ನಾವು ಗೂಡಿನಲ್ಲಿ ಬೆಚ್ಚಗೆ ಕಾವು ಕೂಟ್ಟು ಬೆಳೆಸಿ ಹೂಮಾಂಸ ಅರಳಿ ಹರಳೆಯಾಗಿ, ಹುಲ್ಲೆಸಳಾಗಿ ಇದ್ದಂಥವು ಬರುಬರುತ್ತಾ ರೆಕ್ಕೆ ಪುಚ್ಚಗಳಾಗಿ ಜೊತೆಗೆ ಕೊಕ್ಕು ಉಗುರುಗಳೂ ಆಗಿ ನಂತರ ಮುದಿಯಾದ ನಮ್ಮನ್ನೇ ಕುಕ್ಕಿ ಗಾಯಗೊಳಿಸಿ ಈ ಗೂಡನೂಡೆದು ದೂಡಿ ಹಾರ...
ಇವತ್ತು ಇದ್ದು ನಾಳೆ ಇಲ್ಲ ಮಳೆ, ಬೆಳೆ, ಕಳೆ ಇವತ್ತು ಇದ್ದು ನಾಳೆ ಇಲ್ಲ ಸ್ಥಾನ, ಮಾನ, ಪ್ರಾಣ! *****...
ಚಳಿಗಾಲದ ಅಗ್ಗಿಷ್ಟಿಕೆಯ ಬಿಸಿ ಒಳ ಹೊರಗೆಲ್ಲ ಸುಟ್ಟು ಕರಕಲು ಬೆಚ್ಚನೆಯ ಬೂದಿಯೊಳಗೆ ಸದಾ ಅವಳ ಚಿತ್ರ. ಮೊಳಕೆಯೊಡೆಯುತ್ತವೆ ಮುರುಟಿದ ಕಾಳುಗಳು ಬರಸೆಳೆತದ ಚಿಗುರು ಎಲೆ ಹುಚ್ಚು ಹಿಡಿಸುವ ಹಚ್ಚೆಯ ಚಿತ್ತಾರ ಮನೆ ತುಂಬ ರಂಗೋಲಿಯ ಚಿತ್ತಾಕರ್ಷಕ ಗೆ...
ಆ ಅಪರಾಹ್ನ ಥಟ್ಟನೆ ಬಂದು ನನ್ನ ಮನಸ್ಸನ್ನು ಆಕ್ರಮಿಸಿದ ಶಬ್ದ: ಕ್ರ್‍ವಾಕ್. ದಣಿದಿದ್ದೆ. ಮಧ್ಯಾಹ್ನ ಊಟ ತಡವಾಗಿ ಮುಗಿಸಿ ಬೆತ್ತದ ಈಸಿಚೇರಿನಲ್ಲಿ ಅಡ್ಡಾಗಿದ್ದೆ. ನಿದ್ದೆಯೇನೂ ಹಿಡಿದಿರಲಿಲ್ಲ. ಮಂಪರಿನಲ್ಲೂ ಇರಲಿಲ್ಲ. ಮನಸ್ಸಿನಲ್ಲೆ ಮೆಸ್ಸಿನ...
ಸೂರ್ಯನೂ ಅಷ್ಟೆ ನಮ್ಮ ಐ.ಟಿ.ಬಿ.ಟಿ ಹುಡುಗರಂತೆ ಮೇಲಕ್ಕೇರಿದ ಮೇಲೆ ಜನ್ಮ ಸ್ಥಳ ಮರೆತು ಪಶ್ಚಿಮಕ್ಕೆ ವಲಸೆ ಹೋಗುತ್ತಾನೆ ಅಲ್ಲೇ ಕೆಲಸದಲ್ಲಿ ಮುಳುಗಿ ಹೋಗುತ್ತಾನೆ ಅಲ್ಲಿ ಏನು ಕಥೆಯೋ ಏನೋ ನಮಗಂತೂ ದೂರದಿಂದ ಬಣ್ಣ ಬಣ್ಣವಾಗಿ ದೊಡ್ಡದಾಗಿ ಕಾಣಿಸುತ್...
“ಅನು ನೀವು ಹೀಗೆ ಮಾಡಬಹುದಾ?” ಅಫೀಸಿಗಿನ್ನೂ ಅನು ಕಾಲಿಟ್ಟಿಲ್ಲ. ಆಗಲೇ ಬಾಣದಂತೆ ಪ್ರಶ್ನೆ ತೂರಿಬಂತು ಅಭಿಯಿಂದ. “ಏನ್ ಮಾಡಿದೆ ಅಭಿ? ನಾನೇನು ಮಾಡಿಲ್ಲವಲ್ಲ” ಅಶ್ಚರ್ಯದಿಂದ ಕಣ್ಣಗಲಿಸಿ ಕೇಳಿದಳು. “ಏನೂ ಮಾಡ...
ಬಂದಾನೊ ದೇವರೇ ಬಂದಾನೋ-ಬಂದಾನೋ ಬಂದಾನೊ ಸ್ವಾಮಿ ಬಂದಾನೋ-ಬಂದಾನೋ ಉಡುಪಿಯ ಕೃಷ್ಣನೆ ಬಂದಾನೋ – ಬಂದಾನೋ ಕೈಯಲ್ಲಿ ಕಡೆಗೋಲ ಹಿಡಿದ್ಯಾನೋ – ಹಿಡಿದ್ಯಾನೋ ಸೊಂಟಕೆ ಉಡಿದಾರ ತೊಟ್ಯಾನೋ – ತೊಟ್ಯಾನೋ ಕಾಲಿಗೆ ಕಿರುಗೆಜ್ಜೆ ಕಟ್ಯಾ...
ಮಾಯದ ಬೊಂಬೆಯ ಮಾಡಿ, ಕಂಗಳಿಗೆ ಕಾಮನ ಬಾಣವ ಹೂಡಿ, ನಡೆನುಡಿಯೊಳಗೆ ರಂಜಕದ ತೊಡೆಗೆಯನೆ ತೊಡಿಸಿ, ಮುಂದುಗಾಣಿಸದೆ ಹಿಂದನರಸದೆ. ಲಿಂಗವ ಮರಹಿಸಿ, ಜಂಗಮವತೋರಿಸದೆ, ಸಂದೇಹದಲ್ಲಿ ಸತ್ತುಹುಟ್ಟುವ, ಈ ಭವ ಬಂಧನಿಗಳೆತ್ತ ಬಲ್ಲರೋ ಈ ಶರಣರ ನೆಲೆಯ? ಅವರ ನೆ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...






