ನಂ ಊರ್‍ನಾಗ್ ಒಂದ್ ದೊಡ್ಡ್ ಕಟ್ಟೇಯ್ತೆ – ಲಸ್ಮಪ್ಪನ್ ಕಟ್ಟೇಂತ; ಅಂಗೇ ನೋಡ್ತೀನ್ ನಮ್ಮೂರ್‌ ಕಟ್ಟೇಗ್ ಈ ಯೆಸರ್‌ ಯಾಕ್ ಬಂತೂಂತ. ೧ ಲಸ್ಮಪ್ಪೇನೋ ಲಸ್ಸಾದ್ಕಾರಿ ! ಕಟ್ಟೇಗ್ ಔನ್ದೇನ್ ಅಂಗು ? ಪೈಸಾ ಕೊಟ್ಟೋರ್ ಪ್ರಜೆಗೋಳ್ ನಾವು ! ಅದೇ ಅ...

ಮಳೆ ಬರುವ ಕಾಲಕ್ಕ ಒಳಗ್ಯಾಕ ಕೂತೇವೊ ಇಳೆಯೊಡನೆ ಜಳಕ ಮಾಡೋಣ ನಾವೂನು, ಮೋಡಗಳ ಆಟ, ನೋಡೋಣ. ಮರಿಗುಡುಗು ಕೆಲೆವಾಗ ಮಳೆಗಾಳಿ ಸೆಳೆವಾಗ ಮರಗಿಡಗಳನ್ನು ಎಳೆವಾಗ ನಾವ್ಯಾಕ, ಮನೆಯಲ್ಲಿ ಅವಿತು ಕೂತೇವೊ. ಕೋಲ್ಮಿಂಚು ಇಣಿಕಿಣಿಕಿ ಕಣ್ಕುಣಿಸಿ ಕೆಣಕೆಣಕಿ ಬ...

ಜೀವನದ ಸಮಯವನ್ನೆಲ್ಲಾ ಹಾರೋ ಹಕ್ಕಿಯ ರೆಕ್ಕೆ ಎಣಿಸಲು ಒಬ್ಬ ಸಾಧಕ ಶಿಷ್ಯ ಶ್ರಮಿಸಿದ. ಎಣಿಸುವದರಲ್ಲಿ ಹಾರಿ ಹೋಗುವ ಹಕ್ಕಿಯ ಕಂಡು ಜಿಗುಪ್ಸೆಗೊಂಡ. ನೀರಿನಲ್ಲಿ ಮುಳುಗಿ ಮೀನುಗಳ ಹಿಂದೆ ಹೋಗಿ ಹೆಜ್ಜೆ ಏಣ್ಣಿಸುವ ಎಂಬ ನಿರ್ಧಾರ ಕೈಗೊಂಡ. ಎಷ್ಟು ವರ...

ಅನರಣ್ಯ ಪರಿಣಾಮದೊಳಿಂದು ಬೀಳ್ವಾ ಮಳೆಗೆಲ್ಲ ಮಣ್ ಕೊಚ್ಚಿ ಹರಿವಂತೆ ನಗರದೋದಿನ ಭರಕೆಲ್ಲ ಜಾನಪದ ಕರಗಿ ಕೆಂಪೇರುತಿರೆ ಬರಿಗಾಲ ನಡಿಗೆ ಯನುಭಾವವನೆಂತುಳಿಸುವರೋ ಬೂಟಿನುದ್ಯೋಗಿಗಳು ? ಜಾನಿಸುವೊಡಾ ಬೂಟೆ ಪದ ಮುದ್ರೆಯಳಿಸುತಿರಲು – ವಿಜ್ಞಾನೇಶ...

