ದೊಡ್ಡದೇವರಾಜ ಒಡೆಯರ ತರುವಾಯ ಚಿಕ್ಕದೇವರಾಜ ಒಡೆಯರು ಪ್ರಸಿದ್ದರಾಗಿ ಆಳಿದರಷ್ಟೆ. ಈ ಚಿಕ್ಕದೇವರಾಜ ಒಡೆಯರು ಪಟ್ಟವನ್ನೇರುವುದಕ್ಕೆ ಮೊದಲು ಹಂಗಳದಲ್ಲಿದ್ದು ಜೈನ ಮತಸ್ಥನೂ ಪ್ರಖ್ಯಾತ ಪಂಡಿತನೂ ಆಗಿದ್ದ ಯಳಂದೂರಿನ ವಿಶಾಲಾಕ್ಷ ಪಂಡಿತನಲ್ಲಿ ವ್ಯಾಸಂ...

ಅದೊ ಮಸಳುತಿದೆ ಗುರಿಯನಂತಕಾಲದ ಹಿಂದೆ. ದಣಿದು ತೇಗುವ ಜೀವ ಮರಳುತಿದೆ. ಸಹಿಸಬೇ- ಕಂತೆ ಕೋಟಿ ಕೋಟಿಗಟ್ಟಲೆಯೆ, ವಹಿಸಬೇ- ಕಂತೆ ನಿರವಧಿ ಕಾಲವನು. ತಿಳಿವು ಬರದಿಂದೆ. ಮೂಡಣದ ಮೂಡು- ಮುಳುಗುಗಳ ತೆರೆಗಳ ಹಿಂದೆ ಅಸ್ತವಾಯಿತು ಗುರಿಯು. ಕನಸುಗಳ ಗಾಳಿಗ...

ದೀಪ ಸಖಿಯರೆ ದೀಪ ಮುಖಿಯರೆ ದೀಪದಾರತಿ ಎತ್ತಿರೆ ಪರಮ ಪ೦ಚಾಕ್ಷರಿಯ ರತಿಯರೆ ಪಂಚ ಪೀಠಕೆ ಬೆಳಗಿರೆ ತನುವೆ ಹಣತೆಯು ಮನವೆ ತೈಲವು ಜ್ಞಾನದಾರತಿ ಎತ್ತಿರೆ ಕಾಯ ಕಾ೦ಚನ ಪ್ರೇಮ ಸಿಂಚನ ಚಂದ್ರ ಮುಖಿಯರು ಬೆಳಗಿರೆ ತಾಯಿ ಗುರುವಿಗೆ ತಂದೆ ಗುರುವಿಗೆ ಪ್ರೇಮ...

ಸೊಸೆ ತಂದ ಸೌಭಾಗ್ಯ. ನಾಗರಹಾವು ಮುಂತಾದ ಸಿನಿಮಾಗಳಲ್ಲಿನ ಅಂಬರೀಷ್- ವಿಷ್ಣುವರ್ಧನ್‍ರ ಕೇಶಶೈಲಿ ಹೋಲುವಂಥ ಉದ್ದನೆ ಕೂದಲಿನ ಈ ಜುಬ್ಬಾವಾಲ ರಾಜಧಾನಿ ಬೆಂಗಳೂರಿನ ಸಾಂಸ್ಕೃತಿಕ ಪರಿಸರದಲ್ಲಿ ಚಿರಪರಿಚಿತರು. ಕನ್ನಡ ಸಾಹಿತ್ಯ ಪರಿಷತ್ತು, ಪುಸ್ತಕ ಪ್...

ಕುಣಿಯ ತೊಡಗಿತು ಮೇಘಮಯೂರ ಭವ್ಯಭೀಕರಾ ಬೃಹದಾಕಾರ ರುದ್ರವಾದರೂ ಶುಭಶ್ರೀಕಾರ ಕುಣಿಯ ತೊಡಗಿತು ಮೇಘಮಯೂರ | ಗಗನರಂಗವನು ತುಂಬಿ ಬೆಳೆಯಿತು ಚಿಕ್ಕೆಗಣ್ಣಿನಾ ಪಿಚ್ಛ ಹರಡಿತು ಸಿಡಿಲು ಮಾಲೆಯಲಿ ಮುಡಿಯ ಕಟ್ಟಿತು ಥಕಥೋಂ ಥಕಥೈ ಕಾಲು ಹಾಕಿತು | ಹೆಜ್ಜೆ ...

