ಗಾಳಿಯ ಪಟದಂತೆ
ಸಂಸಾರ
ಮೇಲೆ ಹಾರಲು ಬೇಕು |
ಸೂತ್ರದ ದಾರ
ಎರಡೂ ಬದಿಯಿಂದ |
ಎಳೆಯ ಸೇರಿಸಿ
ಸಮ ಗಂಟು ಹಾಕಿದರೆ |
ಸೂತ್ರವು ಸಿದ್ದ
ಗಂಡು-ಹೆಣ್ಣು ಸೇರಿಸಿ
ಬ್ರಹ್ಮಗಂಟು
ಬೆಸೆಯಲು ಅದುವೇ |
ಕುಟುಂಬ ಸಿದ್ದ
ಸೂತ್ರದ ಗಂಟು |
ಭದ್ರವಾಗಿರಲಷ್ಟೇ
ಸುಸೂತ್ರವಾಗಿ |
ಹಾರಾಡುವುದು ಗಾಳಿಪಟ
ಬ್ರಹ್ಮಗಂಟು ಬೆಸೆದಿರುವವರೆಗೂ |
ಅಡೆ ತಡೆ ಇಲ್ಲದೆ
ಸಾಗುವುದು ದಾಂಪತ್ಯ
*****