ನಮ್ಮ ಶತ್ರುವು ನಮಗೆ ಕಾಣುತ್ತಿಲ್ಲ ವಿಜಯವು ಹೇಗೆ…. ಇನ್ನು ವಿಜಯವು ಹೇಗೆ? ಕಾಣುವ ದಾರಿ ಕಂಡರೂ ತುಳಿಯುತ್ತಿಲ್ಲ ಮಾತುಗಳೇಕೆ…. ಇನ್ನು ಭವಿಷ್ಯ ಹೇಗೆ? //ಪ// ಭೂಮಿಗೆ ಇಲ್ಲ ಬರ; ಆದರೂ ಕೊಳೆಗೇರಿಗಳು ನದಿಗಳಿಗಿಲ್ಲ ಬರ; ಆದರೂ ಹೋರ...

ನನ್ನಮ್ಮ ಬಂದಳು ನನ್ನಪ್ಪ ಬಂದರು ನನ್ನಣ್ಣ ತಮ್ಮದಿರು ನನ್ನಕ್ಕ ತಂಗೇರು, ನನ್ನವರು ಬಂದರೆಂದು ಸಂಭ್ರಮ ಪಡುವಂಗಿಲ್ಲ ಸ್ವತಂತ್ರವಾಗಿ ಒಂದು ಕರ್ರಂದು ಬೆಳ್ಳಂದು ಮಾಡಿಡುವಂಗಿಲ್ಲ ಕಷ್ಟ, ನಷ್ಟ ಅಂದರೆ ಕೈಲಾದ್ದ ಮಾಡುವಂಗಿಲ್ಲ ಆದರೂ… ಈ ಮನೆ,...

ಆಶೆ ಬಿಡು ಎಂದ ಬುದ್ಧ ಏನು ಮಾಡಲಿ ನಾನಿಲ್ಲ ಸಿದ್ಧ. ಬಯಸದೆ ಹುಟ್ಟಿ ಬಂದೆ ಬಯಕೆಯ ಬುಟ್ಟಿಯಾದೆ ಬುಟ್ಟಿಯನ್ನೇ ನೆಚ್ಚಿಕೊಂಡೆ ಗಂಡ ಮಕ್ಕಳ ಹಚ್ಚಿಕೊಂಡೆ ಬದುಕನ್ನ ಒಪ್ಪಿಕೊಂಡೆ ಬೆಂಕಿಯನ್ನ ಅಪ್ಪಿಕೊಂಡೆ ಆಶೆ ಬಿಡು ಎಂದ ಬುದ್ಧ ಏನು ಮಾಡಲಿ ನಾ ಬದ್ಧ...

“ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?” ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. “ಥೂ ಗುಬ್ಬಿ, ಮಲ್ಲಾಡದಾಗ ನಿನಗಿನ್ನೂ ಮಳೀನ ಆಗಿಲ್ಲ! ಸುಳ್ಳಽ ಇಲ...

ಗುಡ್ಡ-ಬೆಟ್ಟ ಸಾಲು-ಸಾಲೇ-ಸಾಲು ಗಗನಚುಂಬಿ ಕೊಡಚಾದ್ರಿಯಲಿ ಮನತಣಿಯೇ ಕೈಬೀಸಿ ಕರೆತಿಹವು ಎತ್ತರೆತ್ತರ ಮರ-ಗಿಡ ಕಣ್ಮನಕೆ ಕಾನು-ಕಂಪು ಕರಿ ಕಲ್ಲು ಗರ್ಭದಲಿ ಚಿಮ್ಮುವ ಜಲಧಾರೆಯಲಿ ಬೀಸುವ ತಂಗಾಳಿ ಮನಕೊಂದು ಉನ್ಮತ್ತಹಿತವು ನೇಸರನುದಯದಿ ಪಳ-ಪಳನೆ ಹೊ...

ಹಕ್ಕಿಯೊಂದು ಹಾರುತ್ತಿತ್ತು. ಮೇಲೆ ಮೇಲೆ ಏರುತ್ತಿತ್ತು ಇಹವ ಮರೆತು ನಲಿಯುತ್ತಿತ್ತು ಸ್ವಚ್ಛಂದವಾಗಿ ತೇಲುತ್ತಿತ್ತು. ಗಿಡುಗನೊಂದು ನೋಡುತ್ತಿತ್ತು ಹಿಡಿಯಲೆಂದು ಹೊಂಚುತ್ತಿತ್ತು ಹಿಂದೆ ಹಿಂದೆ ಅಲೆಯುತ್ತಿತ್ತು ಮೇಲೆರಗಲು ಕಾಯುತ್ತಿತ್ತು. ಹಕ್ಕ...

ಸತ್ತಾಗ ನಾನು ಜಗಕೆಚ್ಚರವ ಸಾರುವುದು ಗಂಟೆಯ ವಿಷಣ್ಣ ದನಿ : “ಕೀಳುಲೋಕವಿದನ್ನು ಬಿಟ್ಟು ಓಡಿದ ತುಚ್ಛ ಕ್ರಿಮಿಜೊತೆ ಇರಲು” ಎಂದು; ದುಃಖಪಡಬೇಕಿಲ್ಲ ನೀನು ಈ ಸಾಲನ್ನು ನೋಡಿದರು ಸಹ; ಇವನು ಬರೆದಿಟ್ಟ ಕೈಯನ್ನು ನೆನೆಯಬೇಕಿಲ್ಲ ; ನೆನ...

ಅಕ್ಷಯತದಿಗೆ ಅಕ್ಷಯತದಿಗೆಯ ಪವಿತ್ರದಿನದಂದು ಲಂಕೆಯ ದೇವಾಲಯಗಳಲ್ಲಿ ವಿಶೇಷ ಪೂಜೆ, ಲಂಗೇಶ್ವರನಾದ ರಾವಣನ ಹೆಸರಿನಲ್ಲಿ ಹವನ, ಹೋಮ ಅರ್ಚನೆಗಳು ನಡೆದವು. ಅರಮನೆಗೆ ಅಂಟಿಕೊಂಡಿದ್ದ ಶಿವಮಂದಿರದಲ್ಲಿ ಶಿವಭಕ್ತರಾವಣೇಶ್ವರನು ಶ್ರದ್ಧಾಭಕ್ತಿಯಿಂದ ಪರಮೇಶ...

1...7891011...16

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....