಸೇವಕ ಇದ್ದರು. ಸೇವಕನು ತನ್ನನ್ನು ಪ್ರಧಾನಿಯೊಡನೆ ಹೋಲಿಸಿಕೊಂಡು ಹಲವು ಬಗೆಯಾಗಿ ಚಿಂತಿಸುತ್ತಿದ್ದನು – “ತನ್ನ ಸಂಬಳ ಹತ್ತೆಂಟು ರೂಪಾಯಿ ಮಾತ್ರ. ಪ್ರಧಾನಿಯ ಸಂಬಳ ಬೊಗಸ...
ನಂಬಬಾರದುದ ನೋಡಿದ ಜೀವದ ನೋವಿಗೆ ಸಮವಿದಯೇ? ಹುಸಿದು ಬೀಳಲು ಪ್ರೇಮದ ಚಪ್ಪರ ಕುಸಿಯದ ಎದೆಯಿದೆಯೇ ಒಲಿದು ಪೂಜಿಸಿದ ಕಲ್ಪವಲ್ಲಿ ಇದು ಒಣಗಿತೇಕೆ ಹೀಗೆ? ಬಯಸಿ ನೆಮ್ಮಿದಾ ಕಾಮಧೇನುವೇ ಬರಡಾಯಿತೆ ಹೇಗೆ? ತೀರಿಹೋಯಿತೇ ಅರೆಚಣದಲ್ಲೇ ಅಪ್ಸರೆಯಲಿ ಪ್ರೇಮ?...
ಹಸುಗಳ ಕದ್ದ ನೆಪಕೆ ಬೆಂಕಿಹೊತ್ತಿಕೊಂಡಿತು ಬೆಳವಡಿಗೆ ಧಗಧಗಿಸಿದ್ದು ಶಿವಾಜಿಡೇರೆಯೊಳಗೆ ಈಶ ಪ್ರಭುವಿನ ಮರಣ ನಕ್ಷತ್ರ ಜಾರಿದ ಹೊತ್ತು ಉಕ್ಕಿ ಉಕ್ಕಿ ಹರಿಯಿತು ಮಲ್ಲಮ್ಮಳ ಮಲಪ್ರಭೆ ಆಕಾಶ ತುಂಬೆಲ್ಲ ಧೂಳಿಪಟಗಳ ಅಬ್ಬರ ಕಾಲಡಿಯಲ್ಲಿ ಬೆಳವಡಿಯ ವೀರರರ...
“ಈಗ ಏನು ಮಾಡುತ್ತಿದ್ದೀಯಾ ತಾಯೀ?” ಶ್ರೀರಾಮ ಅಹಲ್ಯೆಯನ್ನು ಕಾಡಿನಲ್ಲಿ ಸಂದರ್ಶಿಸಿ ಕೇಳಿದ: ಅಹಲ್ಯೆ: “ಮೈಯಲ್ಲಾ ತಡವಿಕೊಂಡು ಈ ಕಾಡಿನಲ್ಲಿರುವ ನಾಯಿಗಳನ್ನೆಲ್ಲಾ ನಿರ್ಮೂಲ ಮಾಡಲು ಯೋಜನೆ ಹಾಕಿಕೊಳ್ಳುತ್ತಿದ್ದೇನೆ.”...
ಅಂತು ಇಂತು ಚಾಮುಂಡೇಸ್ವರಿ ಕ್ಷೇತ್ರದಾಗೆ ಸದ್ದುಗದ್ದಲ ಇಲ್ದಂಗೆ ಲಾಂಗು ಮಚ್ಚು ಮ್ಯಾಕೇಳ್ದಂಗೆ ರಕ್ತದೋಕುಳಿ ಆಡ್ದಂಗೆ ಯಲಕ್ಷನ್ ಮುಗಿದೋಗದೆ ಅಂಬೋದೇ ಟೆಂತ್‍ವಂಡರ್. ಹಿಂಗಾಗ್ಲಿಕ್ಕೆ ಯಾರಪ್ಪಾ ಕಾರಣ? ಕಾಂಗ್ರಸ್ನೋಗೆ ಭಗವಂತ ಒಳ್ಳೆ, ಬುದ್ಧಿ ಕೊಟ...
