ಸ್ಥಿರ ಪ್ರಯತ್ನ

ಮರಳಿ ಯತ್ನವ ಮಾಡು!
ಮರಳಿ ಯತ್ನವ ಮಾಡು!
ತೊರೆಯದಿರು ಮೊದಲು ಕೈ
ಗೂಡದಿರಲು.

ಹಿರಿದು ಧೈರ್‍ಯವ ಹಾಳು!
ತೊರೆಯದಿರು, ತೊರೆಯದಿರು!
ಮರಳಿ ಯತ್ನವ ಮಾಡು,
ಸಿದ್ಧಿಸುವುದು.

ಒಂದು ಸಲ ಕೆಟ್ಟುಹೋ
ಯ್ತೆಂದು ನೀ ಅಂಜದಿರು
ಕುಂದಿಲ್ಲ. ಕೈಗೂಡ
-ದನಿತರಿಂದ

ನೊಂದು ಕೊಳ್ಳದೆ ಮರಳಿ
ಮುಂದೆ ಯತ್ನವ ಮಾಡು,
ಸಂದೇಹವಿಲ್ಲದದು
ಸಿದ್ಧಿಸುವುದು.

ಕೆಲಸವಿದು ಕಷ್ಟವೆಂ
ದಳುಕಿ ಬಿಡದಿರು, ಮಾಡು,
ಫಲಗಳನ್ನು ಕೊಡುವುದದು
ಕೊನೆಗೆ ನಿನಗೆ.

ಸುಲಭವಹದಾ ಕೆಲಸ
ಫಲಿಸುವುದು, ಹುಲಿಸುವುದು
ನೆಲೆಗೆಡದೆ ಯತ್ನವನು
ಮಾಡು, ಮಗುವೇ!
*****
(ಕವಿಶಿಷ್ಯ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನು ಸಾವಯವವೋ ? ಅವರಿವರಿಗಾಗಿ ದುಡಿಯುತಿರೆ
Next post ದೇಶಕಾಲದ ಸಾಂಸ್ಕೃತಿಕ ರಾಜಕೀಯ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…