ರಂಬೆ ಚಾರೂಚೀ ರಂಗೋಲೀ ಹೊಯ್ದೇವೆ ರಂಬೆ ನಿನ ಮಗಲ ಮದವೀಯೇ || ಮದವೀ ಶುದ್ದಿಕೆಲೀ ರಂಗೋಲಿ ಪತ್ರಕನ ಬರದಿದ್ದೆ || ತಂಗೀ, ಕೇಲೇ || ೧ || ತೆಂಗೂ ಲನೈಯ್ಡೂ ಹೆ(ಯೆ)ಡೆ ಕಡುದೇ || ಹೆಡ್ಯಕಡದೀ ಗುಡುಗಾರಾ ಮನೆಗೇ ಹೋಗೂ ಬೇಕೇ || ಹೋಗೂಬೇಕಂದೇಲೀ ರೋ ತೂ...

ಬರೆದವರು: Thomas Hardy / Tess of the d’Urbervilles ಮಲ್ಲಿಯು ನಡುಮನೆಯಿಂದ ಕಿರುಮನೆ : ಕಿರುಮನೆಯಿಂದ ನಡುಮನೆಗೆ ಅಲೆಯುತ್ತಿದ್ದಾಳೆ. ಕಾತರವಾಗಿ ಏನೋ ನಿರೀಕ್ಷೆಯಲ್ಲಿ ಇರುವಂತಿದೆ. ಗಳಿಗೆ ಗಳಿಗೆಗೂ ಬಾಗಿಲಿಗೆ ಬಂದು ನೋಡು ತ್ತಿದ್ದಾಳೆ. ...

ಮಾನವ ನೀನ್ನ ಬಾಳನ್ನು ನೀನು ತಿಳಿಯಲಾರದಷ್ಟು ಅಸಮರ್ಥನೆ ಬಾಳು ಮನೋರಂಜನೆ ವಲ್ಲ ನೀ ಮನಸ್ಸಿನ ಗುಲಾಮನಾಗಲು ಸಮರ್ಥನೆ ನಿನ್ನ ಬಾಳಿನ ಕಳಶದಲ್ಲಿ ಅನೇಕ ಮುತ್ತು ರತ್ನಗಳು ಅವುಗಳನ್ನು ಪಡೆಯಲು ನೀನೆಂದೂ ಮಾಡಿಲ್ಲವೆ ಪ್ರಯತ್ನಗಳು ಬಾಳಿನ ಕ್ಷಣಗಳೆಲ್ಲ ...

ಬರಬೇಕು ನಾ ನನ್ನೂರಿಗೆ ಹಾಳೂರೊ ಮಾಳೂರೊ ಏನಾದ್ರೂ ನನ್ನೂರೆ ಮುರುಕು ಛಾವಣಿಗಳೊ ಕೊರಕು ಕಲ್ಲೋಣಿಗಳೋ ಏನಾದ್ರೂ ನನ್ನೂರೆ ಅಲ್ಲೆಲ್ಲೋ ನನ್ನ ಜೀವ ಅಲ್ಲೆಲ್ಲೋ ತುಸು ತೇವ ನೆನಪಿನಂತೇನೊ ಯಾವ ಇನ್ನೂ ಕಾಡುವ ಒಂದು ಭಾವ ಗುಡ್ಡ ಬೆಟ್ಟವ ದಾಟಿ ಇಳಿದು ಕಡ...

ಬೆರೆದರೂ ಬೇರೆಂದೆ ಸಮದೂರದೊಳು ಸರಿವ ವಿಷಯಾತ್ಮಸಂಗಮಿಸುವಾನಂತ್ಯವೇ, ಸೋ೦ಕಲರಿವೇ ಕರಗಿ ನೆನವೆಂಬ ನೆರಳುಳಿಯೆ ಪ್ರತ್ಯಕ್ಷವೆನಲಾಗದಾನಂದವೇ, ಪಡಲಿಲ್ಲವೆನಲಾಗದಪರೋಕ್ಷದನುಭವವೆ, ಅರಿತಿಲ್ಲವೆನಲಾಗದಂದದರುಳೇ, ಒಲಿವಂದಮೆನ್ನೆಸಗಿ ಒಲವ ಕೊಳೆ ಕೈತೆರೆಯು...

1...789

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....