ಉದಯಾಸ್ತಗಳ ಜನ್ಮ ಮರಣ ಚಕ್ರದ ಬಾಧೆ ಇದಕಿಲ್ಲ; ಕುಂದಮೀರಿದೆ; ಗ್ರಹಣ ಹತ್ತದಿದ- ಕೆಂದಿಗೂ; ಬೇರೆ ಫಲದಾಸೆಯಿದನೊಣಗಿಸದು; ಅಜ್ಞಾನ ಮುಗ್ಧ ಮಾಧುರ್‍ಯ ಮಧುವಲ್ಲ; ಹೊಸ ಹರೆಯ ಹುಮ್ಮಸದ ಹುಸಿಬಿಸಿಲುಗುದುರೆಯ ಬಾಯ ಬುರುಗು ಬೆಳಕಲ್ಲ; ಇದು ಹೊಳೆಯ ದಾಟಿದ...

ಸಾಧು ಹೂ ಗಿಡದ ಬಳಿ ನಿಂತಿದ್ದರು. ತಟ್ಟನೆ ಒಂದು ಹೂವು ಸಾಧುವನ್ನು ಹೀಗೆ ಕೇಳಿತು. “ನನ್ನ ನಿಜ ಮುಖ ಯಾವುದು? ಅದು ಎಲ್ಲಿದೆ” ಎಂದು. “ಹೂವಿನ ಬಣ್ಣದಲ್ಲೇ? ದಳದಲ್ಲೇ? ವೃಕ್ಷದ ಶಾಖೆ ರೆಂಬೆಯಲ್ಲೇ? ಬೇರು, ಮಣ್ಣು, ಬೀಜ ಅಥವಾ...

ಅರರೇ ! ಏನ ಪೇಳಲಿ ಎಮಗಿಂದೊದಗಿರುವ ಪರಿಸರದ ಪಾಠದೊಳಡಗಿರುವ ಹೂಟವನು ? ಪರಿಸರಕೆಂದೊಂದು ದಿನವನು ಮೀಸಲಿಡುತಲಿ ತೋರ್‍ವ ಛಾಯಾ ಚಿತ್ರದೊಳ್, ನೂರೆಂದು ಫಲಕದೊಳ್ ಮೆರೆವ ಹೊಟ್ಟೆ ಗಾಹುತಿಯಲಾ ಪೊರೆವ ಪರಿಸರವು – ವಿಜ್ಞಾನೇಶ್ವರಾ *****...

ಅಪ್ಪನೂ ಕುರುಡಾ ಅವ್ವೀನೂ ಕುರುಡ ಗೋಂಡೀ ನೆಟ್ಟವ್ರೇ ಗೊಂಡೀಗ ನೀರ ಯೆರುದವ್ರೇ ತಂಗೀ ಕೊಟ್ಟವ್ರೇ ತಂಗಳರಾಜ್ಯ ||೧|| ‘ಕೇಳಲ್ಲೋ ಕೇಳೋ ನನ್ನಲು ಮಗುನೇ ತಂಗೀ ನಾರೂ ಕರುಕಂಡೀ ಬಾರೋ’ ಲಟ್ಟೋಂದು ಮಾತಾ ಕೇಳಿದ ಮಗುನೇ ||೨|| ಮಾಳುಗೀ ವಳುಗೇ ನಡುದಿದ ಮ...

ಬರೆದವರು: Thomas Hardy / Tess of the d’Urbervilles ನಾಯಕನು ಏನೋ ಭಯದಿಂದ ಕಳನಳಿಸುತ್ತಿದ್ದಾನೆ. ಅವನಿಗೆ ಎಲ್ಲಿ ನೋಡಿದರೂ ಮುಸಿಮುಸಿ ನಗುತ್ತಾ ‘ ಅಪ್ಪಣೆಕೊಡಿ ಬುದ್ದಿ ‘ ಎಂದು ಕೈ ಮುಗಿದುಕೊಳ್ಳುತ್ತಾ ನಿಂತಿರುವ ಹೆಣ್ಣಿನ...

1...6789

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....