ಜೀವನದ ಮುಸ್ಸಂಜೆಯಲಿ ಜವಾಬ್ದಾರಿಗಳೆಲ್ಲವ ಕಳೆದು ನಾವೇ ನಾವಾಗಿರಬೇಕೆಂದು ನಾವೇ ಕಟ್ಟಿದ ಗೂಡಲ್ಲಿ ನೆಲೆಯೂರಿದಾಗ ನಮ್ಮನ್ನು ನಾವು ಕಳಕೊಂಡಿದ್ದೆವು. ಎದುರಿಗಿದ್ದ ಮರುಭೂಮಿಯಲಿ ಹುಡುಕಹೊರಟಾಗ ಸಿಕ್ಕಿದ್ದೆಲ್ಲ ಬರೆ ಮರುಳು! ಪ್ರೀತಿಯ ಹಸಿರಿರಲಿಲ್ಲ...

ಯಾಕೆನ್ನ ಕಾವ್ಯ ಹೊಸ ಮಿಂಚಿರದೆ ಬರಡಾಯ್ತು ? ಯಾಕಾಯ್ತು ದೂರ ವೈವಿಧ್ಯ ನಾವೀನ್ಯಕ್ಕೆ ? ಹೊಸ ಕಾಲಗತಿಗೆ ಧೋರಣೆಗೆ ಶ್ರುತಿಗೊಡದಾಯ್ತು, ಹೊಸ ಶೈಲಿ ತಂತ್ರ ಗಮನಿಸಲಿಲ್ಲ ಯಾತಕ್ಕೆ ? ಇಂದಿಗೂ ಹಿಂದಿನಂತೊಂದೆ ಥರ ಹಾಡುವುದು. ಹೊಸ ಕಾಣ್ಕೆಗೂ ಹಳೆಯ ಮಾ...

ಶಾಪಗಳ ಸುಳಿಯಲ್ಲಿ “ಛೇ ಎಂತಹ ಕೆಲಸವಾಯಿತು ನಾನಲ್ಲಿಗೆ ಹೋಗಬಾರದಿತ್ತು ಎಂದೂ ಮಾತಾಡದ ಮಂಡೋದರಿ, ಈ ದಿನ ಇಷ್ಟೊಂದು ಮಾತಾಡಿದಳಲ್ಲ. ಈ ಹೆಂಗಸರೇ ಇಷ್ಟು! ಅಸೂಯೆಗೆ ಮತ್ತೊಂದು ಹೆಸರು, ಗಂಡನಾದವನು ಅವಳ ಕಣ್ಣೆದುರಿಗೆ ಹೇಳಿದಂತೆ ಕೇಳಿಕೊಂಡು ...

ನಿನ್ನ ಕಣ್ಣ ಹನಿ ನನ್ನ ಮನಕೊರೆದು ತತ್ತರಿಸಿ ಬಿಡುವುದಮ್ಮ ಬೇಡ ಹಾಕದಿರು, ತಡೆದು ಹಿಡಿತಾಯಿ ಕಣ್ಣೀರ ಮುತ್ತನಮ್ಮ ಒಂದೆ ಹೊಟ್ಟೆಯಲಿ ಹುಟ್ಟ ಬಹುದಿತ್ತು ಎಂತೊ ತಪ್ಪಿತಕ್ಕ ಆದರೇನು ನಾವಣ್ಣ ತಂಗಿಯರು ಆಗಿ ಇರುವದಕ್ಕ ಹುಟ್ಟಿನಲ್ಲೇನು ಇಹುದು ತಂಗಿ ...

ಗಾಳಿಯ ಪಟದಂತೆ ಸಂಸಾರ ಮೇಲೆ ಹಾರಲು ಬೇಕು | ಸೂತ್ರದ ದಾರ ಎರಡೂ ಬದಿಯಿಂದ | ಎಳೆಯ ಸೇರಿಸಿ ಸಮ ಗಂಟು ಹಾಕಿದರೆ | ಸೂತ್ರವು ಸಿದ್ದ ಗಂಡು-ಹೆಣ್ಣು ಸೇರಿಸಿ ಬ್ರಹ್ಮಗಂಟು ಬೆಸೆಯಲು ಅದುವೇ | ಕುಟುಂಬ ಸಿದ್ದ ಸೂತ್ರದ ಗಂಟು | ಭದ್ರವಾಗಿರಲಷ್ಟೇ ಸುಸೂತ...

‘ಕವಿತೆ ಹುಟ್ಟಿತೇ?’ ಜೀವ ಬಾಯಾಗಿ ಕಾತರದ ಕಣ್ಣಾಗಿ ಸುಕೋಮಲ ರೇಷಿಮೆಯ ಹುಳು ಒದ್ದಾಡುತ್ತಿದೆ ಮುಲುಗುಟ್ಟುತ್ತಾ ನಿರ್ವಾತದ ಗೂಡಿನೊಳಗೇ ಸುಡು ನೀರ ಕಾವಿಗೆ. ದಾರದೆಳೆ ಎಳೆ ಮೂಡಲು, ಬೇರ್ಪಡಬೇಕು ತನುವಿಗಂಟಿದ ತೊಗಲು, ಇನ್ನೆಷ್ಟು ಕು...

(‘ಗೌರಿಲಂಕೇಶ್ ಪತ್ರಿಕೆ’ಯಲ್ಲಿ ‘ದೇಶಕಾಲ’ ನಿಯತ ಕಾಲಿಕ ಕುರಿತು ನಡೆಯುತ್ತಿದ್ದ ವಾಗ್ವಾದದ ಸಂದರ್ಭದಲ್ಲಿ ಅದೇ ಪತ್ರಿಕೆಗೆ ಬರೆದ ಲೇಖನ) ‘ದೇಶಕಾಲ’ ನಿಯತಕಾಲಿಕವನ್ನು ಕುರಿತ ವಾಗ್ವಾದಗಳಿಗೆ ಪ್ರತಿಕ್ರಿಯಿಸುವುದು ನನ್ನ ಉದ್ದೇಶವಲ್ಲವೆಂದು ಮೊದಲೇ...

ಮರಳಿ ಯತ್ನವ ಮಾಡು! ಮರಳಿ ಯತ್ನವ ಮಾಡು! ತೊರೆಯದಿರು ಮೊದಲು ಕೈ ಗೂಡದಿರಲು. ಹಿರಿದು ಧೈರ್‍ಯವ ಹಾಳು! ತೊರೆಯದಿರು, ತೊರೆಯದಿರು! ಮರಳಿ ಯತ್ನವ ಮಾಡು, ಸಿದ್ಧಿಸುವುದು. ಒಂದು ಸಲ ಕೆಟ್ಟುಹೋ ಯ್ತೆಂದು ನೀ ಅಂಜದಿರು ಕುಂದಿಲ್ಲ. ಕೈಗೂಡ -ದನಿತರಿಂದ ನ...

1...45678...14

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...