ಹಿಡಿಯೊಳಗೇ ಅವಿತು ಮೆಲ್ಲಗೆ ಮಿಸುಕು ಜಾಡು ತಪ್ಪುವ ಭಯಕ್ಕೆ ಬೊಗಸೆ ಮೀರದ ಬದುಕು. ಏಕಿಂಥ ಕೀಳರಿಮೆ ಹಿಡಿಯಲ್ಲೇ ಹುಡಿಯಾಗುವ ಹುಚ್ಚು? ಕಣ್ತೆರೆದಷ್ಟೂ ಕಾಣುತ್ತದೆ ಬೆಳಕು ಮೊದಲು ದೀಪ ಹಚ್ಚು. ಹಾರು ಹಾರೆಲೆ ಹಾಡೇ ಭುವಿಯಿಂದ ಬಾನಿಗೆ ಅಳೆದುಬಿಡು ಎ...
ನಾನು ಸತ್ತು ಹೋಗುತ್ತೇನೆಂದಲ್ಲವೇ ನಿನ್ನ ಬಾಧೆ ಹುಚ್ಚಾ ಈ ವ್ಯವಸ್ಥೆಯಲ್ಲಿ ನಾವು ಬದುಕಿದ್ದು ಒಂಭತ್ತು ತಿಂಗಳೇ *****...
ಅವಳ ಪರಿಚಯವೇನೂ ಇತ್ತೀಚಿನದಲ್ಲ ನಾನು ಮೊಟ್ಟ ಮೊದಲು ಕೆಲಸಕ್ಕೆ ಸೇರಿದ್ದೆ. ಅವಳಿದ್ದ ಆಫೀಸಿನಲ್ಲಿ ನಾನು ಕೆಲಸಕ್ಕೆ ಜಾಯಿನ್ ಆಗಿ ಹದಿನೈದು ದಿನವಾಗಿತ್ತೇನೋ, ಅಷ್ಟರಲ್ಲಿ ಬೆಂಗಳೂರಿಗೆ ವರ್ಗವಾಗಿತ್ತು. ಅವಳಿಗೆ ಅಲ್ಲಿಗೇ ವರ್ಗ ಆಗುತ್ತೆ ಅಂತ ಗೊತ...
ಇಂದ್ರ: ನಾನು ಈಗ ಭೂಲೋಕಕ್ಕೆ ಹೊರಟಿದ್ದೀನಿ. ನಿನಗೆ ಇಷ್ಟವಾದದ್ದು ಏನು ಬೇಕು ಕೇಳು ನಾನು ತಂದು ಕೂಡುತ್ತೇನೆ ಎಂದ, ಮೇನಕೆಯನ್ನು ಉದ್ದೇಶಿಸಿ. ಮೇನಕೆ: “ಭೂಲೋಕಕ್ಕೆ ಹೊರಟಿದ್ದೀರಲ್ಲವಾ. ನನಗೆ ವಾಪಸ್ ಬರುವಾಗ “ವಿದ್ಯಾರ್ಥಿ ಭವನ&#...
ಕಾದು ಕಾದು ಸೀದು ಹೋದೆ ನಲ್ಲ ನಿನ್ನ ಬಯಸಿ ನನ್ನ ಮರೆತು ಎಲ್ಲಿ ಹೋದೆ ಹೊಸ ಪ್ರೀತಿಯನರಸಿ? ಒಂದೇ ಪ್ರೀತಿ ಮಾತಿಗಾಗಿ ಕಾದೆ ಹಿಂದೆ ದಿನ ದಿನಾ ಹಂಬಲಿಸಿದೆ ನೋಡಲೆಂದು ಮುಟ್ಟಲೆಂದು ಪ್ರತಿಕ್ಷಣ ಒಣಗಿದೆಲೆಯ ರಾಶಿ ನಡುವೆ ಬಿದ್ದ ಕಿಡಿಯ ರೀತಿ ಜ್ವಾಲೆ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






