ದೀಪ ಸಖಿಯರೆ ದೀಪ ಮುಖಿಯರೆ
ದೀಪದಾರತಿ ಎತ್ತಿರೆ
ಪರಮ ಪ೦ಚಾಕ್ಷರಿಯ ರತಿಯರೆ
ಪಂಚ ಪೀಠಕೆ ಬೆಳಗಿರೆ
ತನುವೆ ಹಣತೆಯು ಮನವೆ ತೈಲವು
ಜ್ಞಾನದಾರತಿ ಎತ್ತಿರೆ
ಕಾಯ ಕಾ೦ಚನ ಪ್ರೇಮ ಸಿಂಚನ
ಚಂದ್ರ ಮುಖಿಯರು ಬೆಳಗಿರೆ
ತಾಯಿ ಗುರುವಿಗೆ ತಂದೆ ಗುರುವಿಗೆ
ಪ್ರೇಮ ಜ್ಯೋತಿಯು ಶಿವಶಿವಾ
ಸಕಲ ಸುಂದರ ಪ್ರಾಣ ಗುರುವಿಗೆ
ದೀಪಗೋಪುರ ಪ್ರಿಯಶಿವಾ
ಜಗವೆ ಪ್ರಣತೆಯು ಯುಗವೆ ಜ್ಯೋತಿಯು
ವಿಶ್ವ ಗುರುವಿಗೆ ಮಂಗಲಂ
ವೀರಶೈವಾಚಾರ ಭಾಸ್ಕರ
ಪಂಚ ಗುರುವಿಗೆ ಮಂಗಲಂ
*****