Home / ಲೇಖನ / ವಿಜ್ಞಾನ / ಸಾಗರಗಳು ಮತ್ತು ಅವುಗಳ ತಳ

ಸಾಗರಗಳು ಮತ್ತು ಅವುಗಳ ತಳ

ಭೂಮಿಯ ಶೇ. ೭೧ ಭಾಗವು ನೀರಿನಿಂದ ಆವರಿಸ್ಪಟ್ಟಿರುವುದರಿಂದ ಈ ನೀರಿನ ಸಂಚಯಗಳೇ ಸಾಗರಗಳಾದವು. ಮಾರುತಗಳು ನೀರಿನಲ್ಲಿ ಅಲೆಗಳನ್ನು ಉಂಟು
ಮಾಡುವುದರಿಂದಲೂ ಮತ್ತು ಚಂದ್ರನ ಗುರುತ್ವಾಕರ್ಷಣೆ ಶಕ್ತಿಯಿಂದಲೂ ‘ಉಕ್ಕು’ ಮತ್ತು ‘ಕೆಳಭರತ’ಗಳು ಉಂಟಾಗುವುದರಿಂದ ಸಾಗರ ಮತ್ತು ಸಮುದ್ರಗಳ ಮೇಲ್ಮೈಯು ನಿರಂತರವಾಗಿ ಅವಿಶ್ರಾಂತ ಸ್ಥಿತಿಯಲ್ಲಿದೆ. ಸಾಗರತಜ್ಞರು ಅಂತರ್ಜಲ ಕ್ಯಾಮರಗಳು, ಪ್ರತಿಧ್ವನಿ ಶಬ್ದಯಂತ್ರಗಳು, ಸೋನಾರ್‌ಗಳು ಮತ್ತು ಜಲಂತರ್ಗಾಮಿ ನೌಕೆಗಳನ್ನು ಉಪಯೋಗಿಸಿ ನಿರಂತರ ಸಾಗರಗಳ ಅಧ್ಯಯನ ಮಾಡಿ ಸಾಗರದ ತಳವು ನಮ್ಮ ಭೂಪ್ರದೇಶದಂತೆಯೇ ಇದೆ, ಎಂಬುದನ್ನು ಕಂಡುಹಿಡಿದರು. ಇಲ್ಲಿಯೂ ಸಹ ಪ್ರಸ್ಥಭೂಮಿ, ಕಂದಕಗಳು, ಕಡಿದಾದ ಬಿರುಕುಗಳು, ಪರ್ವತ ಶ್ರೇಣಿಗಳು ಮತ್ತು ಅಗ್ನಿಪವರ್ತಗಳೂ ಇವೆ ಎಂದರೆ ಆಶ್ಚರ್ಯವಲ್ಲವೆ? ಸಮುದ್ರದ ತಳದಿಂದ ಉದ್ಭವಿಸಿದ ಶಿಖರಗಳು ನೀರಿನ ಮೇಲೆದ್ದು ದ್ವೀಪಗಳಾಗಿ ಪರಿವರ್ತನೆ ಗೊಂಡಿವೆ. ೬ ಕಿ.ಮೀ. ಗಳಿಂದ ಫೆಸಿಫಿಕ್ ಸಾಗರದಲ್ಲಿ ಇದರ ಆಳವು ಸಮುದ್ರದ ಮೇಲ್ಮೆಯಿಂದ ೧೧ ಕಿ.ಮೀ. ನಷ್ಟು ಆಳವಾಗಿದೆ. ಇದನ್ನು ‘ಸಾಹಸಿಗರ ಆಳ’ವೆಂದು ಕರೆಯಲಾಗುತ್ತದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...