ಮರಳಿ ಬಾರೆ ಪ್ರಕೃತಿ ಮಾತೆ ಮರಳಿ ತೋರೆ ನಿನ್ನನು ನಾವು ಸಿಡಿದು ಹೋಗುವ ಮುನ್ನ ಪಾರು ಮಾಡೆ ನಮ್ಮನು ಹಕ್ಕಿ ಹಾಡು ಕೇಳಬೇಕಿದೆ ಅದಕೆ ಕಿವಿಗಳು ಕಾದಿವೆ ಗುಬ್ಬಿ ಗೂಡು ಕಟ್ಟಬೇಕಿದೆ ಅದಕೆ ಹೃದಯ ತೆರೆದಿವೆ ಗಾಳಿ ಕೊಳಲ ನೂರು ಸ್ವರಕೆ ಅಬ್ಬರದ ಮನ ಜಾರ...

ನಾವು ಮೋಹಿಸುತ್ತೇವೆ, ಏಕೆಂದರೆ ನಮಗೆ ಮೋಹಿಸುವುದೇ ಒಂದು ತೆವಲು ಬದುಕ ಮೋಹಿಸುತ್ತೇವೆ ಬದುಕಲು ಮೋಹಿಸುತ್ತೇವೆ, ಮೋಹದಿಂದಲೇ ಉಸಿರು ಅದರಿಂದಲೇ ಬಸಿರು ಅದಿಲ್ಲದ ನೆಲಕ್ಕಿಲ್ಲವೇ ಇಲ್ಲ ಹಸಿರು ಬರೆಯುವುದನ್ನು ಮೋಹಿಸದೇ ಹಡೆಯುವುದು ಹೇಗೆ? ಅಕ್ಷರ ಮ...

ಭದ್ರಶೆಟ್ಟಿ ನಾಲ್ಕಾರು ಜನ ಅಣ್ಣತಮ್ಮಂದಿರೊಡಗೂಡಿ, ಸಂತೆ ಸಾರಿಗೆ ವ್ಯಾಪಾರ ಮಾಡಿ ಹೇಗೆ ಹೇಗೋ ದುಡ್ಡು ದುಡಿಯುತ್ತಿದ್ದ. ಘಟ್ಟದ ಕೆಳಗೆ ಹೋಗಿ, ಹೊನ್ನಾವರ-ಕುಮ್ಮಟ ಇಲ್ಲೆಲ್ಲ ಸಾರಿಗೆ ಮಾಡಿಯೂ ಜೀವನ ಸಾಗಿಸಿದ್ದ. ಬಯಲುಸೀಮೆಗೂ, ಭತ್ತ, ಅಕ್ಕಿ ವ್ಯ...

ಈ ನೆಲದ ಗಾಳಿ ನೀರು ಬೆಳಕು ತೊಗೋಳ್ಳಾಕ ನಮಗ ಹಕ್ಕೈತಿ ಹರಿತ ಮಾತುಗಳೆಂಬಲಗಿನ್ಯಾಗ ಹೃದಯವನ್ಯಾಕ ತಿವಿತೀರಿ ನಾವೇನಾದ್ರು ಅಂದ್ರ ತಡ್ಕೊಳ್ಳಕಾಗದೆ ಕಾಲಾಗ ಹೊಸಕಿ ನಮ್ಮ ಸೊಲ್ಲ ಇಲ್ದಾಂಗ ಮಾಡ್ತಿರಿ ಇದರಾಗ ಸ್ವರ್‍ಗ ಕಾಣ್ತೀರಿ ತನ್ನ ಮೂಲವನ್ನರಿಯಲಾರ...

ನೂತನ ವಧುವಿಗೆ ತಾಯಿಯ ಆದೇಶ ಸೇರಿದ ಮನೆಯನ್ನು ನಿರಂತರವಾಗಿ ಬೆಳಗು ಅತ್ತೆಯ ಬಯಕೆಯೂ ಅದೇ ಆಗಿದ್ದು ಬೀಳುತ್ತಿದ್ದವು ಹತ್ತಾರು ಪಾತ್ರೆ ಕಡಾಯಿ *****...

ತ್ಯಾಗಮೂರ್ತಿ ಮೇರುವ್ಯಕ್ತಿ ಶ್ರೀ ಬಾಹುಬಲಿಗೆ ವಂದನೆ. ಜಗದ ಸುಖವ ತ್ಯಜಿಸಿ, ವ್ಯಾಮೋಹವೆಲ್ಲ ಅಳಿಸಿ ಮುಗಿಲೆತ್ತರಕೆ ಏರಿನಿಂತ ಸ್ಥಿತಪ್ರಜ್ಞಗೆ ವಂದನೆ! ದಯಾಮಯಿ ಮಹಾತಪಸ್ವಿ ಸಾಕ್ಷಾತ್ಕರಿಸಿಕೊಂಡ ಜೀವನ ದರ್ಶನ ನಿತ್ಯ ಸತ್‌ಚಿಂತನ; `ಅಹಿಂಸಾ ಪರಮೋ...

ಬಂಡೆದ್ದ ಶಕ್ತಿಗಳು ಸುತ್ತ ಮುತ್ತಿದ ನನ್ನ ಪಾಪಭೂಮಿಯ ನಡುವೆ ನಿಂತ ಬಡ ಆತ್ಮವೇ, ಬಳಿದು ಹೊರಗೋಡೆಗೆ ಅಂಥ ಚಂದದ ಬಣ್ಣ ಒಳಗೊಳಗೆ ಕೊರತೆ ಅನುಭವಿಸಿ ನವೆಯುವೆ ಏಕೆ ? ಈ ಮಹಲೊ ನಾಲ್ಕು ದಿನದಲ್ಲೆ ಕುಸಿಯುವ ಮಾಟ, ಇಂಥ ಬಲು ತುಟ್ಟಿ ಸಿಂಗಾರ ಯಾತಕೆ ಇದ...

ಶಾಂತವೀರಸ್ವಾಮಿಗಳ ಆತಿಥ್ಯ ರಂಗಣ್ಣನಿಗೆ ವರ್ಗವಾಗಿರುವ ಸಂಗತಿ ರೇಂಜಿನಲ್ಲಿ ಪ್ರಚಾರವಾಯಿತು. ಆವಲಹಳ್ಳಿಯ ದೊಡ್ಡ ಬೋರೇಗೌಡರೂ ರಂಗನಾಥಪುರದ ಗಂಗೇಗೌಡರೂ ಬಂದು ಮಾತನಾಡಿಸಿದರು. `ವರ್ಗದ ಆರ್ಡರನ್ನು ರದ್ದು ಪಡಿಸಲು ಪ್ರಯತ್ನ ಪಡೋಣವೇ’- ಎಂದು...

ಹೊಟ್ಟೆಪಾಡಿಗೆ ದೂರದೇಶ ತಿರುಗಿ ಮಿಠಾಯಿ ಮಾರಿ ಮಕ್ಕಳಿಗೆ ಕಥೆ ಹೇಳಿ ನಗಿಸಿ ಅವರೊಳಗೆ ನನ್ನ ಕಂಡು ಮಗಳು ಹೇಗಿದ್ದಾಳೋ ಎಂದಂದು ಕರುಳು ಕತ್ತರಿಸಿದನುಭವಕೆ ಕಣ್ಣೀರು ಸುರಿಸಿ ಭಾವನೆಗಳನ್ನೊತ್ತಿ ಗಂಟಲು ಬಿಗಿದದ್ದು… ಅದೊಂದು ಸುಂದರ ಬೆಳಗು ನ...

1...678910...183

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...