ಒಬ್ಬ ದೊರೆ ಅಜಮದೇಶದ (ಪಾರಸಿ ದೇಶದ) ಸಾಮಾನ್ಯನೊಡನೆ ಒಂದು ನಾವೆಯನ್ನು ಹತ್ತಿದ. ಆ ಹುಡುಗ ಸಮುದ್ರವನ್ನು ನೋಡಿರಲಿಲ್ಲ. ಹಡಗಿನ ಅನುಭವ ಅವನಿಗೆ ಇರಲಿಲ್ಲ. ಅತ್ತು ಗೋಳಿಟ್ಟ. ಅವನ ಮೈಯೆಲ್ಲ ಅದುರಿ ನಡುಗುತ್ತಿತ್ತು. ದೋಣಿಯಲ್ಲಿದ್ದವರ ಹರುಷವೆಲ್ಲ ಹದಗೆಟ್ಟು ಹೋಯಿತು. ದೊರೆಗೆ, ಅವನ ಪರಿವಾರದವರಿಗೆ ಯಾರಿಗೇನೂ...

ಆಸೆಯುಳ್ಳನ್ನಕ್ಕ ರೋಷ ಬಿಡದು. ಕಾಮವುಳ್ಳನ್ನಕ್ಕ ಕಳವಳ ಬಿಡದು. ಕಾಯಗುಣವುಳ್ಳನ್ನಕ್ಕ ಜೀವನ ಬುದ್ಧಿ ಬಿಡದು. ಭಾವವುಳ್ಳನ್ನಕ್ಕ ಬಯಕೆ ಸವೆಯದು. ನಡೆಯುಳ್ಳನ್ನಕ್ಕ ನುಡಿಗೆಡದು. ಇವೆಲ್ಲವು ಮುಂದಾಗಿರ್ದ್ದು ಹಿಂದನರಿದೆನೆಂಬ ಸಂದೇಹಿಗಳಿರಾ ನೀವು ಕೇ...

ಫ್ರೆಂಚ್ ಕ್ರಾಂತಿಯ ಅರುಸೊತ್ತಿಗೆಗಳ ವೈಭವದ ದಾಖಲೆಗಳ ಸ್ತಂಭಗಳಡಿಯಲಿ ಭೀಭತ್ಸ ರಕ್ತದ ವಾಸನೆಯ ಗೊರಲಿಗಳು ಶತ ಶತಮಾನಕ್ಕೂ ಕಥೆಗಳನ್ನು ಹೇಳುತ್ತಲೇ ಇವೆ. ಚಕ್ರವರ್ತಿಗಳ ದರ್ಪ, ಅರಮನೆ ಓಪೆರಾ, ಕಾನಕಾರ್ಡ್ ಚೌಕ ನೋಡುತ್ತಿದ್ದಂತೆಯೇ ಐಫಲ್ ಟವರ್‌ದ ತ...

ಹೊಸ ಹರಯದಲಿ ಹೂವು ಅರಳುತ್ತ ಮೊಗೆಮೊಗೆದು ಮಾಧುರ್ಯವನು ಬೀರಿ ಹಿಗ್ಗಿನಲಿ ಕುಣಿಯುತಿರೆ ದೂರದಿಂ ಹಾರುತ್ತ ದುಂಬಿ ಅದರೆಡೆ ನಡೆದು ತನ್ನಿಚ್ಛೆ ಝೇಂಕರಿಸಿ ಹೂಂಕರಿಸಿ ಹೂವಿನೆಡೆ ದಿಟ್ಟಿಸುತ ಸುತ್ತೆಲ್ಲ ಸುತ್ತಿ ಸುಳಿದಾಡುವೊಲು, ಸಾವ ಛಾಯೆಯು ಬಂದು ...

ಜೀವಜಂಗುಳಿಯು ಇಷ್ಟು ಹೊತ್ತಿನವರೆಗೆ ಎಲ್ಲವನ್ನೂ ಕೇಳಿಕೊಂಡು, ಸೈವೆರದಾಗಿ ಸಂಗಮಶರಣನನ್ನು, ಮಹಾಜನನಿಯನ್ನೂ ಕಣ್ತುಂಬ ಮನ ತುಂಬ ನೋಡಿ ನೋಡಿ, ” ಧನ್ಯ! ಧನ್ಯ!! ” ಎಂದು ಉದ್ಗರಿಸಿತು. ತಾನು ಕೇಳಿದ ವಿಚಾರಗಳಲ್ಲಿ ಒಂದೊ೦ದನ್ನು ನೆನೆ...

