ಎನ್ನ ತುಂಬಿದ ಬದುಕು ಭವ್ಯವಾಗಿರಲಿ
ಅದರಲಿ ಬರುಕು ಕಾಣದಿರಲಿ
ಆಡಂಬರ ಜನ ನಿಂದೆ ಇಣಕದಿರಲಿ
ಹರಿನಾಮದ ಮಾರ್ದವತೆ ತುಂಬಿರಲಿ
ಶುದ್ಧ ಆಲೋಚನೆ ಮನಕೆ ಮುಡಿಸಿರಲಿ
ಮನವು ಶುದ್ಧವಾಗಿ ತನಕೆ ತೊಡಿಸಿರಲಿ
ಕಾಮ ಕ್ರೋಧಗಳಿಂದ ದೂರವಿರಲಿ
ಜಗವೆಲ್ಲ ತನ್ನದೆಯ ಭಾವ ಇರಲಿ
ಕಷ್ಟ ಸುಖ ಸಮವೆಂಬ ನೀತಿ ಇರಲಿ
ಎಲ್ಲರಲ್ಲೂ ದೇವರನ್ನು ಕಾಣುತ್ತಿರಲಿ
ಸತ್ಯ ಶಾಂತಿ ಆಭರಣ ಧರಿಸಿರಲಿ
ದಿವ್ಯ ಚೇತನದಿ ಬೆಳಗುತ್ತಿರಲಿ
ಸರ್ವರ ಹಿತವೇ ತನ್ನದಾಗಿರಲಿ
ನಿರಭಾವ ನಿರಾಸಕ್ತಿ ತಾ ಹೊಂದಿರಲಿ
ಭಗವತ್ ದರ್ಶನಕ್ಕೆ ಚಡಪಡಿಸುತ್ತಿರಲಿ
ಮಾಣಿಕ್ಯ ವಿಠಲನಿಗೆ ಮೀಸಲಾಗಿರಲಿ
*****
















