ಚಿಂತಿ ಯಾತಕ ಸಂತಿ ಯಾತಕ ಚಿತ್ತ ಚಿನುಮಯ ಓಂ ಓಂ ಬಾಳೆಹಳ್ಳಿಯ ಲಿಂಗಬಳ್ಳಿಗೆ ಲಿಂಗಗೊಂಚಲು ಓಂ ಓಂ ಮಾತು ಮುಗಿಯದು ಶಬ್ದ ಸಾಲದು ನೋಡು ಜ್ಞಾನದ ಎತ್ತರಾ ಸತ್ಯ ಶ್ರೇಷ್ಠರು ಸಾರುತಿರುವಾ ಲಿಂಗತತ್ವವೆ ಉತ್ತರಾ ವೇದ ಆಗಮ ಗೀತ ಶಾಸ್ತ್ರದ ಗಂಟು ಗದಡಿಯ ಒ...

‘ಸ್ಪಂದನ’ ಹಾಗೂ ‘ಅಭಿಮಾನ’ ದಂಥ ಒಳ್ಳೆಯ ಸಿನಿಮಾಗಳ ಮೂಲಕ ಪಿ.ಎನ್.ಶ್ರೀನಿವಾಸ್ ಕನ್ನಡ ಚಿತ್ರರಸಿಕರಿಗೆ ಪರಿಚಿತರು. ಇವತ್ತಿಗೂ ‘ಸ್ಪಂದನ’ ಚಿತ್ರದ ‘ಎಂಥಾ ಮರುಳಯ್ಯ ಇದು ಎಂಥಾ ಮರುಳು’ ಚಿತ್ರಗೀತೆ ಬಾನುಲಿಯ ಮೆಚ್ಚಿನ ಚಿತ್ರಗೀತೆ ವಿಭಾಗದ ಕಾಯಂ ಹ...

ನಾನು ನೀನು ಬೇರೆ ಏನು? ಒಲಿದು ಬೆರೆತ ಹಾಲು ಜೇನು! ಯುಗ ಯುಗಗಳ ಬಲಿದ ಆಸೆ ಜನ್ಮಾಂತರಗಳ ಪಿಪಾಸೆ ಫಲಿಸಿ ಬಂದ ಹೃದಯಂಗಮ ನಮ್ಮೆದೆಗಳ ಸಂಗಮ ೧ ಗಂಗೆ ಯಮನೆ ಕೂಡಲಿಲ್ಲ ಕರಿದು ಬಿಳಿದು ಬೆರೆಯಲಿಲ್ಲ ನಾನು ನೀನು ಬೇರೆಯಲ್ಲ ಅತುಲವೀ ಸಮಾಗಮ ೨ ಆಕಾಶದ ಚಿ...

ಬಗೆಬಗೆಯ ಬಗೆಗಳ ಹಗೆಯಲ್ಲಿ ಬಗೆಹರಿಯದಾಗಲು ನಿನ್ನ ನಗೆಮೊಗದ ಮುಖಾಂತರ ನಿನ್ನೆದೆಯ ಗೂಡುಸೇರುವುದು ನನ್ನ ಆಶೆ. ಎಂತೆಂತಹ ಚಿಂತೆಗಳ ಸಂತೆಯಲ್ಲಿ ಹಾದಿ ದೊರೆಯದಾಗಲು ನಿನ್ನ ಭವ್ಯ ಮುಖದ ಮುಖಾಂತರ ನಿನ್ನ ಭವಿಷ್ಯದ ಮುಗಿಲಲ್ಲಿ ಹಾರುವುದು ನನ್ನ ನಿರಾಶ...

“ಕಣ್ಣಿಗೆ ರೆಪ್ಪೆ ರಕ್ಷೆ. ಹೃದಯಕ್ಕೆ ಎಲುಬಿನ ರಕ್ಷೆ? ನಮಗೇನು ರಕ್ಷೆ? ಎಂದು ಕೇಳಿದ ಓರ್ವ ಶಿಷ್ಯ. ಗುರುಗಳೇ! ನೀವು ಹೇಳುವ ಮುನ್ನ ನಾನು ಹೇಳಲೇ? ಎಂದ ಮತ್ತೊರ್ವ ಶಿಷ್ಯ. “ಹೇಳು ಶಿಷ್ಯಾ! ಎಂದಾಗ, “ಗುರು ರಕ್ಷೆ, ದೈವ ರಕ್ಷೆ” ಎಂದ. ಮತ್ತೇ ಗುರ...

