ಸಾಧು ಹೂ ಗಿಡದ ಬಳಿ ನಿಂತಿದ್ದರು. ತಟ್ಟನೆ ಒಂದು ಹೂವು ಸಾಧುವನ್ನು ಹೀಗೆ ಕೇಳಿತು. “ನನ್ನ ನಿಜ ಮುಖ ಯಾವುದು? ಅದು ಎಲ್ಲಿದೆ” ಎಂದು.
“ಹೂವಿನ ಬಣ್ಣದಲ್ಲೇ? ದಳದಲ್ಲೇ? ವೃಕ್ಷದ ಶಾಖೆ ರೆಂಬೆಯಲ್ಲೇ? ಬೇರು, ಮಣ್ಣು, ಬೀಜ ಅಥವಾ ನನ್ನ ಹಿಡಿದಿರುವ ತೊಟ್ಟಿನಲ್ಲೋ?” ಎಂದಿತು.
“ರೂಪ ಆಕಾರ ನಿನಗಿದ್ದರೂ ಆಗೋಚರವಾಗಿರುವ ನಿನ್ನ ಹೃದಯ ಗಮ್ಯ ಗಂಧದಲ್ಲಿ ನಿನ್ನ ಕಾಣದ ಆತ್ಮ ಅಡಗಿದೆ. ಅದು ನಿನ್ನ ನಿಜ ಮುಖ” ಎಂದರು ಸಾಧುವರ್ಯ.
*****


