ಆನೆ ಬಂತು ಆನೆ ಬಂತು ಬನ್ನಿ ಎಲ್ಲರೂ ಬುಟ್ಟಿ ತುಂಬ ಕಬ್ಬು ಬೆಲ್ಲ ತನ್ನಿ ಎಲ್ಲರೂ ಆನೆ ಹೊಟ್ಟೆ ಲಾರಿ ಹಾಗೆ ಭಾಳ ದೊಡ್ಡದು ಕಣ್ಣು ಮಾತ್ರ ಗೋಲೀ ಹಾಗೆ ತುಂಬ ಸಣ್ಣದು ಒಂದೊಂದ್ ಕಾಲೂ ಕಂಬದ್ ಥರ ತುಳಿದ್ರೆ ಆಗ್ಹೋಯ್ತು ಹಂಡೆಯಂಥ ಕುಂಬಳಕಾಯೂ ಪಡ್ಚ ಆ...

ವೈದ್ಯರು: “ಹೇಗಿದ್ದಾರಮ್ಮಾನಿಮ್ಮಯಜಮಾನರು?” ಆಕೆ: “ಡಾಕ್ಟರ್, ನನಗೆ ಬೆವರೇ ಬರುತ್ತಿಲ್ಲ ಆಂತಾ ಇದ್ದಾರೆ.” ವೈದ್ಯರು: “ಬೆವರು ಬರೋದು ಬಲು ಸುಲಭ; ಅವರು ಹೀಗೆ ಮಾಡಲಿ. ಇವತ್ತು ಅವರಿಗೆ ಔಷಧಿ ಕೊಡಬೇಡಿ. ಬದಲ...

“ಸಾಮಾನ್ಯ ಜೀವನವನ್ನು ಸಾಗಿಸುವದಕ್ಕೇ ಜೀವಿಗಳೆಲ್ಲರೂ ಭಾರ ತಾಳಲಾರದೆ ಬಾಗಿ, ಬಸವಳಿದು ಏದುತ್ತಿರುವಾಗ ನಿಚ್ಚಶಿವರಾತ್ರಿಯಂಥ ಉಚ್ಚ ಜೀವನಕ್ಕೆ ಕೈಯೊಡ್ಡುವದು ಎಲ್ಲರಿಗೂ  ಸಾಧ್ಯವೇ? ಅದು ಸಾಮಾನ್ಯರ ತುತ್ತಲ್ಲ. ಅದನ್ನು ಸಾಮಾನ್ಯರು ಆಶಿಸುವ...

ಗದ್ದೆಯಿಂದ ರಸವ ತುಂಬಿ ಕಟ್ಟುಬಂತು ಗಾಣಕೆ ಗಾಣ ಅದರ ರಸವ ಹಿಂಡಿ ಒಗೆಯಿತತ್ತ ದೂರಕೆ ಮರದ ಮಡಿಲಿನಿಂದ ಹಣ್ಣ ನರನು ತಾನು ಪಡೆವನು ಬಹಳ ರುಚಿ ಎಂದು ಹೀರಿ ಹಿಪ್ಪೆ ಮಾಡಿ ಒಗೆವನು ಕೆಲವು ಹೊತ್ತು ತಲೆಯ ಮೇಲೆ ಸಿಂಗರಿಸುತ ಇದ್ದಿತು ಬಾಡಿ ಹೋದ ಮೇಲ...

ಹೊತ್ತು ಮೂಡುವ ಮುನ್ನ ಕೂಡಿ ಹಾಕಿಕೊಂಡ ಕನಸುಗಳನ್ನು ಎಳೆ ಬಿಸಿಲಿನಲ್ಲಿ ವಿಮಾನವೇರಿದ ಕೇರಳಿ, ಬಂಗ್ಲಾ, ಪಾಕಿಸ್ತಾನಿ, ಫಿಲಿಫೈನ್‌ (ಏಕಾಂಗಿ) ಕೆಲಸಿಗರು ಉರಿಬಿಸಿಲಿನಲಿ ಬಂದಿಳಿಯುವರು ಬಿಸಿಲಿಗೆ ಹಸಿರು ಕನಸು ಬಿಚ್ಚುತ್ತ ಬಣ್ಣಬಣ್ಣದ ಹೂವುಗಳೂಡೆ...

“ಜಗಜ್ಜನನಿಯು, ಭಕ್ತಿಯ ಪರಮಾವಸ್ಥೆಯನ್ನು ಪಡೆದು ಮಾನವನು ಪರಮಾತ್ಮನ ದಿವ್ಯೋಪಕರಣವಾಗಿ ಬಿಡುವ ಅಂತಿಮ ಸ್ಥಿತಿಯನ್ನು ತಿಳಿಸಿದರು. ಆ ವಿಷಯವು ಅತ್ಯಂತ ಆಕರ್ಷಕವೂ ಕುತೂಹಲಜನಕವೂ ಆಗಿರುವದರಿಂದ ಅದನ್ನು ಸಾದ್ಯಂತವಾಗಿ ತಿಳಕೊಳ್ಳುವ ಬಯಕೆಯುಂಟ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...