ಅಪ್ಪದಿನ, ಅಮ್ಮದಿನ, ಮಣ್ಣದಿನ, ನೀರದಿನ ತಪ್ಪುಗಳೆಮ್ಮದೆಷ್ಟೊಂದು? ವರುಷದೆಲ್ಲ ದಿನವನು ಬೆಪ್ಪುತನದೊಳದ್ದೂರಿಯೊಳಾಚರಿಪೆವಲಾ ಚಪ್ಪರಿಸೆ ಮೂಳೆ ಮೂಳ್ಳನು ಬಾಯಿ ಕತ್ತರಿಸೆ ಬಪ್ಪ ರಕುತವ ನೆಕ್ಕುತಲಿ ನಲಿವವೊಲ್ – ವಿಜ್ಞಾನೇಶ್ವರಾ *****...

ಮುಟ್ಟಳಕಂಚಮ್ಮಾ ಮನ್ಯಾ ತಳುವನ ಬಿಟ್ಟೀ ನಡ್ದಳೇ ಗಾರಾಹೂಳಿಗಿನ್ನೂ ಸುವ್ವೇ ಹರ್‍ವಾನದೀಗೂಳಾ ಮುಳ್ಕೀ ಸಾನಮಾಡೀ ಕನ್ನಿಯೋರಿಗೆ ಕಯ್ಯಾ ಮುಗಿದಳೆ ಸುವ್ವೇ ||೧|| ಕನ್ನಿಯೋರಿಗ್‌ ಕಯ್ಯಾ ಯೇನೇಳಿ ಮುಗೀದಳೇ “ಸಂಜೀಲೀ ಕೊಡು ಸ್ವಾಮೀ ಮುಂಜಾಲೀ ವಯ...

ಮಾರನೇ ದಿನ ನಗರಕ್ಕೆ ಹೊರಟು ನಿಂತೆವು. ನಾನು ಹುಸೇನ್ ಹಳೆ ಬೈಕ್ ಮೇಲೆ ಹೊರಟೆ. ಟೀಚರಮ್ಮ – ನಗರದಲ್ಲಿ ಏನೋ ಕೆಲ್ಸ ಇದೆ ಅಂತ ಹೇಳಿ ಶಾಲೆಗೆ ರಜಾ ಹಾಕಿ ಬಸ್ನಲ್ಲಿ ಹೊರಟಿದ್ದರು. ನಗರದ ಬಸ್ ಸ್ಟಾಂಡಿನಲ್ಲಿ ಭೇಟಿ ಆಗೋದು, ಅಲ್ಲಿ ಬೈಕ್ ನಿಲ್...

ಬದುಕಿ ನಾಳದಲಿ ಮನಸೊಂದೇ ಮಿತ್ರ ಬದುಕಿನಲ್ಲಿ ಬಾಳಿರಳಿ ಮನವೂ ಪವಿತ್ರ ಇನ್ನೊಂದು ಬೇಡದಿರಲಿ ಇಂದ್ರಿಯಗಳು ಇನ್ನೊಂದು ಕಾಡದಿರಲಿ ಭಾವೇಂದ್ರಿಯಗಳು ದೇವರೆ ನಮಗೆ ಜಿವ್ಹೆ ನೀಡಿದ ನಲ್ಲವೆ! ನಮ್ಮ ದನಿಗಳು ಕೇಳಲಾರನೇನು! ಕಣ್ಣುಗಳು ದೇವರು ಪ್ರಧಾನಿಸದನ...

ಇವರು ಗಾಳಿಗುದುರೆಯೇರಿ ಸವಾರಿ ಹೊರಟವರು ಕೈಗೆಟುಕದ ಆಕಾಶವ ಸವರಲೆತ್ನಿಸಿದವರು ಸಾಧನೆಯ ಹಿಂದೆ ಬಿದ್ದು; ಎದ್ದು ಕನಸು ಹೆಣೆದವರು ಗುರಿಯೊಂದೇ ನೆಲೆಯಾಗಿ ಲಕ್ಷ ಆಸೆಗಳ ಅಲಕ್ಷ್ಯವಾಗಿಸಿದವರು ಬೆಳಕಿನ ಕೊನೆಯಲಿ ಬಂದ ಅಂಧಕಾರದ ಹೊಡೆತಕ್ಕೆ ಮರುಗಿದವರು...

1...5354555657...110

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...